ಬಿಜೆಪಿ ಸೇರ್ಪಡೆ ಕೇವಲ ಊಹಾಪೋಹ

Vinay Kulkarni
Published on

ಧಾರವಾಡ: ಬಿಜೆಪಿ ಸೇರ್ಪಡೆ ಕೇವಲ ವದಂತಿ. ನಾನು ಯಾವ ನಾಯಕರನ್ನೂ ಭೇಟಿಯಾಗಿಲ್ಲ. ನನ್ನ ಮುಂದೆ ಯಾವುದೇ ಪ್ರಸ್ತಾಪವೂ ಬಂದಿಲ್ಲ. ಎಲ್ಲವೂ ಮಾಧ್ಯಮಗಳ ಊಹಾಪೋಹ ಎಂದು ಮಾಜಿ ಸಚಿವ ವಿನಯ ಕುಲಕರ್ಣಿ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಬೆಳೆದು ಬಂದ ದಾರಿಯೇ ಬೇರೆ. ಮೊದಲ ಬಾರಿಗೆ ಪಕ್ಷೇತರನಾಗಿ ಸ್ಪರ್ಧಿಸಿ ಶಾಸಕನಾಗಿದ್ದೆ. ಹೀಗಾಗಿ, ನನ್ನ ಜತೆಯಲ್ಲಿರುವ ಕಾರ್ಯಕರ್ತರು ಮತ್ತು ಎಲ್ಲ ಸಮಾಜದ ಜನರನ್ನು ಕೇಳದೇ ಯಾವುದೇ ನಿರ್ಧಾರ ತೆಗೆದುಕೊಳ್ಳುವುದಿಲ್ಲ ಎಂದರು.

ಎಂಎಲ್​ಸಿ ಸಿ.ಪಿ. ಯೋಗೇಶ್ವರ ಕುದುರೆ ಖರೀದಿಗೆ ಬಂದಿದ್ದರು. ನನ್ನಿಂದ 6 ಕುದುರೆಗಳನ್ನು ತೆಗೆದುಕೊಂಡು ಹೋಗಿದ್ದಾರೆ. ಬಿಜೆಪಿ ಸೇರ್ಪಡೆ ವಿಚಾರವಾಗಿ ನಾನು ಯಾರನ್ನೂ ಭೇಟಿಯಾಗಿ ಮಾತನಾಡಿಲ್ಲ. ಈ ವಿಚಾರವಾಗಿ ಯಾವುದೇ ಸ್ವಾಮೀಜಿಗಳು ಮಾತನಾಡಿಲ್ಲ. ನಾನು ದೊಡ್ಡ ಲೀಡರ್ ಅಲ್ಲ. ಮಾಧ್ಯಮದವರು ದಾಖಲೆಗಳು ಇಲ್ಲದೆ ಸುದ್ದಿ ಮಾಡಬೇಡಿ ಎಂದು ವಿನಂತಿಸಿದರು.

ಸಿಬಿಐನಿಂದ ತಪ್ಪಿಸಿಕೊಳ್ಳಲು ಬಿಜೆಪಿ ಸೇರ್ಪಡೆಯಾಗುತ್ತಿದ್ದಾರೆ ಎಂದು ಸುದ್ದಿ ಆಗುತ್ತಿದೆ. ಹಾಗಾದರೆ ಸಿಬಿಐ ಬಿಜೆಪಿ ಅಡಿ ಕೆಲಸ ಮಾಡುತ್ತದೆಯೆ? ನಾನು ಬಿಜೆಪಿಗೆ ಹೋದರೆ ಬಿಟ್ಟು ಬಿಡುತ್ತಾರಾ? ಈಗಾಗಲೇ (ಯೋಗೀಶಗೌಡ ಹತ್ಯೆ ಪ್ರಕರಣದಲ್ಲಿ) 700 ಜನರ ವಿಚಾರಣೆ ಮಾಡಿದ್ದಾರೆ. 1 ವರ್ಷ 3 ತಿಂಗಳಿಂದ ಸಿಬಿಐ ವಿಚಾರಣೆ ನಡೆಯುತ್ತಿದೆ. ಅದರ ಬಗ್ಗೆ ನನಗೇನೂ ಗೊತ್ತಿಲ್ಲ ಎಂದರು.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net