

ಔರಾದ್: ದೇಶ ಮೊದಲು ಎನ್ನುವ ಸಿದ್ಧಾಂತ ಹೊಂದಿರುವ ಏಕೈಕ ಪಕ್ಷ ಭಾರತೀಯ ಜನತಾ ಪಕ್ಷ. ದೇಶಪ್ರೇಮ ಜಾಗೃತಗೊಳಿಸಲು ನಿರಂತರ ಕಾರ್ಯಕ್ರಮ ಏರ್ಪಡಿಸುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಲಿಷ್ಠ ಭಾರತ ನಿರ್ಮಾಣವಾಗುತ್ತಿದೆ ಎಂದು ಮಾಜಿ ಶಾಸಕ ಗುಂಡಪ್ಪ ವಕೀಲ ಹೇಳಿದರು.
ಪಟ್ಟಣದ ಶ್ರೀ ಅಮರೇಶ್ವರ ಮಂದಿರದ ಆವರಣದಲ್ಲಿ ಭಾರತೀಯ ಜನತಾ ಪಕ್ಷ ತಾಲೂಕು ಮಂಡದಿಂದ ಶನಿವಾರ ಏರ್ಪಡಿಸಿದ್ದ ನನ್ನ ಮಣ್ಣು ನನ್ನ ದೇಶ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ಸ್ವಚ್ಛ ಭಾರತ ಅಭಿಯಾನ, ತಿರಂಗಾ ಯಾತ್ರಾ, ಮನೆ-ಮನೆಯಲ್ಲಿ ಧ್ವಜಾರೋಹಣದಂಥ ಮಾದರಿ ಕಾರ್ಯಕ್ರಮ ಆಯೋಜಿಸಿ, ದೇಶದ ಬಗ್ಗೆ ಜಾಗೃತಿ ಮೂಡಿಸುತ್ತಿರುವುದು ಅವಶ್ಯ ಕಾರ್ಯ ಎಂದರು.
ಬಿಜೆಪಿ ಮಂಡಲ ಅಧ್ಯಕ್ಷ ರಾಮಶೆಟ್ಟಿ ಪನ್ನಾಳೆ ಮಾತನಾಡಿ, ಹುತಾತ್ಮ ಯೋಧರನ್ನು ಗೌರವಿಸಲು ದೇಶಾದ್ಯಂತ ಮೇರಿ ಮಾಟಿ ಮೇರಾ ದೇಶ (ನನ್ನ ಮಣ್ಣು, ನನ್ನ ದೇಶ) ಅಭಿಯಾನ ನಡೆಸಲಾಗುತ್ತಿದೆ. ದೇಶದ ಎಲ್ಲೆಡೆಯಿಂದ ಮಣ್ಣು ಸಂಗ್ರಹಿಸಿ, ದೆಹಲಿಯ ರಾಷ್ಟಿಯ ಯುದ್ಧ ಸ್ಮಾರಕದ ಬಳಿ ಮರ ನೆಟ್ಟು ಅಮೃತ ಉದ್ಯಾನ ನಿರ್ಮಿಸಿ, ಏಕ ಭಾರತ ಶ್ರೇಷ್ಠ ಭಾರತ ಸಂದೇಶ ನೀಡಲಾಗುವುದು ಎಂದರು.
ಹಾವೇರಿಯ ಗುರುಪಾದ ಶಾಸ್ತಿç, ಮಂಡಲ ಪ್ರಭಾರಿ ವೀರಣ್ಣ ಕಾರಬಾರಿ, ಮುಖಂಡ ವಸಂತ ಬಿರಾದಾರ, ಪ್ರಧಾನ ಕಾರ್ಯದರ್ಶಿ ಖಂಡೋಬಾ ಕಂಗಟೆ, ದೋಂಡಿಬಾ ನರೋಟೆ, ಸಂದೀಪ ಪಾಟೀಲ್, ಶಿವಾಜಿರಾವ ಕಾಳೆ, ಶಿವಾಜಿರಾವ ಪಾಟೀಲ್ ಮುಂಗನಾಳ, ರಾಜೇಂದ್ರ ಮಾಳಿ, ಶಿವರಾಜ ಅಲ್ಮಾಜೆ, ವಿನಾಯಕ ಜಗದಾಳೆ, ಪ್ರಕಾಶ ಅಲ್ಮಾಜೆ, ಗಣೇಶ ಕಾರೆಗಾಂವೆ, ರಾಮರೆಡ್ಡಿ ಪಾಟೀಲ್, ಮಾರುತಿರೆಡ್ಡಿ ಪಟ್ನೆ, ಸಂಜು ಮಾನಕಾರೆ, ನಾಗಶೆಟ್ಟಿ ಗಾದಗೆ, ಬಸವರಾಜ ಹಳ್ಳೆ, ಸಂದೀಪ ಪಾಟೀಲ್, ಪ್ರಕಾಶ ಜೀರ್ಗಾ, ಸಂಜು ಮುರ್ಕೆ, ಸಚಿನ ಬಿರಾದಾರ, ಉದಯ ಸೋಲಾಪುರೆ, ತಾನಾಜಿ ಡೊಂಬಾಳೆ, ಪ್ರವೀಣ ಕಾರಬಾರಿ, ಅಶೋಕ ಮೇತ್ರೆ, ಯೋಗೇಶ ಸುರನಾರ, ಸುನೀಲ ಸಂಗಮ,, ಭರತ ಕದಂ, ರಮೇಶ ಪಾಟೀಲ್, ಪ್ರಕಾಶ ಖಾನಾಪುರೆ, ಪ್ರಕಾಶ ವಾಲ್ದೊಡ್ಡಿ ಇತರರಿದ್ದರು.