ಬಿಜೆಪಿಯಿಂದ ಸಾವರ್ಕರ್ ರಥಯಾತ್ರೆಗೆ ಕೌಂಟರ್, ಕಾಂಗ್ರೆಸ್ ನಿಂದ ಕನ್ನಡ ಹೋರಾಟಗಾರರ ರಥಯಾತ್ರೆ, ಎಂ.ಬಿ. ಪಾಟೀಲ ಹೇಳಿದ್ದೇನು ಗೊತ್ತಾ?

IMG-20210526-WA0074
Published on

ವಿಜಯಪುರ: ರಾಜ್ಯಾದ್ಯಂತ ಸದ್ದು ಮಾಡುತ್ತಿರುವ ವಿ.ಡಿ.ಸಾವರ್ಕರ್ ವಿವಾದಕ್ಕೆ ಪ್ರತ್ಯುತ್ತರವಾಗಿ ಕನ್ನಡ ನಾಡಿನ ಹೋರಾಟಗಾರರ ರಥಯಾತ್ರೆಗೆ ಕಾಂಗ್ರೆಸ್ ಸಿದ್ದವಾಗಿದೆ.

ವೀರ ರಾಣಿ ಕಿತ್ತೂರ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಹಲಗಲಿಯ ಬೇಡರು, ಸುರಪುರ ನಾಯಕರು....ಹೀಗೆ ಅನೇಕ ಹೋರಾಟಗಾರರನ್ನು ಗೌರವಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸುವುದಾಗಿ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಡಾ.ಎಂ.ಬಿ‌. ಪಾಟೀಲ ತಿಳಿಸಿದರು.

ಬಿಜೆಪಿಗೆ ಕನ್ನಡದ ಹೋರಾಟಗಾರರು ಬೇಡವಾ? ಅವರ ಫೋಟೋ ತೆಗೆದುಕೊಂಡು ರಥ ಯಾತ್ರೆ ಮಾಡಿ. ಹಲಗಲಿಯ ಬೇಡರು, ಕಿತ್ತೂರ ಚೆನ್ನಮ್ಮ, ಸುರಪುರ ಅರಸರು ಬೇಡವಾ?

ಬಸವಣ್ಣ, ಮೈಸೂರು ಅರಸು ಫೋಟೋ ಹಾಕಿ. ನಮ್ಮ ನಾಡಿನವರು ಬೇಡವಾ ವಿವಾದಾತ್ಮಕ ವ್ಯಕ್ತಿಯೇ ಬೇಕಾ? ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ಪ್ರತಿ ಕ್ರಿಯಿಸಿದರು.

ಕಿತ್ತೂರ ಚೆನ್ನಮ್ಮ ಬ್ರಿಟಿಷರ ಕ್ಷಮೆ ಕೇಳಿಲ್ಲ, ಸಂಗೊಳ್ಳಿ ರಾಯಣ್ಣ ಕ್ಷಮೆ ಕೇಳಿಲ್ಲ. ಹಲಗಲಿ ಬೇಡರು ಕ್ಷಮಾಪಣೆ ಕೇಳಿಲ್ಲ. ಹಾಗಿದ್ದ ಮೇಲೆ ಇವರ ರಥಯಾತ್ರೆ ವಿವಾದಾತ್ಮಕ ವ್ಯಕ್ತಿಯ ಫೋಟೋ ಇಟ್ಟುಕೊಂಡು ರಥಯಾತ್ರೆ ಮಾಡೋದು ಬಿ.ಎಸ್. ಯಡಿಯೂರಪ್ಪ ಅವರಿಗೆ ಶೋಭೆ ತರಲ್ಲ ಎಂದರು.

ಆದರೆ ಕಾಂಗ್ರೆಸ್ ಶೀಘ್ರವೇ ನಾಡಿನ ಹೋರಾಟಗಾರರಿಗೆ ಗೌರವ ಸಲ್ಲಿಸುವ ಕಾರ್ಯ ಮಾಡಲಿದೆ. ಶೀಘ್ರದಲ್ಲಿಯೇ ದಿನ ನಿಗದಿ ಮಾಡುತ್ತೇವೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net