

ದಾವಣಗೆರೆ: ದಾವಣಗೆರೆಯಲ್ಲಿ ಆಯೋಜನೆಯಾಗಿರುವ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯ ಮಹಾಸಂಗಮ ಕಾರ್ಯಕ್ರಮದ ಅಂಗವಾಗಿ ಮಾ.20ರಂದು ಸಂಜೆ 4 ಗಂಟೆಗೆ ಪಕ್ಷದ ಯುವ ಮೋರ್ಚಾದಿಂದ ಬೈಕ್ ರ‌್ಯಾಲಿ ಆಯೋಜಿಸಲಾಗಿದೆ.
ವೆಂಕಟೇಶ್ವರ ವೃತ್ತದಲ್ಲಿ ಆರಂಭವಾಗಲಿರುವ ರ‌್ಯಾಲಿಯನ್ನು ಸಂಸದ ಡಾ.ಜಿ.ಎಂ.ಸಿದ್ದೇಶ್ವರ ಉದ್ಘಾಟಿಸುವರು. ಶಾಸಕ ಎಸ್.ಎ. ರವೀಂದ್ರನಾಥ್, ಜಿಲ್ಲಾಧ್ಯಕ್ಷ ಎಸ್.ಎಂ.ವೀರೇಶ್ ಹನಗವಾಡಿ ಇತರರು ಭಾಗವಹಿಸುವರು ಎಂದು ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಆರ್.ಎಲ್. ಶಿವಪ್ರಕಾಶ್ ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬಂಬೂಬಜಾರ್ ರಸ್ತೆ, ಎಪಿಎಂಸಿ ರಸ್ತೆಯ ಫ್ಲೈ ಓವರ್, ಹಳೇ ಪಿ.ಬಿ. ರಸ್ತೆ, ಮಹಾತ್ಮಗಾಂಧಿ ವೃತ್ತ, ರೇಣುಕ ಮಂದಿರ, ಎವಿಕೆ ಕಾಲೇಜು ರಸ್ತೆ, ಗುಂಡಿ ಮಹಾದೇವಪ್ಪ ವೃತ್ತ, ವಿದ್ಯಾನಗರ, ಬಿಐಇಟಿ ಕಾಲೇಜು ರಸ್ತೆ, ಲಕ್ಷ್ಮೀಫ್ರೋರ್ ಮಿಲ್, ಸಂಗೊಳ್ಳಿ ರಾಯಣ್ಣ ವೃತ್ತ ಮೂಲಕ ಸಮಾವೇಶ ನಡೆಯುವ ಸ್ಥಳಕ್ಕ ತೆರಳಲಿದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಜಿ.ಯಲ್ಲೇಶ್, ಕಿರಣ್, ಚಂದ್ರಶೇಖರ್, ವಿಜಯ್ ಸಾವಂತ್, ರಾಕೇಶ್ ಇದ್ದರು.
----