ಬಿಜೆಪಿ ವಿರುದ್ಧ ಸುಧಾಕರ್ ವಾಗ್ದಾಳಿ

BHAGYA LAKSHIMI (5)--03
Published on


ಚಿತ್ರದುರ್ಗ: ಅವರು ಏನು ನಮ್ಮ ವಿರುದ್ಧ ಜಾರ್ಜ್‌ಶೀಟ್ ಹಾಕುವುದು? ಜನ ಈಗಾಗಲೇ ಅವರ ವಿರುದ್ಧ ಜಾರ್ಜ್‌ಶೀಟ್ ಹಾಕಿ ಮನೆಗೆ ಕಳಿಸಿದ್ದಾರೆಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಬಿಜೆಪಿಯ ವಿರುದ್ಧ ಹರಿಹಾಯ್ದರು.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಅಡುಗೆ ಅನಿಲ ದರ ಕಡಿತಗೊಳಿಸಿರುವ ಕೇಂದ್ರ ಸರ್ಕಾರದ ನಿರ್ಧಾರ ಚುನಾವಣೆ ಗಿಮಿಕ್ ಆಗಿದೆ ಎಂದು ಟೀಕಿಸಿದರು. ಅವರ ಈ ಪ್ರಯತ್ನ ಚುನಾವಣೆಯಲ್ಲಿ ಪ್ರಯೋಜನಕ್ಕೆ ಬಾರದು. ನಮ್ಮ ಸರ್ಕಾರ ರಾಜ್ಯದಲ್ಲಿ ನಾಲ್ಕು ಗ್ಯಾರಂಟಿ ಯೋಜನೆಗಳಿಗೆ ಚಾಲನೆ ನೀಡಿದೆ. ಪಕ್ಷದ ಸಿದ್ಧಾಂತವನ್ನು ಒಪ್ಪಿದವರು ಕಾಂಗ್ರೆಸ್ ಸೇರಬಹುದೆಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net