ಬಿಜೆಪಿಯವರಿಗೆ ಆಸಕ್ತಿ ಇಲ್ಲ

dkshivakumar
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:

ಅಧಿವೇಶನದಲ್ಲಿ ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳನ್ನು ರ್ಚಚಿಸಲು ನಾವು ಸಿದ್ಧರಿದ್ದೇವೆ. ಆದರೆ, ಬಿಜೆಪಿಯವರಿಗೆ ಆಸಕ್ತಿ ಇಲ್ಲ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಟೀಕಿಸಿದರು.

ಹುಬ್ಬಳ್ಳಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉ.ಕ. ಭಾಗದ ನೀರಾವರಿ ಸಮಸ್ಯೆ ಸೇರಿ ಎಲ್ಲವನ್ನೂ ಚರ್ಚೆ ಮಾಡಲಿದ್ದೇವೆ. ಮಹದಾಯಿ ಯೋಜನೆ ಅನುಷ್ಠಾನ ವಿಚಾರವಾಗಿ ಇತ್ತೀಚೆಗೆ ಕೇಂದ್ರದ ಅರಣ್ಯ ಖಾತೆ ಸಚಿವರನ್ನು ಭೇಟಿ ಮಾಡಿದೆ. ಅವರಿಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರು ಮಹದಾಯಿ ಕುರಿತು ವಿಷಯ ತಿಳಿಸಿದ್ದಾರೆ. ನಾನು ಕೂಡ ವಿಷಯ ತಿಳಿಸಿದ್ದೇನೆ ಎಂದು ಹೇಳಿದರು.

ಮಹದಾಯಿ ಡಿಪಿಆರ್ ಸಂಬಂಧ ಬಿಜೆಪಿಯವರು ವಿಜಯೋತ್ಸವ ಆಚರಿಸಿದ್ದರು. ಅವರು ವಿಜಯೋತ್ಸವ ಮಾಡುವವರು. ನಾವು ಕೆಲಸ ಮಾಡುವವರು. ಅರಣ್ಯ ಅನುಮತಿ ಕೊಡಿಸುವ ಜವಾಬ್ದಾರಿ ಜೋಶಿಯವರ ಮೇಲಿದೆ. ಅನುಮತಿ ಸಿಗುವ ಭರವಸೆ ಕಾಣುತ್ತಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net