

ಚಾಮರಾಜನಗರ: ಸಾಮಾನ್ಯ ಮಹಿಳೆಗೆ ಮೀಸಲಿರುವ ನಗರಸಭೆ ಅಧ್ಯಕ್ಷೆ ಹಾಗೂ ಪರಿಶಿಷ್ಠ ಪಂಗಡ ಮಹಿಳೆ ವರ್ಗಕ್ಕೆ ಮೀಸಲಿರುವ ಉಪಾಧ್ಯಕ್ಷೆ ಸ್ಥಾನಕ್ಕೆ ಬಿಜೆಪಿ, ಕಾಂಗ್ರೆಸ್ ಪಕ್ಷಗಳ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು.
ಬಿಜೆಪಿಯಿಂದ ಅಧ್ಯಕ್ಷೆ ಸ್ಥಾನದ ಆಕಾಂಕ್ಷಿ 7 ನೇ ವಾರ್ಡ್ ನ ಸದಸ್ಯೆ ಆಶಾ , ಉಪಾಧ್ಯಕ್ಷೆ ಸ್ಥಾನಕ್ಕೆ 29ನೇ ವಾರ್ಡ್ ನ ಸುಧಾ ನಾಮಪತ್ರ ಸಲ್ಲಿಸಿದರು. ಕಾಂಗ್ರೆಸ್ ನಿಂದ ಅಧ್ಯಕ್ಷೆ ಸ್ಥಾನಕ್ಕೆ 18ನೇ ವಾರ್ಡ್‌ನ ಶಾಂತಿ ಅಧ್ಯಕ್ಷೆ, ಉಪಾಧ್ಯಕ್ಷೆ ಗಾದಿಗೆ16ನೇ ವಾರ್ಡ್‌ನ ಉಪಾಧ್ಯಕ್ಷೆ ಸ್ಥಾನಕ್ಕೆ ಚಂದ್ರಕಲಾ ಉಮೇದುವಾರಿಕೆ ಸಲ್ಲಿಸಿದರು.