ಬಿಜೆಪಿ ಸರ್ಕಾರದಿಂದ ಮಹಿಳೆ ರಕ್ಷಣೆ ಅಸಾಧ್ಯ

29-SDMAPR-01
filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 32768;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 47;
Published on

ಸೇಡಂ: ದೇಶದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ನೇತೃತ್ವದ ಸರ್ಕಾರ ಶ್ರೀಮಂತರ ಸರ್ಕಾರವಾಗಿದೆ. ಬಡವರಿಗೆ, ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ ಎಂದು ಕಾಂಗ್ರೆಸ್ ರಾಷ್ಟಿಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಹೇಳಿದರು.

ಪಟ್ಟಣದ ತಾಲೂಕು ಕ್ರೀಡಾಣಂಗದಲ್ಲಿ ಕಾಂಗ್ರೆಸ್ ಪಕ್ಷದಿಂದ ಸೋಮವಾರ ಆಯೋಜಿಸಿದ್ದ ಬಹಿರಂಗ ಸಮಾವೇಶದಲ್ಲಿ ಮಾತನಾಡಿ, ಮಹಿಳೆಯರ ಮೇಲೆ ಅತ್ಯಾಚಾರವಾಗಿತ್ತು. ಆಗ ಮೋದಿ ಸುಮ್ಮನಿದ್ದರು. ಮೋದಿಯೊಂದಿಗಿರುವ ವ್ಯಕ್ತಿ ಇಂದು ಕರ್ನಾಟಕದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ಎಸಗಿದ್ದಾರೆ. ಅದೆ ವ್ಯಕ್ತಿಯ ಪರ ಮತಯಾಚಿಸಿದ್ದ ಮೋದಿ ಹಾಗೂ ಅಮಿತ್ ಶಾ ಇದಕ್ಕೆ ಉತ್ತರಿಸಲಿ. ಬಿಜೆಪಿ ಸರ್ಕಾರದಿಂದ ಮಹಿಳೆಯರ ರಕ್ಷಣೆ ಅಸಾಧ್ಯ ಎಂದು ಹೇಳಿದರು.
ಕಲ್ಯಾಣ ಭಾಗ ಶರಣರ ಪವಿತ್ರ ಭೂಮಿಯಾಗಿದೆ. ಸತ್ಯ ಹಾಗೂ ಕ್ರಾಂತಿಯ ಕರ್ಮಭೂಮಿಯಾಗಿದೆ. ಮನೆಯಲ್ಲಿ ತಾಯಿ ಮಕ್ಕಳು ಸತ್ಯ ಹೇಳುವಂತೆ ಹೇಳುತ್ತಾಳೆ. ಮಹಾತ್ಮ ಗಾಂಧಿ ಸತ್ಯದ ಹಾದಿಯಲ್ಲೆ ನಡೆದರು. ಕಾಂಗ್ರೆಸ್ ರಾಜಕೀಯದ ಹಾದಿಯಲ್ಲೇ ನಡೆದಿದೆ. ಕಳೆದ ಹತ್ತು ವರ್ಷದಿಂದ ಹಾದಿ ಬದಲಾಗಿದೆ. ದೇಶದಲ್ಲಿ ನಿರುದ್ಯೋಗ ತಾಂಡವವಾಡುತ್ತಿದೆ. ಶಿಕ್ಷಣ ಪಡೆದವರಿಗೆ ಉದ್ಯೋಗ ಸಿಗದ ಪರಿಣಾಮ ನಗರಗಳಿಗೆ ವಲಸೆ ಹೋಗುತ್ತಿದ್ದಾರೆ ಎಂದು ಹೇಳಿದರು.

ದೇಶದ ಯವಕರು ಸೇನೆಯಲ್ಲಿ ಸೇವೆ ಸಲ್ಲಿಸಲು ಉತ್ಸುಕರಾಗಿದ್ದರು. ಆದರೆ ಅಗ್ನಿವೀರ ಯೋಜನೆ ಜಾರಿಗೆ ತಂದು ಸೈನ್ಯಕ್ಕೆ ಸೇರುವ ಯುವಕರ ಕನಸಿಗೆ ಕೊಳ್ಳಿ ಇಡಲಾಯಿತು. ಜಿಎಸ್‌ಟಿ ನೋಟ್ ಬಂದಿಯಿAದ ರೈತರು, ಸಣ್ಣಪುಟ್ಟ ವ್ಯಾಪಾರಿಗಳು ಕಷ್ಟಪಡುವಂತಾಗಿದೆ. ಕಲಬುರಗಿಗೆ ನಿಮ್ಜ್, ರೇಲ್ವೆ ವಲಯದಂತ ಪ್ರಮುಖ ಯೋಜನೆ ಮಂಜೂರಾಗಿದ್ದವು, ಆದರೆ ಕೇಂದ್ರ ಸರ್ಕಾರ ಎಲ್ಲ ಯೋಜನೆ ವಾಪಸ್ ಪಡೆದಿದೆ ಎಂದರು.

ಎಐಸಿಸಿ ಅಧ್ಯಕ್ಷ ಡಾ.ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ರಾಜ್ಯದಿಂದ ಹೆಚ್ಚಿನ ಬಿಜೆಪಿ ಸಂಸದರು ಹೋದರೂ, ಅವರ ಕೊಡುಗೆ ಶೂನ್ಯ. ದಿನ ಬೆಳಗಾದರೆ ಕಾಂಗ್ರೆಸ್ ಪಕ್ಷವನ್ನು ಬೈಯುವ ಮೋದಿ ಸಾಧನೆ ಬಗ್ಗೆ ಮಾತನಾಡುವುದಿಲ್ಲ. ನಮಗೆ ಅವರು ಬೈದಷ್ಟು ಜನ ಆಶೀರ್ವದಿಸಲಿದ್ದಾರೆ. ನನ್ನ ಅವಧಿಯಲ್ಲಿ ಕಲಬುರಗಿ ಕ್ಷೇತ್ರಕ್ಕೆ ಯೋಜನೆಗಳನ್ನು ವಾಪಸ್ ಪಡೆಯಲಾಗಿದೆ. ಬಿಜೆಪಿ ದ್ವೇಷದ ರಾಜಕಾರಣ ಮಾಡುತ್ತಿದ್ದು, ಕೇಂದ್ರ ಸಚಿವನಾಗಿದ್ದಾಗ ೩೭೧ (ಜೆ), ರೈಲ್ವೆ ವಿಭಾಗ, ಇಎಸ್‌ಐ, ಕೇಂದ್ರೀಯ ವಿವಿ, ರೇಲ್ವೆ ಕೋಚ್ ಫ್ಯಾಕ್ಟರಿ ಸೇರಿ ಹಲವು ಯೋಜನೆ ತಂದಿz್ದೆÃನೆ ಎಂದು ಹೇಳಿದರು.
ತೆಲಂಗಾಣದ ಮುಖ್ಯಮಂತ್ರಿ ರೇವಂತರೆಡ್ಡಿ ಮಾತನಾಡಿ, ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಬಡವರ ಅನುಕೂಲಕ್ಕಾಗಿ ಗ್ಯಾರಂಟಿ ಯೋಜನೆ ತಂದಿದೆ. ೧೦ ವರ್ಷ ಕೇಂದ್ರದಲ್ಲಿ ಆಡಳಿತ ನಡೆಸಿದ ಬಿಜೆಪಿ ಸರ್ಕಾರ ಬಡವರಿಗಿಂತ ಶ್ರೀಮಂತರ ಸಾಲವೇ ಹೆಚ್ಚು ಮನ್ನಾ ಮಾಡಿದೆ. ಇಡಿ, ಐಟಿ ಬಳಸಿಕೊಳ್ಳುವ ಮೋದಿ ವಿರೋಧ ಪಕ್ಷದವರನ್ನು ಹೆದರಿಸುತ್ತಿದ್ದಾರೆ. ಆದರೆ ಇಲ್ಲಿ ಯಾರೂ ಹೆದರುವುದಿಲ್ಲ. ಈ ಭಾರಿ ದೇಶದ ಜನ ಯೋಚಿಸಿ ಮತ ನೀಡಬೇಕು ಎಂದರು.
ಸಚಿವ ಡಾ.ಶರಣಪ್ರಕಾಶ ಪಾಟೀಲ್, ವಿಧಾನ ಪರಿಷತ್ ಸದಸ್ಯ ತಿಪ್ಪಣಪ್ಪ ಕಮಕನೂರ, ಕೆಪಿಸಿಸಿ ಉಪಾಧ್ಯಕ್ಷ ಸುಭಾಷ ರಾಠೋಡ, ಮಾಜಿ ಶಾಸಕ ಕೈಲಾಸನಾಥ ಪಾಟೀಲ್ ಮಾತನಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net