

ಮಡಿಕೆಗೆ ನಾಣ್ಯಗಳನ್ನು ಸುರಿದು ಉದ್ಘಾಟನೆ
ಹೊಸಪೇಟೆ: ಐತಿಹಾಸಿಕ, ಸಾಂಸ್ಕೃತಿಕ ನೆಲ ವಿಜಯನಗರ ಜಿಲ್ಲೆಯಲ್ಲಿ ಶತಮಾನ ಪೂರೈಸಿದ ಬಳ್ಲಾರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಶತಮಾನೋತ್ಸವಕ್ಕೆ ಭಾನುವಾರ ಅದ್ದೂರಿ ಚಾಲನೆ ದೊರೆಯಿತು.
ಹೊಸಪೇಟೆ ನಗರದ ಡಾ.ಪುನೀತರಾಜ್ ಕುಮಾರ್ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿರುವ ಶತಮಾನೋತ್ಸವ ಕಾರ್ಯಕ್ರಮವನ್ನು ಮಡಿಕೆಗೆ ನಾಣ್ಯಗಳನ್ನು ಸುರಿಯುವ ಮೂಲಕ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಅರ್ಥಪೂರ್ಣ ವಾಗಿ ಉದ್ಘಾಟಿಸಿದರು.
ಬಿಡಿಸಿಸಿ ಬ್ಯಾಂಕ್ ನ ಅಧ್ಯಕ್ಷರೂ ಆಗಿರುವ ಪ್ರವಾಸೋದ್ಯಮ ಸಚಿವ ಆನಂದ ಸಿಂಗ್, ಬ್ಯಾಂಕ್ ನಿರ್ದೇಶಕರು, ಗಣ್ಯರು ಸಾಥ್ ನೀಡಿದರು.
ಎತ್ತಿನ ಬಂಡಿಗಳ ಬೃಹತ್ ಮೆರವಣಿಗೆ:
ನಗರದ ವಡಕರಾಯನ ದೇವಸ್ಥಾನದಿಂದ
ಆರಂಭಗೊಂಡ ಎತ್ತಿನ ಬಂಡಿಗಳ ಬೃಹತ್ ಮೆರವಣಿಗೆಗೆ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಚಾಲನೆ ನೀಡಿದರು.
ಪ್ರವಾಸೋದ್ಯಮ ಸಚಿವ ಆನಂದ ಸಿಂಗ್ ಅವರು ಸ್ವತಃ ಬಂಡಿ ಓಡಿಸುವ ಮೂಲಕ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಅವರನ್ನು ವೇದಿಕೆಗೆ ಕರೆ ತಂದರು.
ವಡಕರಾಯನ ದೇವಸ್ಥಾನದಿಂದ ಮೇನ್ ಬಜಾರ್, ಮೂರಂಗಡಿ ಸರ್ಕಲ್ ಬಸ್ ನಿಲ್ದಾಣ, ಅಂಬೇಡ್ಕರ್ ಸರ್ಕಲ್ ಮಾರ್ಗವಾಗಿ ಡಾ.ಪುನೀತ್ ರಾಜ್ ಕುಮಾರ್ ಜಿಲ್ಲಾ ಕ್ರೀಡಾಂಗಣದ ವರೆಗೆ ಅದ್ದೂರಿಯಾಗಿ ಮೆರವಣಿಗೆ ನಡೆಯಿತು.
ಚಿಕ್ಕಮಂಗಳೂರಿನ ಮಹಿಳಾ ವೀರಾಗಾಸೆ, ಮಾಗಡಿಯ ಪೂಜಾ ಕುಣಿತ, ನಂದಿಬೇವೂರಿನ ಸಮತಳ ನಂದಿಕೋಲ, ತುಮಕೂರಿನ ಗೊಂಬೆ ಕುಣಿತ, ವೀರಗಾಸೆ, ಹಗಲು ವೇಷಗಾರರು ಸೇರಿದಂತೆ ವಿವಿಧ ಜನಪದ ಕಲಾ ತಂಡಗಳ ನೃತ್ಯ ಮೆರವಣಿಗೆಗೆ ಮೆರಗು ನೀಡಿದವು.