ಬಿಜೆಪಿ ಸೇರಿದ ಯುವಕರ ತಂಡ

HOLE N PURA (1)
ಬಿಜೆಪಿ ಅಭ್ಯರ್ಥಿ ಜಿ.ದೇವರಾಜೆಗೌಡ ನೇತೃತ್ವದಲ್ಲಿ ಚನ್ನಾಪುರ ಗ್ರಾಮದ ಯುವಕರು ಜೆಡಿಎಸ್ ತೊರೆದು ಕಮಲ ಸೇರ್ಪಡೆಯಾದರು. ಶ್ರೀಪತಿ, ನಿಂಬೆಹಳ್ಳಿ ಗಿರೀಶ್ ಇದ್ದರು.
Published on

ಹೊಳೆನರಸೀಪುರ: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ದಂಡಿಗನಹಳ್ಳಿ ಹೋಬಳಿಯ ಚನ್ನಾಪುರ ಗ್ರಾಮದ ಹಲವಾರು ಯುವಕರು ಗುರುವಾರ ಜೆಡಿಎಸ್ ತೊರೆದು ಭಾರತೀಯ ಜನತಾ ಪಕ್ಷ ಸೇರ್ಪಡೆಯಾದರು.

ಯುವಕರನ್ನು ಬರಮಾಡಿಕೊಂಡು ಮಾತನಾಡಿದ ಪಕ್ಷದ ಅಭ್ಯರ್ಥಿ ಜಿ.ದೇವರಾಜೆಗೌಡ, ಬಿಜೆಪಿಯ ತತ್ವ-ಸಿದ್ಧಾಂತವನ್ನು ಒಪ್ಪಿ ಸೇರಿಕೊಳ್ಳುವ ಕಾರ್ಯಕರ್ತರಿಗೆ ಪಕ್ಷ ರಕ್ಷಣೆ, ಗೌರವ, ಸ್ಥಾನಮಾನ ನೀಡತ್ತದೆ. ಪಕ್ಷಕ್ಕೆ ಬರುವವರನ್ನು ಆತ್ಮೀಯವಾಗಿ ಬರಮಾಡಿಕೊಂಡು ಪಕ್ಷ ಸಂಘಟನೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗೋಣ ಎಂದರು.

ವಿರೋಧಪಕ್ಷಗಳ ಕಾರ್ಯವೈಖರಿಗೆ ಬೇಸತ್ತು ಅನೇಕ ಗ್ರಾಮಗಳ ಯುವಕರು ಪಕ್ಷಕ್ಕೆ ಸೇರ್ಪಡೆಯಾಗುತ್ತಿರುವುದರಿಂದ ಬಲ ಹೆಚ್ಚಾಗಿದೆ. ಗ್ರಾಮಗಳ ಅಭಿವೃದ್ಧಿ ಹಾಗೂ ಏಳಿಗೆಗೆ ಬಿಜೆಪಿ ಸದಾ ಸಿದ್ಧವಿರಲಿದೆ ಎಂದು ಹೇಳಿದರು.

ಆನೆಕೆರೆ ಮುಖಂಡ ಮಿಲ್ ಮಂಜಣ್ಣ ನೇತ್ರತ್ವದಲ್ಲಿ ಪಕ್ಷಕ್ಕೆ ಸೇರ್ಪಡೆಗೊಂಡವರನ್ನು ಆತ್ಮೀಯವಾಗಿ ಅಭಿನಂದಿಸಿದರು. ಮಂಡಲ ಅಧ್ಯಕ್ಷ ಶ್ರೀಪತಿ, ನಿಂಬೆಹಳ್ಳಿ ಗಿರೀಶ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net