

ಗುಂಡ್ಲುಪೇಟೆ : ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಎಸ್.ನಿರಂಜನ್ ಕುಮಾರ್ ನೇತೃತ್ವದಲ್ಲಿ ಮಂಗಳವಾರ ತಾಲೂಕಿನ ಬೇಗೂರು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಚಿಕ್ಕಾಟಿ, ತೊಂಡವಾಡಿ, ನಿಟ್ರೆ, ತೋರವಳ್ಳಿ, ಆಲಳ್ಳಿ, ಅರೆಪುರ, ಹೊರೆಯಾಲ, ರಂಗಪುರ, ದೊಡ್ಡಹುಂಡಿ, ಹಿರಿಕಾಟಿ, ಕುರುಬರಹುಂಡಿ, ಯಡವನಹಳ್ಳಿ, ಬೆಳಚಲವಾಡಿ ಗ್ರಾಮಗಳಲ್ಲಿ ಸದಸ್ಯತ್ವ ಅಭಿಯಾನ ನಡೆಸಲಾಯಿತು. ಈ ಸಂದರ್ಭದಲ್ಲಿ ಮಂಡಲಾಧ್ಯಕ್ಷ ಸಿ. ಮಹದೇವ ಪ್ರಸಾದ್, ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಶಿವಣ್ಣ ನಾಯಕ, ಕಮರಹಳ್ಳಿ ರವಿ, ನಾಗರಾಜಪ್ಪ, ಊಒ ಮಹೇಶ್, ಮಂಡಲ ಪ್ರಧಾನ ಕಾರ್ಯದರ್ಶಿ ಸುನಿಲ್ ರಾಜು, ಗುರುಸ್ವಾಮಿ, ನಂಜುಂಡಸ್ವಾಮಿ, ವಿಶ್ಯು, ಬಸವರಾಜು, ಮಹದೇವ್ ಕುಮಾರ್ ಮುಂತಾದವರು ಹಾಜರಿದ್ದರು.