ಬಿಜೆಪಿ ಸರ್ಕಾರವು ಫ್ಯಾಸಿಸ್ಟ್ ಸಂಸ್ಕೃತಿ ಹೊಂದಿದೆ : ಬಿನೊಯ್ ವಿಶ್ವಂ

ಬಿಜೆಪಿ ಸರ್ಕಾರವು ಫ್ಯಾಸಿಸ್ಟ್ ಸಂಸ್ಕೃತಿ ಹೊಂದಿದೆ : ಬಿನೊಯ್ ವಿಶ್ವಂ
Published on

ಹಾಸನ : ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರವು ಫ್ಯಾಸಿಸ್ಟ್ ಸಂಸ್ಕೃತಿ ಹೊಂದಿದ್ದು, ಮುಂದಿನ ಚುನಾವಣೆಯಲ್ಲಿ ಅಧಿಕಾರಕ್ಕೆ ಬಾರದಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ದೇಶದ ಎಲ್ಲಾ ಭಾಗಗಳಲ್ಲೂ ಇಂತಹ ಸಮ್ಮೇಳನಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯಸಭಾ ಸದಸ್ಯ ಬಿನೊಯ್ ವಿಶ್ವಂ ತಿಳಿಸಿದರು.

  ನಗರದ ತಣ್ಣೀರುಹಳ್ಳ, ಸಕಲೇಶಪುರ ರಸ್ತೆಯಲ್ಲಿರುವ ಎಂ.ಕೆ ಕನ್‌ವೆನ್ಷನ್ ಹಾಲ್‌ನಲ್ಲಿ ಭಾನುವಾರದಂದು ನಡೆದ ಭಾರತ ಕಮ್ಯೂನಿಸ್ಟ್ ಪಕ್ಷದ 24ನೇ ಮೂರು ದಿನದ ರಾಜ್ಯಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಆರ್‌ಎಸ್‌ಎಸ್ ಹಿಡಿತದಲ್ಲಿರುವ ಬಿಜೆಪಿ ಸರ್ಕಾರವು ಫ್ಯಾಸಿಸ್ಟ್ ಸಂಸ್ಕೃತಿಯನ್ನು ಒಳಗೊಂಡಿದೆ  ಸರ್ಕಾರದ ಮುಖ್ಯ ಅಜಂಡ ಜಾತೀಯತೆಯಲ್ಲಿ ಸರ್ಕಾರ ನಡೆಸಲಾಗುತ್ತಿದೆ ಎಂದು ದೂರಿದರು .

ಬಿಜೆಪಿ ಹಂತ ಹಂತವಾಗಿ ದೇಶದಲ್ಲಿ ಎಲ್ಲ ರಾಜ್ಯಗಳಲ್ಲಿ ಅಸ್ತಿತ್ವ ಕಾಣುತ್ತ ಅಧಿಕಾರಕ್ಕೆ ಬರುತ್ತಿದ್ದು 2024ರ ಚುನಾವಣೆಯನ್ನು ಗೆಲ್ಲುವ ವಿಶ್ವಾಸ ಹೊಂದಿದೆ. ಮತ್ತೆ ಬಿಜೆಪಿ ಅಧಿಕಾರಕ್ಕೆ ಬಾರದಂತೆ ದೇಶದಲ್ಲಿ ಸಿಪಿಐ ಸೇರಿದಂತೆ ಎಡ ಪಕ್ಷಗಳು ಸಂಘಟಿತರಾಗಿ ಹೋರಾಟ ನಡೆಸಬೇಕಿದೆ. ಈ ಉದ್ದೇಶದಿಂದಲೇ ದೇಶದ ಎಲ್ಲಾ ರಾಜ್ಯಗಳಲ್ಲೂ ಸಿಪಿಐ ಸಮ್ಮೇಳವನ್ನು ಆಯೋಜನೆ ಮಾಡಲಾಗುತ್ತಿದೆ ಎಂದರು.

ಇಂತಹ ಕೋಮುವಾದಿ ಸರ್ಕಾರವನ್ನು ಸೋಲಿಸುವ ನಿಟ್ಟಿನಲ್ಲಿ ಎಡಪಕ್ಷಗಳು ಸೇರಿ ಸಮ್ಮಿಶ್ರ ಸರ್ಕಾರ ರಚಿಸುವ ಗುರಿಯನ್ನಿಟ್ಟುಕೊಂಡು ಒಟ್ಟಾಗಬೇಕಾಗಿದೆ. ಮುಂದಿನ ದಿನಗಳಲ್ಲಿ ಕೇರಳ ಮತ್ತು ವಿಜಯವಾಡಾದಲ್ಲಿ ಸಮ್ಮೇಳನ ನಡೆಸಲಾಗುವುದು ಎಂದು ಉದ್ದೇಶವನ್ನು ತಿಳಿಸಿದರು.

 ಸಿಪಿಐ ರಾಜ್ಯ ಕಾರ್ಯದರ್ಶಿ ಕಾ. ಸಾಥಿ ಸುಂದರೇಶ್ ಮಾತನಾಡಿ, ಕೋವಿಡ್ ಮಹಾಮಾರಿಗೆ  ಜನಸಾಮಾನ್ಯರು ಸಿಲುಕಿ ಪ್ರತಿದಿನ ಹಸಿವುವಿನಿಂದ ಸಾಯುತ್ತಿದ್ದಾರೆ. ಈ ದೇಶದಲ್ಲಿ ಬಂಡವಾಳ ಶಾಯಿಗಳಿಗೆ ಸರ್ಕಾರದ ಆಸ್ತಿಗಳನ್ನು ಮಾರಾಟ ಮಾಡುತ್ತ ಮದ್ಯಮ ವರ್ಗದವರು ಸೇರಿದ ಬಡವರ ಜೀವನ ಮೂರಬಟ್ಟೆಯಾಗುವಂತೆ ಮಾಡಿದೆ ಈ ಸರ್ಕಾರ ಎಂದು ದೂರಿದರು. 

ಬಿಜೆಪಿ ಸರ್ಕಾರ ಬಂದಾಗಿನಿಂದ ಉಳ್ಳವರ ಪರ ಕೆಲಸ ಮಾಡಲಾಗುತ್ತಿದೆ. ಶ್ರೀಮಂತರು ಶ್ರೀಮಂತರಾಗಿಯೇ ಉಳಿದರೇ, ಬಡವರು ಬಡವರಾಗಿಯೇ ಉಳಿಯುತ್ತಿರುವುದು ಆತಂಕದ ವಿಚಾರವಾಗಿದೆ ಎಂದರು.

ರಾಜಕೀಯ ವ್ಯವಸ್ಥೆಯಿಂದ ದೀನ ದಲಿತರ, ರೈತರ, ಮಹಿಳೆಯರ, ಕಾರ್ಮಿಕರ, ಮತ್ತು ಬಡವರ ಬದುಕು ನಲುಗಿ ಹೋಗಿದೆ. ಜನರಿಗೆ ಈ ರಾಜಕಿಯ ಪಕ್ಷಗಳ ಬಗ್ಗೆ ತಿಳಿಸಿ ಎಲ್ಲಾರು ದೇಶ ಉಳಿಸಲು ಕೈ ಜೋಡಿಸಬೇಕಿದೆ. ಕಮ್ಯೂನಿಸ್ಟ್ ಪಕ್ಷವನ್ನು ಬೆಂಬಲಿಸುವ ಮೂಲಕ ಈ ದೇಶದಲ್ಲಿರುವ ಜನರಿಗೆ ಉತ್ತಮ ಸೇವೆ ಕೊಡಲು ಅವಕಾಶ ಕಲ್ಪಿಸಬೇಕಾಗಿದೆ ಎಂದು ಕರೆ ನೀಡಿದರು.

ಭಾರತ ಕಮ್ಯೂನಿಸ್ಟ್ ಪಕ್ಷದ ಜಿಲ್ಲಾ ಕಾರ್ಯದರ್ಶಿ ಎಂ.ಸಿ. ಡೋಂಗ್ರೆ ಅವರು ಪ್ರಾಸ್ತಾವಿಕ ನುಡಿಯಲ್ಲಿ ಮಾತನಾಡಿ, ಇಲ್ಲಿನ ಇತಿಹಾಸ ಗಮನಿಸಿದರೇ ವಿಶಿಷ್ಟವಾದ ಜಾಗವಾಗಿದೆ. ಆದರೇ ಬಹತ್ವದ ಕೊರತೆಯು ಹಾಸನದಲ್ಲಿ ಮೊದಲಿನಿಂದಲೂ ಇದ್ದು, ಈ ನಿಟ್ಟಿನಲ್ಲಿ ಪ್ರಭುತ್ವ ಇಟ್ಟುಕೊಂಡು ಹೊಸ ರಾಜಕೀಯ ತರಲು ಮುಂದಾಗುವಂತೆ ಕರೆ ಕೊಟ್ಟರು.

ಕಾರ್ಯಕ್ರಮಕ್ಕೆ ಮೊದಲು ಶಾಂತಿ ಸೌಹಾರ್ದತೆ ಸಾರುವ ಕಲಾ ಜಾಥಾಕ್ಕೆ ನಗರದ ಹೇಮಾವತಿ ಪ್ರತಿಮೆ ಬಳಿ ಹಿರಿಯ ಕಲಾವಿದ ಗ್ಯಾರಂಟಿ ರಾಮಣ್ಣ ಚಾಲನೆ ನೀಡಿದರು. ನಂತರ ತಣ್ಣೀರುಹಳ್ಳ ವೃತ್ತದಿಂದ ಎಂ.ಕೆ. ಸಮುದಾಯ ಭವನದವರೆಗೂ ರೆಡ್ ಯೂನಿ ಫಾರಂ ಹಾಕಿದ ಕಾರ್ಯಕರ್ತರು ಸಾಲಿನಲ್ಲಿ ಮೆರವಣಿಗೆ ಮೂಲಕ ಬಂದು ಸಮ್ಮೇಳನದಲ್ಲಿ ಪಾಲ್ಗೊಂಡರು. ಸಿಪಿಐ ಧ್ವಜವನ್ನು ಹಾರಿಸಿ ಜ್ಯೋತಿಯನ್ನು ಬರಮಾಡಿಕೊಂಡರು. ಸಮ್ಮೇಳದಲ್ಲಿ ಎರಡು ನಿಮಿಷ ಮೌನ ಆಚರಿಸಲಾಯಿತು.

ಸಿಪಿಐ ಸಿಪಿಐ ಹಾಗೂ ಇತರೆ ಸಂಘಟನೆಗಳ ಪಿ.ವಿ ಲೋಕೆಶ್, ಕೆ. ಗುಣಶೇಖರ್, ಎಚ್.ಆರ್ ಶೇಷಾದ್ರಿ, ಎ. ಜ್ಯೋತಿ, ದಿನೇಶ್, ಜಿಲ್ಲಾ ಸಹಕಾರ್ಯದರ್ಶಿ ಸಿ. ಧರ್ಮರಾಜ್ ಎಐಎಫ್‌ಬಿ ರಾಜ್ಯ ಕಾರ‌್ಯದರ್ಶಿ ಶಿವಶಂಕರ್, ಎಸ್‌ಯುಸಿಐ ನ ರಾಜ್ಯ ಕಾರ‌್ಯದರ್ಶಿ ಉಮಾ, ಆರ್‌ಪಿಐ ಮೋಹನ್, ಸಿಪಿಐ ಜಿಲ್ಲಾ ಕಾರ್ಯದರ್ಶಿ ಬಿ.ಎಂ. ಮಧು, ಮಣಿ, ಅಪ್ಪಣ್ಣ, ಬಸವರಾಜು, ಪಾಟೀಲ್ ಸಿದ್ದನಗೌಡ ಸೇರಿದಂತೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net