ಬಿಜೆಪಿಯಿಂದ ಎಲ್ಲೆಡೆ ಕೋಮು ಭಾವನೆ ಹೆಚ್ಚಳ

1RAM3
ರಾಮದುರ್ಗದಲ್ಲಿ ಏರ್ಪಡಿಸಿದ್ದ ನೇಕಾರರ ಸಮಾವೇಶದಲ್ಲಿ ಸಚಿವ ಡಾ. ಎಂ.ಸಿ. ಸುಧಾಕರ ಮಾತನಾಡಿದರು. ಅಶೋಕ ಪಟ್ಟಣ, ಉಮಾಶ್ರೀ, ಎಚ್​.ಎಂ.ರೇವಣ್ಣ, ನಾಗರಾಜ ಯಾದವ ಇತರರು ಇದ್ದರು.
Published on

ರಾಮದುರ್ಗ: ಸುಳ್ಳು ಹೇಳಿ ಕೋಮು ಭಾವನೆ ಕೆರಳಿಸುವ ಕೆಲಸ ಮಾಡುತ್ತಿರುವ ಬಿಜೆಪಿ ಮಾತನ್ನು ನಂಬಬೇಡಿ. ರಾಜ್ಯದ ಜನತೆಯ ಕಲ್ಯಾಣಕ್ಕಾಗಿ ಕಾಂಗ್ರೆಸ್​ಗೆ ಮತ ನೀಡಬೇಕು ಎಂದು ಉನ್ನತ ಶಿಣ ಸಚಿವ ಡಾ. ಎಂ.ಸಿ. ಸುಧಾಕರ ಹೇಳಿದರು.

ಪಟ್ಟಣದಲ್ಲಿ ಬುಧವಾರ ಏರ್ಪಡಿಸಿದ್ದ ನೇಕಾರರ ಬೃಹತ್​ ಸಮಾವೇಶದಲ್ಲಿ ಮಾತನಾಡಿದ ಅವರು, ಮೋದಿ ದುರಾಡಳಿತದಿಂದ ಜನತೆ ಬೇಸತ್ತಿದ್ದಾರೆ ಎಂದರು. ವಿಧಾನ ಪರಿಷತ್​ ಸದಸ್ಯೆ ಉಮಾಶ್ರೀ ಮಾತನಾಡಿ, ಮೋದಿ ಸರ್ಕಾರ ಜನರಿಗೆ ಮೇಲಿಂದ ಮೇಲೆ ಸಂಕಷ್ಟ ಕೊಡುತ್ತಲೇ ಇದೆ ಎಂದು ಆರೋಪಿಸಿದರು.
ಸರ್ಕಾರದ ಮುಖ್ಯ ಸಚೇತಕ ಅಶೋಕ ಪಟ್ಟಣ ಮಾತನಾಡಿ, ಇಂಡಿಯಾ ನೇತೃತ್ವದ ಮೆತ್ರಿ ಸರ್ಕಾರ ಬಂದರೆ ಮಹಿಳೆಯರಿಗೆ 1 ಲ ರೂ. ನೀಡುವ ಗ್ಯಾರಂಟಿ ಭರವಸೆ ನೀಡಿದರು. ಮಾಜಿ ಸಚಿವ ಎಚ್​.ಎಂ.ರೇವಣ್ಣ, ಎಂಎಲ್​ಸಿ ನಾಗರಾಜ ಯಾದವ, ಕೆಮಗ್ಗ ಅಭಿವದ್ಧಿ ನಿಗಮದ ಮಾಜಿ ಅಧ್ಯ ರವೀಂದ್ರ ಕಲಬುರ್ಗಿ, ಪುಸರಸಭೆ ಮಾಜಿ ಅಧ್ಯೆ ಗಾಯತ್ರಿ ದೇವಾಂಗಮಠ ಮಾತನಾಡಿದರು.

ಕಾವೇರಿ ಹ್ಯಾಂಡ್​ಲೂಮ ಅಧ್ಯ ಬಿ.ಜಿ. ಗಣೇಶ, ದೇವರಾಜ ಅಭಿವದ್ಧಿ ನಿಗಮದ ಅಧ್ಯ ಕೀರ್ತಿ ಗಣೇಶ, ಪಾವರ್​ ಲೂಮ್​ ಅಭಿವದ್ಧಿ ನಿಗಮದ ಮಾಜಿ ಅಧ್ಯ ಗೋ. ತಿಪ್ಪೇಶ, ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ, ಕೆಪಿಸಿಸಿ ಹಿಂದುಳಿದ ವರ್ಗದ ಉಪಾಧ್ಯ ದೇವಾನಂದ ಬಳ್ಳಾರಿ, ಕೆಪಿಸಿಸಿ ಉಪಾಧ್ಯ ಆರ್​.ಜೆ. ರಾಮದುರ್ಗ, ದೇವಾಂಗ ಹಾಗೂ ನೇಕಾರ ಸಮಾಜ ಸೇವಾ ಸಂದ ತಾಲೂಕು ಅಧ್ಯ ಅಶೋಕ ಸೂಳಿಭಾವಿ, ಮುಖಂಡ ಶಿವಾನಂದ ಬಳ್ಳಾರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net