

ಬಸವಕಲ್ಯಾಣ: ಜನ ಸಂಘ(ಬಿಜೆಪಿ)ದ ಸಂಸ್ಥಾಪಕ ಡಾ ಶಾಮ್ಪ್ರಸಾದ ಮುಖರ್ಜಿ ಅವರ 120ನೇ ಜನ್ಮದಿನದ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಅವರ ಜನ್ಮದಿನದ ನಿಮಿತ್ತ ಬಿಜೆಪಿ ಗ್ರಾಮೀಣ ಘಟಕದಿಂದ ನಗರದಲ್ಲಿ ಮಾಸ್ಕ್ ಮತ್ತು ಸ್ಯಾನಿಟೈಸರ್ ವಿತರಿಸಲಾಯಿತು.
ಪಕ್ಷದ ಕಾರ್ಯಲಯದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಪಕ್ಷದ ಮುಖಂಡ ಶಾಂತಪ್ಪ ಜಿ.ಪಾಟೀಲ್ ಮಾತನಾಡಿ, ದೇಶದ ಐಕ್ಯತೆ ಮತ್ತು ಅಭಿವೃದಿಗೆ ಡಾ.ಶಾಮ್ಪ್ರಸಾದ್ ಮುಖರ್ಜಿ ಅವರ ಕೊಡುಗೆ ದೊಡ್ಡದು. ಅವರು ಅಂದು ಕಂಡ ಕನಸು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಬಿಜೆಪಿ ಸರ್ಕಾರ ಸಾಕಾರಗೊಳಿಸುತ್ತಿದೆ ಎಂದರು.
ಜಿಪಂ ಪ್ರತಿಪಕ್ಷದ ನಾಯಕ ಸುಧೀರ ಕಾಡಾದಿ ಮಾತನಾಡಿ, ಅತ್ಯಂತ ವೇಗವಾಗಿ ನಗರ ಸೇರಿ ಗ್ರಾಮೀನ ಪ್ರದೇಶದಲ್ಲಿ ಹರಡುತ್ತಿರುವ ಕರೊನಾ ಸೋಂಕು ತಡೆಗೆ ಪ್ರತಿಯೊಬ್ಬರು ಮುಂದಾಗಬೇಕು. ಪರಸ್ಪರ ಅಂತರ ಕಾಪಾಡುವ ಜತೆಗೆ ಆಗಾಗ ಕೈಗಳನ್ನು ಸ್ವಚ್ಛಗೊಳಿಸಬೇಕು, ಮಾಸ್ಕ್ ಧರಿಸಬೇಕು ಎಂದು ಹೇಳಿದರು.
ಪಕ್ಷದ ತಾಲೂಕು ಅಧ್ಯಕ್ಷ ಅಶೋಕ ವಕಾರೆ, ಮುಖಂಡರಾದ ರವಿ ಚಂದನಕೇರೆ, ಶರಣು ಸಲಗರ, ದೀಪಕ ಗಾಯಕವಾಡ, ವಿಜಯಕುಮಾರ ಮಂಠಾಳೆ, ಜಿಪಂ ಮಾಜಿ ಅಧ್ಯಕ್ಷ ಅನೀಲ ಭೂಸಾರೆ, ನಗರಸಭೆ ಸದಸ್ಯ ದೀಪಕ ಗುಡ್ಡಾ, ಅರವಿಂದ ಮುತ್ಯೆ, ಪ್ರಧಾನ ಕಾರ್ಯದರ್ಶಿ ಹಣಮಂತ ದರ್ಜಿ, ಕಾರ್ಯದರ್ಶಿ ಮಹಾಂತಯ್ಯ ಸ್ವಾಮಿ, ಕೋಶಾಧ್ಯಕ್ಷ ದೇವಿಂದ್ರ ಭೋಪಳೆ, ರತಿಕಾಂತ ಕೋಹಿನೂರ, ಪ್ರದೀಪ ಗಡವಂತೆ, ಸಿದ್ದು ಬಿರಾದಾರ, ಚಂದ್ರಕಾಂತ ಉಳಾಗಡ್ಡಿ ಸೇರಿದಂತೆ ಪಕ್ಷದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಭಾಗವಹಿಸಿದರು.