

ಬಾಗಲಕೋಟೆ: ನವನಗರದ ಮೂರನೇ ಯೂನಿಟ್‌ಗಾಗಿ ಸ್ವಾಧಿನ ನಪಡಿಸಿಕೊಂಡ ಭೂಮಿ ವಿಚಾರದಲ್ಲಿ ನ್ಯಾಯಾಲಯದ ಆದೇಶದಂತೆ ಪರಿಹಾರ ಧನ ವಿತರಿಸುವಲ್ಲಿ ವಿಫಲರಾದ ಬಿಟಿಡಿಎ ವಿಶೇಷ ಭೂಸ್ವಾಧಿನಾಧಿಕಾರಿ ಕಚೇರಿ ಬುಧವಾರ ಜಪ್ತಿ ಮಾಡಲಾಗಿದೆ.
ಹೊಸದಾಗಿ ನಿರ್ಮಾಣವಾಗುತ್ತಿರುವ ನವನಗರದ ಮೂರನೇ ಯೂನಿಟ್ ವ್ಯಾಪ್ತಿಯಲ್ಲಿ ಹಿರಿಯ ವಕೀಲ ಡಿ.ಬಿ.ಪೂಜಾರ ಅವರು ತಮ್ಮ ಪತ್ನಿ ಭುವನೇಶ್ವರಿ ಡಿ.ಪೂಜಾರ ಹೆಸರಿನಲ್ಲಿ ಜಮೀನು ಹೊಂದಿದ್ದರು. ಅವರು ಸರ್ಕಾರಕ್ಕೆ ಭೂಮಿ ಬಿಟ್ಟುಕೊಡಲು ಒಪ್ಪದಿದ್ದಾಗ ಸರ್ಕಾರ ವಿಶೇಷ ಅಽಕಾರ ಬಳಸಿಕೊಂಡು ಎಕರೆಗೆ ೬ ಲಕ್ಷ ರೂ.ಗಳಂತೆ ನೀಡಿ ಭೂಮಿಯನ್ನು ಸ್ವಾಧಿÃನಪಡಿಸಿಕೊಂಡಿತ್ತು. ಅವೈಜ್ಞಾನಿಕ ಮೊತ್ತವನ್ನು ನೀಡಿದೆ ಎಂದು ಪ್ರಶ್ನಿಸಿ ಡಿ.ಬಿ.ಪೂಜಾರಿ ಅವರು ನ್ಯಾಯಾಲಯದ ಮೊರೆ ಹೋಗಿದ್ದರು.
ಸಂಪೂರ್ಣ ವಿಚಾರಣೆ ನಡೆಸಿದ ನ್ಯಾಯಾಲಯವು ೩.೩೧ ಎಕರೆಗೆ ಸಂಬ0ಽಸಿದAತೆ ಪ್ರತಿ ಚದುರ ಅಡಿಗೆ ೭೮೯ ರೂ.ಗಳಂತೆ ನೀಡಬೇಕು ಅಂತ ಆದೇಶ ಮಾಡಿತ್ತು. ಈ ಮೊತ್ತ ಅಂದಾಜು ೮೦ ಕೋಟಿ ರೂ.ಗಳಾಗುತ್ತದೆ. ೨೦೨೪ರ ಏಪ್ರಿಲ್ ತಿಂಗಳಿನಲ್ಲೇ ಆದೇಶ ಮಾಡಿದರೂ ಭೂಸ್ವಾಽÃನಾಽಕಾರಿಗಳ ಕಚೇರಿ ಯಾವುದೇ ಮೊತ್ತವನ್ನು ಪಾವತಿಸದಿರುವ ಕಾರಣ ನ್ಯಾಯಾಂಗ ನಿಂದನೆ ದಾವೆ ಹೂಡಿ ಬುಧವಾರ ನ್ಯಾಯಾಂಗ ಇಲಾಖೆ ಸಿಬ್ಬಂದಿಯನ್ನು ಒಳಗೊಂಡ ತಂಡವು ಭೂಸ್ವಾಧಿನನಾಧಿಕಾರಿಗಳ ಕಚೇರಿ ಜಪ್ತಿ ಮಾಡಲಾಯಿತು. ಬೆಳಗ್ಗೆ ೧೦.೩೦ ರಿಂದ ಮಧ್ಯಾಹ್ನದ ವರೆಗೆ ಜಪ್ತಿ ಮಾಡಿ ವಾಹನದಲ್ಲಿ ಸರಂಜಾಮುಗಳನ್ನು ನ್ಯಾಯಲಯಕ್ಕೆ ಹಾಜರು ಪಡಿಸಲಾಯಿತು.
ಬಿ.ಡಿ.ಪೂಜಾರ ಪ್ರಕರಣದಲ್ಲಿ ಕೆಳ ಹಂತದ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ವಿಶೇಷ ಭೂಸ್ವಾಽÃನಾಽಕಾರಿಗಳು ಹೈಕೋರ್ಟ್ಗೆ ಮೇಲ್ಮನವಿ ಹೋಗಿದ್ದಾರೆ. ಆದರೆ ಮೇಲ್ಮನವಿ ಹೋಗುವಾಗ ಕನಿಷ್ಠ ಶೇ.೫೦ ಪಾವತಿಸಬೇಕಿದೆ ಅದನ್ನೂ ಪಾವತಿಸಿಲ್ಲ ಎಂದು ಡಿ.ಬಿ.ಪೂಜಾರ ಅಸಮಾಧಾನ ಹೊರಹಾಕಿದರು. ಇದು ನನ್ನೊಬ್ಬನ ಪ್ರಕರಣದ ಚಿತ್ರಣವಲ್ಲ. ಮುಳುಗಡೆ ಸಂತ್ರಸ್ತರಿಗೆ ಇದೇ ರೀತಿಯಲ್ಲಿ ಅನ್ಯಾಯ ಎಸಗಲಾಗುತ್ತಿದೆ. ನ್ಯಾಯಾಲಯ ಆದೇಶ ಮಾಡಿದರೂ ಹಣ ಪಾವತಿಸದೆ ವಿಳಂಬ ಮಾಡಲಾಗುತ್ತದೆ. ನಮ್ಮದೇ ಭೂಮಿಯನ್ನು ಕಳೆದುಕೊಂಡು ಜೀವನ ಪೂರ್ತಿ ನಮ್ಮ ಹಣಕ್ಕಾಗಿ ನಾವು ಕಾಯುವ ಸ್ಥಿತಿ ಉಂಟಾಗುತ್ತಿದೆ. ಅದಕ್ಕಾಗಿಯೇ ಜಪ್ತಿ ಆದೇಶವನ್ನು ತಂದಿದ್ದೇನೆ.
ಕೆಳ ಹಂತದ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ಮೇಲಿನ ನ್ಯಾಯಾಲಯಕ್ಕೆ ಹೋಗುವುದು ತಪ್ಪಲ್ಲ ಆದರೆ ನಿಯಮಾನುಸಾರ ಶೇ.೫೦ ಹಣವನ್ನಾದರೂ ಪಾವತಿಸಬೇಕು. ಈ ವಿಚಾರದಲ್ಲಿ ನ್ಯಾಯಾಲಯದ ತೀರ್ಪುನ್ನು ಅಽಕಾರಿಗಳು ಗಂಭೀರವಾಗಿ ಸ್ವೀಕರಿಸದೆ ಅಪಚಾರ ಎಸೆಗುತ್ತಿದ್ದಾರೆ. ಇದೇ ರೀತಿಯ ಧೋರಣೆ ಮುಂದವರಿದರೆ ಬಿಟಿಡಿಎ ಸಂಪೂರ್ಣ ಜಪ್ತಿಗೆ ನ್ಯಾಯಾಲಯದಲ್ಲಿ ಮನವಿ ಮಾಡುತ್ತೇನೆ ಎಂದು ತಿಳಿಸಿದರು.
.ಬಿ.ಪೂಜಾರ ಅವರು ಭೂಸ್ವಾಧಿನ ಪ್ರಕರಣಗಳಲ್ಲಿ ನೈಪುಣ್ಯತೆ ಸಾಽಸಿದ್ದು, ಅವರ ಪ್ರಕರಣಗಳು ಇತರೆ ಭೂಸ್ವಾಧಿನ ಪ್ರಕರಣಗಳಿಗೆ ಆಧಾರವಾಗಿರುವ ನಿದರ್ಶನವಿದೆ. ಹಳೆ ಭೂಸ್ವಾಧಿನ ಕಾಯ್ದೆಗೆ ಒಳಪಡುವ ಪ್ರಕರಣವೊಂದಲ್ಲಿ ನ್ಯಾಯಾಲಯದಲ್ಲಿ ಪರಿಣಾಮಕಾರಿಯಾಗಿ ವಾದಿಸಿದ್ದ ಅವರು, ಪ್ರತಿ ಚ.ಅಡಿಗೆ ೯೦ ರೂ.ಗಳನ್ನು ಸಂತ್ರಸ್ತರಿಗೆ ದೊರೆಕಿಸುವಲ್ಲಿ ಯಶಸ್ವಿಯಾಗಿದ್ದರು ಎಂದು ಅನೇಕರು ನೆನಪಿಸುತ್ತಾರೆ.
ಈಗ ಹೊಸ ಭೂಸ್ವಾಧಿನ ಕಾಯ್ದೆ ಜಾರಿಗೊಂಡ ನಂತರ ಪ್ರತಿ ಚ.ಅಡಿಗೆ ೭೮೯ ರೂ.ಗಳಷ್ಟು ದೊಡ್ಡ ಮೊತ್ತವನ್ನು ಪಡೆದ ಯುಕೆಪಿ ವ್ಯಾಪ್ತಿಯ ಮೊದಲ ಪ್ರಕರಣ ಅಂತ ದಾಖಲಾಗಿದೆ. ಹೀಗಾಗಿ ಡಿ.ಬಿ.ಪೂಜಾರ ಅವರ ಪ್ರಕರಣಗಳ ಬಗ್ಗೆ ವಿಶೇಷ ಕುತೂಹಲ ಸಂತ್ರಸ್ತರಲ್ಲಿರುತ್ತದೆ.