

ಬಸವಕಲ್ಯಾಣ: ಹಡಪದ ಸಮಾಜ ಸಾಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯವಾಗಿ ಹಿಂದುಳಿದಿದೆ. ಬಿಜೆಪಿ ಸರ್ಕಾರದಿಂದ ಸಮಾಜಕ್ಕೆ ಯಾವುದೇ ಸಹಾಯ, ಸೌಲಭ್ಯ ಕಲ್ಪಿಸಿಲ್ಲ ಎಂದು ಆರೋಪಿಸಿ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಈರಣ್ಣ ಸಣ್ಣೂರ ತಮ್ಮ ನಾಮಪತ್ರ ಹಿಂಪಡೆದಿದ್ದಾರೆ.
ಕಣದಿಂದ ಹಿಂದೆ ಸರಿಯುವ ಜತೆಗೆ ಅವರು ಬಿಜೆಪಿಗೂ ಜೈ ಎಂದಿದ್ದಾರೆ. ಪ್ರಾಧಿಕಾರ ರಚನೆ ಸೇರಿದಂತೆ ಸಮಾಜದ ವಿವಿಧ ಬೇಡಿಕೆ ಈಡೇರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು, ಸಮಾಜದ ಮುಖಂಡರಿಗೆ ರಾಜಕೀಯವಾಗಿ ಉತ್ತಮ ಸ್ಥಾನ-ಮಾನ ಕಲ್ಪಿಸಲಾಗುವುದು ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಹಾಗೂ ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ ಕಟೀಲ್ ನೀಡಿದ ಭರವಸೆ ಹಿನ್ನೆಲೆಯಲ್ಲಿ ನಾಮಪತ್ರ ಹಿಂಪಡೆದು, ಬಿಜೆಪಿಗೆ ಬೆಂಬಲಿಸಲು ನಿರ್ಧರಿಸಿರುವೆ ಎಂದು ಸಣ್ಣೂರ್ ತಿಳಿಸಿದ್ದಾರೆ.