ಬಿಜೆಪಿಗೆ ಸೋಲು, ಯುವ ಮೋರ್ಚಾಕ್ಕೆ ರಾಜೀನಾಮೆ

PH 01
ರಾಜೀನಾಮೆ ನೀಡಿರುವ ಪ್ರಶಾಂತ ಕೇರಿ.
Published on

ಸೇಡಂ: ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಜಕುಮಾರ ಪಾಟೀಲ್ ತೆಲ್ಕೂರ ಅವರು ಸೋಲನುಭವಿಸಿದ್ದರಿಂದ ನೋವಿನಿಂದ ಬಿಜೆಪಿ ಯುವ ಮೋರ್ಚಾ ತಾಲೂಕು ಅಧ್ಯಕ್ಷ ಪ್ರಶಾಂತ ಕೇರಿ ರಾಜೀನಾಮೆ ಸಲ್ಲಿಸಿದ್ದಾರೆ.

ಈ ಕುರಿತು ತಾಲೂಕು ಅಧ್ಯಕ್ಷರಿಗೆ ಪತ್ರ ಬರೆದಿರುವ ಅವರು, ಕಳೆದ ಐದು ವರ್ಷದ ಅವಧಿಯಲ್ಲಿ ತೆಲ್ಕೂರ ಅವರು ಅನೇಕ ಜನಪರ ಕೆಲಸ, ಕಾರ್ಯಗಳನ್ನು ಕೈಗೊಂಡಿದ್ದರು. ಆದರೂ ಕ್ಷೇತ್ರದ ಜನ ಅವರ ಕೈಹಿಡಿಯದಿರುವುದು ತೀರಾ ನೋವು ತಂದಿದೆ. ಸಹಕಾರಿ ಬ್ಯಾಂಕಿನ ಮೂಲಕ ನೂರಾರು ರೈತರಿಗೆ, ಮಹಿಳೆಯರಿಗೆ ಬಡ್ಡಿ ರಹಿತ ಸಾಲ ನೀಡಿದ್ದಾರೆ. ಹಣದ ಮುಂದೆ ಕೆಲಸ ಶೂನ್ಯವಾಯಿತು. ಈ ಸೋಲಿನಿಂದ ನೋವಾಗಿದ್ದು, ರಾಜೀನಾಮೆ ಸಲ್ಲಿಸುತಿದ್ದೇನೆ ಎಂದು ಪತ್ರದಲ್ಲಿ ವಿವರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net