ಬಿಜೆಪಿಯದ್ದು ಬೋಗಸ್​ ಯಾತ್ರೆ

0704KLB05
Published on

ಕಲಬುರಗಿ: ಕೇಂದ್ರ ರ‍್ಕಾರದಿಂದ ರಾಜ್ಯಕ್ಕೆ ಎಷ್ಟು ಅನುದಾನ ಬಂದಿದೆ, ಯಾವ ಯೋಜನೆಗಳು ಬಂದಿವೆ, ಅಭಿವೃದ್ಧಿ ಕೆಲಸ ಎಷ್ಟು ನಡೆದಿವೆ ಎನ್ನುವ ಬಗ್ಗೆ ಹೇಳಿ ಬಿಜೆಪಿಗರು ಜನಾಕ್ರೋಶ ಯಾತ್ರೆ ನಡೆಸಲಿ. ಬಿಜೆಪಿಯಲ್ಲಿನ ಆಕ್ರೋಶಗಳನ್ನು ಮುಚ್ಚಿಸಲು ಬೋಗಸ್​ ಯಾತ್ರೆಯನ್ನು ನಡೆಸುತ್ತಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್​ ರ‍್ಖಗೆ ವ್ಯಂಗ್ಯವಾಡಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಸೋಮವಾರ ಮಾತನಾಡಿ, ಕೇಂದ್ರ ರ‍್ಕಾರವೇ ತೆರಿಗೆ ಹೆಚ್ಚಿಸಿದೆ. ಅವರು ಮಾಡಿದರೆ ಮಾಸ್ಟರ್​ ಸ್ಟೋಕ್​, ನಾವು (ರಾಜ್ಯ ರ‍್ಕಾರ) ಮಾಡಿದರೆ ಸಮಸ್ಯೆನಾ? ಕೇಂದ್ರ ಕಚ್ಚಾ ತೈಲದ ಬೆಲೆ ಇಳಿಸಲಿ ಆಗ ಇಲ್ಲಿಯೂ ಪೆಟ್ರೋಲ್​ ಹಾಗೂ ಡಿಸೇಲ್​ ಬೆಲೆ ಇಳಿಯಲಿದೆ. ರಾಷ್ಟ್ರದ ರ‍್ಥಿಕತೆ ನಮ್ಮ ಕೈಲಿಲ್ಲ.ಹಾಲಿನ ಬೆಲೆ ಏರಿಕೆಯಿಂದ ರೈತರಿಗೆ ಹಣ ಹೋಗುತ್ತಿದೆ ಎಂದು ಹೇಳಿದರು.

ಜಲ್​ ಜೀವನ್​ ಮಿಷನ್​ ಯೋಜನೆಗೆ ಕೇಂದ್ರ, ರಾಜ್ಯ ರ‍್ಕಾರದಿಂದ ಶೇ.೫೦&೫೦ ಅನುದಾನ ಬಿಡುಗಡೆ ಆಗಬೇಕಿತ್ತು. ಕೇಂದ್ರ ರ‍್ಕಾರ ೩,೨೦೦ ಕೋಟಿ ರೂ.ನಲ್ಲಿ ಕೇವಲ ೫೧೭ ಕೋಟಿ ರೂ. ಬಿಡುಗಡೆ ಮಾಡಿದ್ದಾರೆ. ಬಾಕಿ ಹಣ ಬಿಡುಗಡೆ ಮಾಡಿ ಎಂದು ಪತ್ರ ಬರೆದರೆ ಮುಂದಿನ ರ‍್ಥಿಕ ರ‍್ಷದಲ್ಲಿ ಬಿಡುಗಡೆ ಮಾಡುವುದಾಗಿ ಉತ್ತರ ಬರೆದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ರ‍್ಕಾರ ಕಟ್ಟುವ ತೆರಿಗೆಯಿಂದ ರಾಷ್ಟ್ರ ನಡೆಯುತ್ತಿದೆ. ಜಿಎಸ್​ ಟಿ ಹಾಗೂ ಐಟಿ ತೆರಿಗೆಯಲ್ಲಿ ರಾಜ್ಯ ಎರಡನೇ ಸ್ಥಾನದಲ್ಲಿದೆ. ನಾವು ವರ‍್ಷಿಕ ೪.೫೦ ಲಕ್ಷ ಕೋಟಿ ರೂ. ತೆರಿಗೆ ಕಟ್ಟುತ್ತಿದ್ದೇವೆ. ಐಟಿ ೇತ್ರದಲ್ಲಿ ನಮ್ಮ ಕೊಡುಗೆ ನಂ.೧ ಇದೆ ಎಂದರು.

ಎಲ್ಲರಿಗೂ ಬಜೆಟ್​ ಅನುಕೂಲ: ರಾಜ್ಯ ಬಜೆಟ್​ ಹಲಾಲ್​ ಬಜೆಟ್​ ಎನ್ನುವ ಬಿಜೆಪಿ ಟೀಕೆಗೆ ಪ್ರತಿಕ್ರಿಯಿಸಿದ ಪ್ರಿಯಾಂಕ್​ ರ‍್ಖಗೆ, ಬಜೆಟ್​ ಎಲ್ಲ ರ‍್ಗದವರನ್ನು ಒಳಗೊಂಡಿದೆ. ಅನುದಾನ ಬಳಸಿಯೂ ಅದೇ ಮಾನದಂಡ ಅನುಸರಿಸಿ ಉಪಯೋಗಿಸಲಾಗುತ್ತಿದೆ. ಪ್ರಗತಿ ಪಥ, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್​ ರಾಜ್​ ಇಲಾಖೆಗಳಲ್ಲಿ ನಡೆಯುತ್ತಿರುವ ಅಭಿವೃದ್ದಿ ಹಾಗೂ ಗ್ಯಾರಂಟಿ ಯೋಜನೆ ಮುಸ್ಲಿಮರಿಗೆ ಮಾತ್ರ ಸೀಮಿತ ಇದೇನಾ? ೪ ಲದ ಬಜೆಟ್​ನಲ್ಲಿ ಮರ‍್ನಾಲ್ಕೂ ಸಾವಿರ ರೂ. ಅಲ್ಪಸಂಖ್ಯಾತರಿಗೆ ನೀಡಲಾಗಿದೆ. ಬರೀ ಮುಸ್ಲಿಮರು ಮಾತ್ರ ಇಲ್ಲ ಎಂದರು.

ಬಸನಗೌಡ ಪಾಟೀಲ್​ ಯತ್ನಾಳ ಆರೋಗ್ಯವಂತರಾಗಿ ಇರಲಿ. ಅವರ ಸಿದ್ಧಾಂತಗಳು ನಮಗೆ ಒಪ್ಪುವುದಿಲ್ಲ, ಅವರು ಪಕ್ಕೆ ಬರುವುದು ಬೇಡ. ಅವರಿಗೆ ನಾವು ಆಹ್ವಾನವನ್ನು ನೀಡಿಲ್ಲ ಎಂದು ಹೇಳಿದರು. ಕೇಂದ್ರ ಸಚಿವ ಎಚ್​.ಡಿ.ಕುಮಾರಸ್ವಾಮಿ ಅವರು ನರ‍್ಮಲಾ ಸೀತಾರಾಮನ್​ ಅವರಿಗೆ ರಾಜ್ಯದ ಅಭಿವೃದ್ಧಿಗೆ ಬಗ್ಗೆ ಹೇಳಲಿ. ಹೊಸ ಕೈಗಾರಿಕೆ, ಯೋಜನೆಗಳನ್ನು ತರಲಿ. ಇಡೀ ಜಗತ್ತು ಎಐ ಬಗ್ಗೆ ಮಾತನಾಡುತ್ತಿದ್ದು, ಎಚ್​ಡಿಕೆ ಔರಂಗಜೇಬ್​ನ ಬಗ್ಗೆ ಮಾತನಾಡುತ್ತಿದೆ ಎಂದು ಸಲಹೆ ನೀಡಿದರು.

ರಾಜ್ಯ ರ‍್ಕಾರ ಮತ್ತು ರಾಜ್ಯಪಾಲರ ಮಧ್ಯೆ ಸರ‍್ಷವಿಲ್ಲ. ಜನರಿಂದ ಆಯ್ಕೆಯಾದ ಶಾಸಕರಿರುವ ಶಾಸನ ಸಭೆ ಮಾಡಿರುವ ವಿಧೇಯಕ ಅಡ್ಡಿಪಡಿಸಿದರೆ ನಾವೇಕೆ ಇರಬೇಕು. ತಪ್ಪು ಮಾಡಿದರೆ ಕಿವಿ ಹಿಂಡಲಿ. ವಿಧೇಯಕದ ಬಗ್ಗೆ ಸ್ಪಷ್ಟನೆ ಕೇಳಿದರೆ ಕೊಡುತ್ತೇವೆ. ತಿರಸ್ಕಾರ ಮಾಡಿದ್ದಾರೆ ಎಂದು ಕಿಡಿ ಕಾರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net