

ಕಲಬುರಗಿ: ಲಿಂಗಾಯತರು ಇತರೆ ಧರ್ಮದಲ್ಲಿ ನಮೂದಿಸಿ ಎನ್ನಲು ಏನು ನೈತಿಕತೆ ಇದೆ. ಸಾಣೆಹಳ್ಳಿ ಸ್ವಾಮೀಜಿ ಹೇಳ್ತಾರೆ ಹಿಂದು, ವೀರಶೈವ ಬರೆಸದಂತೆ ಹೇಳುತ್ತಾರೆ. ಇಸ್ಲಾಂ ಲಿಂಗಾಯತ ಎರಡು ಒಂದೇ ಎನ್ನುತ್ತಾರೆ. ಹಾಗಾದರೆ ಇಸ್ಲಾಂನಲ್ಲಿ ಬರೆಸಿಕೊಳ್ಳಲಿ ಎಂದು ಆಂದೋಲಾದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವೀರಶೈವ, ಲಿಂಗಾಯತದಲ್ಲಿ ಭೇದ ಭಾವವಿದೆ. ಇಸ್ಲಾಂ ಎಂದೇ ಹೋಗಲಿ. ಕಾಂಗ್ರೆಸ್ ಕಂಪನಿಯೂ ಸ್ವಾಮೀಗಳ ಮೂಲಕ ಭೇದ ಭಾವ ಮೂಡಿಸುತ್ತಿದೆ. ಹಿಂದು ವೀರಶೈವ ಲಿಂಗಾಯತ ಎಂದೇ ಬರೆಸಬೇಕು ಎಂಬುದು ನಮ್ಮ ಆಗ್ರಹವಿದೆ. ಇಸ್ಲಾಂ, ಲಿಂಗಾಯತ ಹೇಗೆ ಒಂದಾಯಿತು. ಜಾನುವಾರು ಕಡಿಯುತ್ತಾರಾ?. ಗೋವುಗಳ ಕೊಲ್ಲುವ ಪಾಪಿಗಳ ಧ್ವನಿ ಕೇಳುವ ಮುನ್ನ ಪೂಜಿಸು ನಮ್ಮ ಕೂಡಲ ಸಂಗಮದೇವನ ಎನ್ನುವ ಬಸವಣ್ಣನವರನ್ನು ಇಸ್ಲಾಂಗೆ ಹೋಲಿಸುತ್ತಾರೆ ಎಂದರೆ ಇವರ ವಿವೇಕ ಎಷ್ಟಿದೆ ಎಂಬುದು ತಿಳಿಯಬೇಕು. ಬಿಟ್ಟಿ ಪ್ರಚಾರಕ್ಕೆ ಹೇಳಿಕೆ ನೀಡುವುದು ಬಿಡಬೇಕು. ಶಿವಾಚಾರ್ಯ, ಪಂಡಿತಾರಾಧ್ಯ ವೈದಿಕ ಪರಂಪರೆಯದ್ದೆ. ಎಲ್ಲ ಇಟ್ಟುಕೊಂಡು ಇನ್ನೊಬ್ಬರಿಗೆ ಬುದ್ದಿ ಹೇಳುವ ಅವಶ್ಯಕತೆ ಇಲ್ಲ ಎಂದರು.