ಬಿಜೆಪಿಯಲ್ಲಿಲ್ಲ ಭಿನ್ನಮತ

04 YLP 01
Published on

ಯಲ್ಲಾಪುರ: ಬಿಜೆಪಿಯಲ್ಲಿ ಗುಂಪುಗಾರಿಕೆ, ಭಿನ್ನಮತಗಳಿಲ್ಲ. ಕೇವಲ ಅಭಿಪ್ರಾಯ ಹಂಚಿಕೆ ನಡೆಯುತ್ತಿದೆ ಅಷ್ಟೇ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​ಕುಮಾರ್ ಕಟೀಲ್ ಹೇಳಿದರು.

ಸಚಿವ ಶಿವರಾಮ ಹೆಬ್ಬಾರ ಅವರ ನಿವಾಸಕ್ಕೆ ಶುಕ್ರವಾರ ಭೇಟಿ ನೀಡಿದ ಸಂದರ್ಭದಲ್ಲಿ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.

ಪಕ್ಷದ ಸರ್ಕಾರ ಇರುವಾಗ ಶಾಸಕರ ಭಾವನೆಗೆ ಸ್ಪಂದಿಸಿ, ಅವರಿಗೆ ಯೋಗ್ಯ ಹುದ್ದೆ ನೀಡಬೇಕಾದ ಸಂದರ್ಭದಲ್ಲಿ ಕೆಲವರಲ್ಲಿ ಅಸಮಾಧಾನ ಇರುವುದು ಸಹಜ. ಅದನ್ನು ಪಕ್ಷದ ವೇದಿಕೆಯಲ್ಲಿ ರ್ಚಚಿಸಿ, ಬಗೆಹರಿಸಿಕೊಳ್ಳಲಾಗುತ್ತದೆ. ಅಧಿವೇಶನದ ನಂತರ ಎಲ್ಲವನ್ನೂ ಸರಿಪಡಿಸಲಾಗುವುದು ಎಂದರು.

ಗ್ರಾಮ ಪಂಚಾಯಿತಿ ಚುನಾವಣೆ ಸಿದ್ಧತೆಯಲ್ಲಿ ಉಳಿದ ಪಕ್ಷಗಳಿಗಿಂತ ಬಿಜೆಪಿ ಮುಂಚೂಣಿಯಲ್ಲಿದ್ದು, ಪಕ್ಷ ರಾಜ್ಯದ ಶೇ. 80ರಷ್ಟು ಗ್ರಾ.ಪಂ.ಗಳಲ್ಲಿ ಅಧಿಕಾರಕ್ಕೇರಲಿದೆ. ಪಕ್ಷದ ಬೂತ್ ಮಟ್ಟದ ಪ್ರಮುಖರು, ಪೇಜ್ ಪ್ರಮುಖರು ಸೇರಿ ಎಲ್ಲ ಹಂತದಲ್ಲಿ ಸಂಘಟನೆ ಬಲಪಡಿಸಿದ್ದು, ಪಂಚಸೂತ್ರಗಳನ್ನಿಟ್ಟುಕೊಂಡು ಪಕ್ಷ ಬಲವರ್ಧನೆ ಕಾರ್ಯ ನಡೆದಿದೆ. ರಾಜ್ಯದ ವಿವಿಧೆಡೆ ಗ್ರಾಮಸ್ವರಾಜ್ಯ ಸಮಾವೇಶ ನಡೆದಿದ್ದು, ಉತ್ತಮ ಸ್ಪಂದನೆ ದೊರೆತಿದೆ ಎಂದರು. ವನಜಾಕ್ಷಿ ಹೆಬ್ಬಾರ, ಎಂಎಲ್​ಸಿ ಶಾಂತಾರಾಮ ಸಿದ್ದಿ, ಪ್ರಮೋದ ಹೆಗಡೆ, ಡಾ. ರವಿ ಭಟ್ಟ ಬರಗದ್ದೆ, ವಿನೋದ ಪ್ರಭು, ಗೋಪಾಲಕೃಷ್ಣ ಗಾಂವ್ಕಾರ, ವಿಜಯ ಮಿರಾಶಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net