ಬಿಜೆಪಿಯಿಂದ ಸಂವಿಧಾನಕ್ಕೆ ಗಂಡಾಂತರ

Mareppa
Published on

ಚಿತ್ರದರ್ಗ: ಬಿಜೆಪಿಯಿಂದಾಗಿ ಸಂವಿಧಾನ ಗಂಡಾಂತರದಲ್ಲಿದೆ. ಅಲ್ಲದೆ, ಮೀಸಲಾತಿ ವರ್ಗೀಕರಣ ಮಾಡದ ಆ ಪಕ್ಷವನ್ನು ದಲಿತರು ಏಕೆ ಬೆಂಬಲಿಸಬೇಕು ಎಂದು ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿ ಹೋರಾಟ ಸಮಿತಿ ಪ್ರಧಾನ ಸಂಚಾಲಕ ಎಚ್.ಮಾರೆಪ್ಪ ಪ್ರಶ್ನಿಸಿದರು.

ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಾದಿಗರು ಸೇರಿ ತಳ ಸಮುದಾಯಗಳ ಮತಗಳು ನಮ್ಮ ಬೇಡಿಕೆ, ಹಕ್ಕುಗಳಿಗೆ ಗ್ಯಾರಂಟಿ ಆಗಬೇಕಾಗಿದೆ. ಆದರೆ, ಮಾದಿಗ ದಂಡೋರ ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷ ಮಂದಕೃಷ್ಣ ಹೇಳಿಕೆ ಇದಕ್ಕೆ ತದ್ವಿರುದ್ಧವಾಗಿದೆ. ಸಮುದಾಯದ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಅಸಮಾಧಾನ ಹೊರಹಾಕಿದರು.

ನರೇಂದ್ರ ಮೋದಿ ಅವರು ಪ್ರಧಾನಿಯಾದ ೧೦೦ ದಿನದೊಳಗೆ ಪರಿಶಿಷ್ಠ ಜಾತಿ ಒಳಮೀಸಲು ಜಾರಿಗೊಳಿಸುವ ಭರವಸೆ ಆಗೆಯೇ ಉಳಿದಿದೆ. ಮಂದಕೃಷ್ಣ ಹೇಳಿದ ಕೂಡಲೇ ಆಗುತ್ತದೆಯೇ ಎಂದು ಪ್ರಶ್ನಿಸಿದರು.

ರಾಜ್ಯ ಸಂಚಾಲಕ ಕೇಶವಮೂರ್ತಿ, ಪ್ರಧಾನ ಕಾರ್ಯದರ್ಶಿ ಭಾನುಪ್ರಸಾದ್, ಮಾದಿಗ ದಂಡೋರ ಸಮಿತಿ ರಾಜ್ಯ ಅಧ್ಯಕ್ಷ ತಾಯಪ್ಪ, ಸಂಚಾಲಕ ಪ್ರೊ.ಸಿ.ಕೆ.ಮಹೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net