ಗುಂಡ್ಲುಪೇಟೆ : ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಎಸ್.ನಿರಂಜನಕುಮಾರ್ ನೇತೃತ್ವದಲ್ಲಿ ಮಂಗಳವಾರ ತಾಲೂಕಿನ ಬೇಗೂರು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಚಿಕ್ಕಾಟಿಯಲ್ಲಿ ಸದಸ್ಯತ್ವ ಅಭಿಯಾನ ನಡೆಸಲಾಯಿತು.
ಮಂಡಲಾಧ್ಯಕ್ಷ ಸಿ. ಮಹದೇವ ಪ್ರಸಾದ್, ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಶಿವಣ್ಣ ನಾಯಕ, ಕಮರಹಳ್ಳಿ ರವಿ, ನಾಗರಾಜಪ್ಪ, ಮಹೇಶ್, ಮಂಡಲ ಪ್ರಧಾನ ಕಾರ್ಯದರ್ಶಿ ಸುನಿಲ್ ರಾಜು, ಗುರುಸ್ವಾಮಿ, ನಂಜುಂಡಸ್ವಾಮಿ, ಬಸವರಾಜು, ಮಹದೇವ್ ಕುಮಾರ್ ಇತರರು ಹಾಜರಿದ್ದರು. ತಾಲೂಕಿನ ತೊಂಡವಾಡಿ, ನಿಟ್ರೆ, ತೋರವಳ್ಳಿ, ಆಲಳ್ಳಿ, ಅರೆಪುರ, ಹೊರೆಯಾಲ, ರಂಗಪುರ, ದೊಡ್ಡಹುಂಡಿ, ಹಿರಿಕಾಟಿ, ಕುರುಬರಹುಂಡಿ, ಯಡವನಹಳ್ಳಿ, ಬೆಳಚಲವಾಡಿ ಗ್ರಾಮಗಳಲ್ಲೂ ಮುಖಂಡರು ಸದಸ್ಯತ್ವ ಅಭಿಯಾನ ನಡೆಸಿದರು.