ಬಿಜೆಪಿ ಸೇರ್ಪಡೆಗೆ ನಾಯಕರ ದಂಡು, ಆರ್.ಎಸ್. ಪಾಟೀಲ ಕೂಚಬಾಳ ಹೇಳಿದ್ದೇನು? ಕಮಲ ಹಿಡಿಯುವ‌‌ ಕಲಿಗಳು ಯಾರು ಗೊತ್ತಾ‌ ?

20211001_101000
Published on

ವಿಜಯಪುರ: ರಾಜ್ಯ ಹಿಂದುಳಿದ ವರ್ಗಗಳ‌ ಮೋರ್ಚಾದ ರಾಜ್ಯ ಕಾರ್ಯಕಾರಿಣಿ ಅ.5 ರಂದು ಹಮ್ಮಿಕೊಳ್ಳಲಾಗಿದ್ದು, ಇದೇ ಸಂದರ್ಭ ಹಲವು ಮುಖಂಡರು ಬಿಜೆಪಿ‌ ಸೇರ್ಪಡೆಯಾಗಲಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ ಕೂಚಬಾಳ ತಿಳಿಸಿದರು.

ಜೆಡಿಎಸ್ ಮುಖಂಡ ಸೋಮನಗೌಡ ಊರ್ಫ್

ಅಪ್ಪುಗೌಡ ಪಾಟೀಲ, ಕಾಂಗ್ರೆಸ್ ನ ಜಿಪಂ‌ ಮಾಜಿ ಅಧ್ಯಕ್ಷ ಉಮೇಶ ಕೋಳಕೂರ, ಶಿವಯೋಗಪ್ಪ‌ ನೇದಲಗಿ, ಜಿಪಂ ಮಾಜಿ ಸದಸ್ಯ ಶಿವಶರಣ ಭೈರಗೊಂಡ, ದೇವರಹಿಪ್ಪರಗಿಯ ಸುರೇಶಗೌಡ ಪಾಟೀಲ, ದ್ಯಾಮಗೊಂಡ ಕಾಂಬ್ಳೆ ಮತ್ತಿತರರು ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.

ನಗರದ ರಾಣಿ‌‌ ಚನ್ನಮ್ಮ ಮಂಗಲ ಕಾರ್ಯಾಲಯದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ

ಬಿಜೆಪಿ‌ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ, ಸಚಿವ ಕೆ.ಎಸ್. ಈಶ್ವರಪ್ಪ ನೇತೃತ್ವದಲ್ಲಿ ಪಕ್ಷ ಸೇರ್ಪಡೆಯಾಗಲಿದ್ದಾರೆ ಎಂದು ಕೂಚಬಾಳ ತಿಳಿಸಿದರು.

ಪಕ್ಷ ಸೇರ್ಪಡೆಯಾಗುವವರು ಯಾವುದೇ ಷರತ್ತು ಹಾಕಿಲ್ಲ. ಬೇಷರತ್ತಾಗಿ ಸೇರ್ಪಡೆ‌ ಮಾಡಿಕೊಳ್ಳಲಾಗುತ್ತಿದೆ‌‌ ಎಂದರು.

ಶಾಸಕರಾದ ಸೋಮನಗೌಡ ಪಾಟೀಲ ಸಾಸನೂರ, ಅರುಣ ಶಹಾಪುರ, ಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಶೋಕ ಅಲ್ಲಾಪುರ,

ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ದಯಾಸಾಗರ ಪಾಟೀಲ, ರಮೇಶ ಭೂಸನೂರ, ವಿವೇಕಾನಂದ ಡಬ್ಬಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net