ಬಿಜೆಪಿ ಸದಸ್ಯತ್ವ ಅಭಿಯಾನ ಗುರಿ ತಲುಪಲು ಸಲಹೆ

CTD NEWS BJP
Published on

ಚಿತ್ರದುರ್ಗ:ಜಿಲ್ಲೆಯಲ್ಲಿ ಸದಸ್ಯತ್ವ ಅಭಿಯಾನ ಕುಂಠಿತವಾಗಿದ್ದು, ಇನ್ನೂ 10 ದಿನಗಳ ಕಾಲಾವಕಾಶವಿದೆ. ಆದ್ದರಿಂದ ನಿಗದಿತ ಗುರಿ ತಲುಪುವಂತೆ ಬಿಜೆಪಿ ಜಿಲ್ಲಾ ಸಂಘಟನಾ ಪರ್ವದ ಚುನಾವಣಾಧಿಕಾರಿ ಜೀವನಮೂರ್ತಿ ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರಿಗೆ ಸಲಹೆ ನೀಡಿದರು.

ನಗರದ ಜಗಳೂರು ಮಹಾಲಿಂಗಪ್ಪ ಟವರ್ಸ್‌ನಲ್ಲಿ ಮಂಗಳವಾರ ಬಿಜೆಪಿ ಸಂಘಟನಾ ಪರ್ವದ ಜಿಲ್ಲಾಮಟ್ಟದ ಕಾರ‌್ಯಾಗಾರ ಉದ್ಘಾಟಿಸಿ ಮಾತನಾಡಿ, ಪಕ್ಷ ಸ್ಥಾಪನೆಯಾದಾಗಿನಿಂದ ಈವರೆಗೂ ಪದಾಧಿಕಾರಿಗಳನ್ನು ಚುನಾವಣೆ ಮೂಲಕವೇ ಆಯ್ಕೆ ಮಾಡಲಾಗುತ್ತಿದೆ.

ಪ್ರತಿ ಆರು ವರ್ಷಕ್ಕೆ ಒಮ್ಮೆ ಸದಸ್ಯತ್ವ ಅಭಿಯಾನದ ಮೂಲಕ ಹೊಸ ಸದಸ್ಯರ ನೇಮಕವಾಗುತ್ತಿದೆ. ಪ್ರತಿ ಬೂತ್‌ನಲ್ಲಿ 100 ಜನ ಸದಸ್ಯರನ್ನಾಗಿ ಮಾಡಿದವರು ಸಕ್ರಿಯ ಸದಸ್ಯರಾಗಿ ಪದಾಧಿಕಾರಿಗಳಾಗಲು ಅರ್ಹತೆ ಪಡೆಯುತ್ತಾರೆ.

ಚುನಾವಣೆಗಳಲ್ಲಿ ಪ್ರತಿ ಬೂತ್‌ನಲ್ಲಿ ಬಿಜೆಪಿ ಪಡೆದ ಮತಗಳ ಶೇ.70 ಮತದಾರರನ್ನು ಸದಸ್ಯರನ್ನಾಗಿ ಮಾಡಬೇಕಿದ್ದು, ಅಭಿಯಾನಕ್ಕೆ ನ. 15ರವರೆಗೆ ಕಾಲಾವಕಾಶವಿದೆ. ಹಗರಣಗಳಲ್ಲಿ ಮುಳುಗಿರುವ ರಾಜ್ಯ ಕಾಂಗ್ರೆಸ್ಸಿನ ಲ್ಯಾಂಡ್ ಜಿಹಾದ್ ಹಗರಣವನ್ನು ಜನರಿಗೆ ತಿಳಿಸಬೇಕಿದೆ ಎಂದರು.

ಜಿಲ್ಲಾ ಪ್ರಧಾನ ಕಾರ‌್ಯದರ್ಶಿ ಸಂಪತ್ ಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ 4.60 ಲಕ್ಷ ಸದಸ್ಯತ್ವ ಗುರಿ ಇದೆ. ಸದಸ್ಯತ್ವ ಅಭಿಯಾನದಲ್ಲಿ ರಾಜ್ಯದಲ್ಲಿ ಮೊದಲ 3ನೇ ಸ್ಥಾನದಲ್ಲಿರುತ್ತಿದ್ದ ನಮ್ಮ ಜಿಲ್ಲೆ ಕೊನೆಯಿಂದ 3ನೇ ಸ್ಥಾನ ಪಡೆಯುವಂಥ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅತಂಕ ವ್ಯಕ್ತಪಡಿಸಿದರು.

ರೈತ ಮೋರ್ಚಾದ ಪ್ರಧಾನ ಕಾರ‌್ಯದರ್ಶಿ ಮಲ್ಲ್ಲಿಕಾರ್ಜನ್ ಮಾತನಾಡಿ, ಮಹಿಳಾ ಸದಸ್ಯತ್ವಕ್ಕೂ ಹೆಚ್ಚಿನ ಪ್ರಾತಿನಿಧ್ಯ ಕೊಡುವಂತೆ ಕಾರ‌್ಯಕರ್ತರಿಗೆ ಸೂಚಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಸಿದ್ದಾಪುರ, ಬಾಳೆಕಾಯಿ ರಾಮದಾಸ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net