ಬಿಜೆಪಿಗೆ ಪಾಠ ಕಲಿಸಲು ಜಾಗೃತಿ

Doddamallaiah
Published on

ಚಿತ್ರದುರ್ಗ: ಕಾಡುಗೊಲ್ಲರನ್ನು ಎಸ್ಟಿಗೆ ಸೇರಿಸುವ ಪ್ರಧಾನಿ ನರೇಂದ್ರ ಮೋದಿ ಅವರ ಭರವಸೆ ಈವರೆಗೂ ಈಡೇರಿಲ್ಲ. ಹೀಗಾಗಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಾಗುವುದು ಎಂದು ರಾಜ್ಯ ಕಾಡುಗೊಲ್ಲ ಸಂಘಟನೆ ಒಕ್ಕೂಟದ ಅಧ್ಯಕ್ಷ ಡಾ.ದೊಡ್ಡಮಲ್ಲಯ್ಯ ಹೇಳಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಎಲ್ಲ ಸಮುದಾಯಕ್ಕೂ ಸಾಮಾಜಿಕ ನ್ಯಾಯ ಬಿಜೆಪಿಯಿಂದ ಸಾಧ್ಯವಿಲ್ಲ. ಕಾಡುಗೊಲ್ಲರಿಗೆ ಕಾಂಗ್ರೆಸ್ ಸಾಕಷ್ಟು ಅವಕಾಶ ನೀಡಿದೆ. ಸಮುದಾಯ ಅದನ್ನು ಎಂದಿಗೂ ಮರೆಯುವುದಿಲ್ಲ ಎಂದರು.

ಒಕ್ಕೂಟದ ಮುಖಂಡ ಕಿರಣ್‌ಯಾದವ್ ಮಾತನಾಡಿ, ಕಾಡುಗೊಲ್ಲರು ಕೂಡ ರಾಜ್ಯದ ಅನೇಕ ಕ್ಷೇತ್ರಗಳಲ್ಲಿ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ. ಆದರೆ, ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಸಮುದಾಯ ಬಳಸಿಕೊಂಡು ಆನಂತರ ನಿರ್ಲಕ್ಷೆ ತೋರುತ್ತಿದೆ. ಹೀಗಾಗಿ ತಕ್ಕ ಪಾಠ ಕಲಿಸುವಂತೆ ಸಮುದಾಯದವರಲ್ಲಿ ಜಾಗೃತಿ ಮೂಡಿಸುತ್ತಿದ್ದೇವೆ. ಅಲ್ಲದೆ, ಬಿಜೆಪಿಗರು ಮತಯಾಚಿಸಲು ಬಂದರೆ ಹಟ್ಟಿಗಳಲ್ಲಿ ಬಿಟ್ಟುಕೊಳ್ಳುವುದಿಲ್ಲ ಎಂದು ತಿಳಿಸಿದರು.

ಒಕ್ಕೂಟದ ಬಿ.ಡಿ.ಬಸವರಾಜ್, ಕೂನಿಕೆರೆ ರಾಮಣ್ಣ, ಸಿ.ಬಿ.ಪಾಪಣ್ಣ, ಜಿ.ವಿ.ಲಕ್ಷ್ಮ್ಮಿದೇವಿ, ಸಂಪತ್‌ಕುಮಾರ್, ರಂಗಯ್ಯ, ಚಿತ್ತಯ್ಯ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net