

ನರಗುಂದ: ಭಾರತೀಯ ಜನತಾ ಪಕ್ಷದ ನರಗುಂದ ಮಂಡಳದ ವಿವಿಧ ಮೋರ್ಚಾ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳನ್ನು ಪಟ್ಟಣದಲ್ಲಿ ಮಂಗಳವಾರ ಆಯ್ಕೆ ಮಾಡಲಾಯಿತು.
ನರಗುಂದ ಮಂಡಳದ ಯುವ ಮೋರ್ಚಾ ಅಧ್ಯಕ್ಷರಾಗಿ ವಿಠ್ಠಲ ಹವಾಲ್ದಾರ, ಪ್ರಧಾನ ಕಾರ್ಯದರ್ಶಿ ಶಂಭು ಮೇಟಿ, ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷರಾಗಿ ರಿಯಾಜ್ ಕೊಣ್ಣೂರ, ಪ್ರಧಾನ ಕಾರ್ಯದರ್ಶಿ ಮಕ್ತುಂಸಾಬ್ ನಾಯ್ಕರ, ರೈತ ಮೋರ್ಚಾ ಅಧ್ಯಕ್ಷರಾಗಿ ಮಲ್ಲಪ್ಪ ಪೂಜಾರ, ಪ್ರಧಾನ ಕಾರ್ಯದರ್ಶಿ ಶಂಕರಗೌಡ ನಡಮನಿ, ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷರಾಗಿ ಅಖಂಡಪ್ಪ ಬಡಿಗೇರ, ಕಾರ್ಯದರ್ಶಿ ಮಂಜುನಾಥ ಬಾಚಿ, ಎಸ್.ಸಿ ಮೋರ್ಚಾ ಅಧ್ಯಕ್ಷರಾಗಿ ಪ್ರವೀಣ ವಡ್ಡರ, ಪ್ರಧಾನ ಕಾರ್ಯದರ್ಶಿ ಸುಭಾಸ ತಳಕೇರಿ, ಎಸ್.ಟಿ. ಮೋರ್ಚಾ ಅಧ್ಯಕ್ಷರಾಗಿ ಸಣ್ಣಗದಿಗೆಪ್ಪ ತಳವಾರ, ಪ್ರಧಾನ ಕಾರ್ಯದರ್ಶಿಯಾಗಿ ಬಸನಗೌಡ ಬೇಡಗೌಡ್ರ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಪಕ್ಷದ ನರಗುಂದ ಮಂಡಳ ಅಧ್ಯಕ್ಷ ಗುರುನಾಥ ಆದೆಪ್ಪನವರ ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜುನಾಥ ಮೆಣಸಗಿ, ಟಿಎಪಿಸಿಎಂಎಸ್ ಅಧ್ಯಕ್ಷ ಎ.ಎಂ. ಹುಡೇದ, ಪುರಸಭೆ ಸದಸ್ಯರಾದ ಚಂದ್ರಗೌಡ ಪಾಟೀಲ, ಪ್ರಕಾಶ ಹಾದಿಮನಿ, ಪುರಸಭೆ ಮಾಜಿ ಅಧ್ಯಕ್ಷ ಚಂದ್ರು ಪವಾರ, ಎಂ.ಎಸ್. ಪಾಟೀಲ, ಮೌಲಾಸಾಬ್ ಮುನವಳ್ಳಿ, ಮಹೇಶ ಹಟ್ಟಿ, ಬಸವರಾಜ ಹುಲಕುಂದ, ಚಂದ್ರು ದಂಡಿನ, ಶೆಟ್ಟೆಪ್ಪ ವಡ್ಡರ, ಸಿದ್ಧಾರೂಢ ಪಾತ್ರೋಟಿ, ಹಸನ ನವದಿ, ರಫೀಕ ಜೋರಂ, ಪಾಂಡು ಜಾಧವ, ಅನಿಲ ಧರೆಯಣ್ಣವರ ಇತರರಿದ್ದರು.
EndFragment