ಬಿಡಿಸಿಸಿ ಬ್ಯಾಂಕ್​ನಿಂದ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ

9
Published on

ಶಾಸಕ ಶರತ್​ ಬಚ್ಚೇಗೌಡ ಹೇಳಿಕೆ, ರಾಷ್ಟ್ರೀಕೃತ ಬ್ಯಾಂಕ್​ಗಳಿಗಿಂತ ಸುಲಭ ವ್ಯವಹಾರ

ನಂದಗುಡಿ: ಬಿಡಿಸಿಸಿ ಬ್ಯಾಂಕ್​ ರಾಷ್ಟ್ರೀಕೃತ ಬ್ಯಾಂಕ್​ಗಳಿಗಿಂತ ಸುಲಭವಾಗಿ ಸಾಲ ಸೌಲಭ್ಯ ನೀಡುತ್ತಿದ್ದು, ರೈತರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಶಾಸಕ ಶರತ್​ ಬಚ್ಚೇಗೌಡ ತಿಳಿಸಿದರು.

ಹೊಸಕೋಟೆ ತಾಲೂಕಿನ ನಂದಗುಡಿಯಲ್ಲಿ ಬೆಂಗಳೂರು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ನೂತನ 42ನೇ ಶಾಖೆ ಉದ್ಘಾಟಿಸಿ ಮಾತನಾಡಿದ ಅವರು, ಬೆಂಗಳೂರಿಗೆ ಕೂಗುಳತೆ ದೂರದಲ್ಲಿರುವ ಹೊಸಕೋಟೆ ತಾಲೂಕಿನಲ್ಲಿ ಯಾವುದೇ ರೀತಿಯ ಶಾಶ್ವತ ನೀರಿನ ಸೆಲೆ ಇಲ್ಲದ ಕಾರಣ 1,200 ಅಡಿ ಕೊಳವೆ ಬಾವಿ ಕೊರೆಸಿ ನೀರು ತೆಗೆಯುವುದು ಅನಿವಾರ್ಯವಾಗಿದೆ. ಹೀಗಾಗಿ ಅನಗೊಂಡನಹಳ್ಳಿ ಹಾಗೂ ಜಡಿಗೆನಹಳ್ಳಿ ಹೋಬಳಿ ಕೆರೆಗೆ ಏತ ನೀರಾವರಿ ಯೋಜನೆ ಮಾಡಿ ಕೆರೆಗಳಿಗೆ ನೀರು ಹರಿಸಲಾಗುತ್ತಿದೆ. ಉಳಿದಂತೆ ನಂದಗುಡಿ ಹಾಗೂ ಸೂಲಿಬೆಲೆ ಕೆರೆಗಳಿಗೆ ಎಚ್​ಎನ್​ ವ್ಯಾಲಿ ಮೂಲಕ ನೀರು ಹರಿಸಲು ಡಿ.ಕೆ.ಶಿವಕುಮಾರ್​ ಹಸಿರು ನಿಶಾನೆ ತೋರಿದ್ದು, ಮುಂದಿನ ಸಚಿವ ಸಂಪುಟದಲ್ಲಿ 1,500 ಕೋಟಿ ರೂ. ಅನುದಾನದೊಂದಿಗೆ ಒಂದುವರೆ ವರ್ಷದಲ್ಲಿ ಕಾಮಗಾರಿ ಪೂರ್ಣಗೊಳಿಸಿ ನೀರು ಹರಿಸಲಾಗುವುದು ಎಂದು ಹೇಳಿದರು. ಇದರ ನಡುವೆ ಕೃಷಿ ಹೈನುಗಾರಿಕೆಯಿಂದ ನಮ್ಮ ಭಾಗದ ರೈತರು ಹೆಚ್ಚಿನ ಆದಾಯ ನಿರೀೆಯಲ್ಲಿದ್ದು, ನೀರಾವರಿ ಯೋಜನೆ ಸಾಕಾರಗೊಂಡರೆ ಮತ್ತಷ್ಟು ಪ್ರಗತಿ ಸಾಧಿಸಲಿದ್ದಾರೆ.

ರೈತರ ಅಭ್ಯುದಯಕ್ಕೆ ಬಿಡಿಸಿಸಿ ಬ್ಯಾಂಕ್​ ಸುಲಭ ಸಾಲದ ಮೂಲಕ ಮತ್ತಷ್ಟು ಸಹಕಾರ ನೀಡಲು ಮುಂದಾಗಿದೆ ಎಂದು ಶಾಸಕ ಬಚ್ಚೇಗೌಡ ತಿಳಿಸಿದರು. ಜಿಪಂ ಮಾಜಿ ಅಧ್ಯೆ ಸವಿತಾ ಗೋಪಾಲ್​, ಮಾಜಿ ಸದಸ್ಯ ಕಲ್ಲಪ್ಪ, ಗ್ರಾಪಂ ಅಧ್ಯೆ ಮುನಿವೆಂಕಟಮ್ಮ ಬಚ್ಚಪ್ಪ, ಸದಸ್ಯ ವೀರರಾಜ್​, ಎಸ್​ಎಫ್​ಸಿಎಸ್​ನ ಅಧ್ಯಕ್ಷ ನಾರಾಯಣಗೌಡ, ಶಂಕರನಾರಾಯಣ್​, ಉಪಾಧ್ಯೆ ವಿನುತಾ ಕಲ್ಕೆರೆ ಕೆ.ಎಸ್​.ಮಹದೇವಯ್ಯ, ಉದ್ಯಮಿ ಮಂದೀಪ್​ಗೌಡ ನಿರ್ದೇಶಕ ಎನ್​.ಡಿ.ರಮೇಶ್​, ಧಮೇರ್ಶ್​, ಚಂದ್ರಪ್ಪ, ನಾರಾಯಣಸ್ವಾಮಿ, ದಿನೇಶ್​, ನಂದಗುಡಿಯ ಎಲ್ಲ ಎಂಪಿಸಿಎಸ್​ನ ಅಧ್ಯಕ್ಷರು, ಕಾರ್ಯನಿರ್ವಹಣಾಧಿಕಾರಿಗಳು ಮತ್ತು ನಂದುಗುಡಿ ಬಿಡಿಸಿಸಿ ಬ್ಯಾಂಕ್​ ಸಿಬ್ಬಂದಿ ಇದ್ದರು.

ಬಿಡಿಸಿಸಿ ಬ್ಯಾಂಕ್​ ರೈತಪರ ಬ್ಯಾಂಕ್​ ಆಗಿದ್ದು, ಬೆಳೆಸಾಲ, ಆಭರಣ ಸಾಲ, ಮನೆ ಕಟ್ಟಲು, ನಿವೇಶನ ಕೊಳ್ಳಲು, ಹಾಲು ಉತ್ಪಾದಕರು ಹಾಗೂ ಸ್ತ್ರೀ ಶಕ್ತಿ ಸಂಗಳ ಮೂಲಕ ಕಡಿಮೆ ಬಡ್ಡಿ ದರದಲ್ಲಿ ಸಾಲ ವಿತರಣೆ ಮಾಡುತ್ತಿದ್ದೇವೆ. ಆದ್ದರಿಂದ ಉಳ್ಳವರು ರಾಷ್ಟ್ರೀಕೃತ ಬ್ಯಾಂಕ್​ಗಳಲ್ಲಿ ಠೇವಣಿ ಇಡುವ ಬದಲಾಗಿ ಬಿಡಿಸಿಸಿ ಬ್ಯಾಂಕ್​ನಲ್ಲಿ ಇಟ್ಟರೆ ಹೆಚ್ಚಿನ ಬಡ್ಡಿ ನೀಡುತ್ತೇವೆ.| ಎಸ್​.ರವಿ ವಿಧಾನ ಪರಿಷತ್​ ಸದಸ್ಯಹೊಸಕೋಟೆ ಎಂದರೇ ಸಿಲ್ಕ್​ ಹಾಗೂ ಮಿಲ್ಕ್​ ಉತ್ಪಾದನೆಗೆ ಹೆಸರುವಾಸಿ. ಬೆಳೆಯುತ್ತಿರುವ ನಗರೀಕರಣದಿಂದ ರೇಷ್ಮೆ, ಹಾಲು ಉತ್ಪಾದನೆ ಆಗುತ್ತಿದೆ. ರೈತಾಪಿ ಹಾಗೂ ಹಾಲು ಉತ್ಪಾದಕರ ಶ್ರೇಯೋಭಿವೃದ್ಧಿಗಾಗಿ ಬಿಡಿಸಿಸಿ ಬ್ಯಾಂಕ್​ ಹಲವು ಸಾಲ ಸೌಲಭ್ಯ ನೀಡುತ್ತಿದ್ದು, ಸಹಕಾರಿ ಬಂಧುಗಳು ಹಾಗೂ ಸಿಬ್ಬಂದಿ ಸೌಲಭ್ಯಗಳ ಬಗ್ಗೆ ನಾಗರಿಕರಿಗೆ ತಿಳಿಸಬೇಕು.| ಎಂ.ಡಿ.ವಿಜಯದೇವ್​ ಬಿಡಿಸಿಸಿ ಬ್ಯಾಂಕ್​ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net