ಬಿಜೆಪಿ ಸದಸ್ಯತ್ವ ಅಭಿಯಾನ ಯಶಸ್ವಿಗೊಳಿಸಿ

bkt-24-5
ಬಾಗಲಕೋಟೆ ನಗರದ ವಿದ್ಯಾಗಿರಿಯಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಶಾಸಕ ವೀರಣ್ಣ ಚರಂತಿಮಠ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ನಗರಸಭೆ ಸಭೆ ಅಧ್ಯಕ್ಷೆ ಜ್ಯೋತಿ ಭಜಂತ್ರಿ, ಸದಸ್ಯೆ ಶೋಭಾ ರಾವ, ಜಿಲ್ಲಾ ಪ್ರಧಾನ ಕಾರ್ಯಕ್ಕೆ ರಾಜು ನಾಯ್ಕರ, ರಾಜು ರೇವಣಕರ್, ಬಸವರಾಜ್ ಯಂಕಂಚಿ, ಬಸವರಾಜ್ ಸಿದ್ಲಿಂಗಪ್ಪನವರ ಸೇರಿದಂತೆ ಇತರರು ಇದ್ದರು.
Published on

ಬಾಗಲಕೋಟೆ: ನಗರದ ವಿದ್ಯಾಗಿರಿ ಬಡಾವಣೆಯಲ್ಲಿ ಬಿಜೆಪಿ ಯುವ ಮೋರ್ಚಾ ಹಮ್ಮಿಕೊಂಡ ವಿಜಯ ಸಂಕಲ್ಪ ಅಭಿಯಾನ ನಿಮಿತ್ತ ಫೋನ್ ಕರೆ ಮಾಡಿಸುವ ಮೂಲಕ ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಶಾಸಕ ಡಾ.ವೀರಣ್ಣ ಚರಂತಿಮಠ ಮಂಗಳವಾರ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಜಗತ್ತಿನಲ್ಲಿ ಅತಿ ಹೆಚ್ಚು ಸದಸ್ಯತ್ವ ಹೊಂದಿದ ಏಕೈಕ ಪಕ್ಷ ಅದು ಭಾರತೀಯ ಜನತಾ ಪಕ್ಷ. ವಿಜಯ ಸಂಕಲ್ಪ ಅಭಿಯಾನ ೨೯ ರಂದು ಮುಕ್ತಾಯಗೊಳ್ಳಲಿದೆ. ಆದ್ದರಿಂದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯತ್ವ ನೋಂದಾಯಿಸಿ ಅಭಿಯಾನವನ್ನು ಯಶಸ್ವಿಗೊಳಿಸುವಂತೆ ಕರೆ ನೀಡಿದರು.

ಈ ಸಂದರ್ಭದಲ್ಲಿ ನಗರಸಭೆ ಸಭೆ ಅಧ್ಯಕ್ಷೆ ಜ್ಯೋತಿ ಭಜಂತ್ರಿ, ಸದಸ್ಯೆ ಶೋಭಾ ರಾವ, ಜಿಲ್ಲಾ ಪ್ರಧಾನ ಕಾರ್ಯಕ್ಕೆ ರಾಜು ನಾಯ್ಕರ, ರಾಜು ರೇವಣಕರ್, ಬಸವರಾಜ್ ಯಂಕಂಚಿ, ಬಸವರಾಜ್ ಸಿದ್ಲಿಂಗಪ್ಪನವರ, ಯುವ ಮೋರ್ಚಾದ ಶ್ರೀಧರ್ ನಾಗರಬೆಟ್ಟ, ಚಂದ್ರು ಸರೂರ್, ಶಿವು ಜಿಗಳೂರು, ಬಸವರಾಜ್ ಅಂಬಿಗೇರ, ಪ್ರಮೋದ ಪವಾರ, ಪ್ರಜ್ವಲ್ ಸಣ್ಣಕ್ಕಿ ಸೇರಿದಂತೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net