

ಗದಗ:
ನಗರದ 35ನೇ ವಾಡಿರ್ನಲ್ಲಿ ನಗರಸಭೆ ಅಧ್ಯೆ ಉಷಾ ದಾಸರ ಹಾಗೂ ನಗರಸಭೆ ಸದಸ್ಯ ಪ್ರಶಾಂತ ನಾಯ್ಕರ ನೇತೃತ್ವದಲ್ಲಿ ಇತ್ತೀಚೆಗೆ ವಿಜಯ ಸಂಕಲ್ಪ ಅಭಿಯಾನ ಕಾರ್ಯಕ್ರಮ ಜರುಗಿತು.
ಮನೆ ಮನೆಗೆ ತೆರಳಿದ ಸದಸ್ಯರು, ಕೇಂದ್ರ ಮತ್ತು ರಾಜ್ಯ ಸರ್ಕಾರ ಕೈಗೊಂಡಿರುವ ಜನಪರ ಯೋಜನೆಗಳ ಕುರಿತ ಕರಪತ್ರಗಳನ್ನು ಹಂಚಿ, "ಬಿಜೆಪಿಯೇ ಭರವಸೆ' ಎಂಬ ಪಕ್ಷದ ಸ್ಟಿಕ್ಕರ್ ಅಂಟಿಸಿ, ಸದಸ್ಯತ್ವ ನೋಂದಣಿ ಕಾರ್ಯ ಕೈಗೊಂಡರು.
ಈ ವೇಳೆ ಮಾತನಾಡಿದ ನಗರಸಭೆ ಸದಸ್ಯ ಪ್ರಶಾಂತ ನಾಯ್ಕರ್, ಪ್ರಸ್ತುತ ದಿನಗಳಲ್ಲಿ ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರದ ಜನಪರ ಯೋಜನೆ, ವಿವಿಧ ಅಭಿವೃದ್ಧಿ ಕಾರ್ಯಗಳಿಂದಾಗಿ ಜನರಲ್ಲಿ ಬಿಜೆಪಿ ಭರವಸೆಯ ಪಕ್ಷವಾಗಿ ಹೊರಹೊಮ್ಮಿದೆ. ಅರವತ್ತು ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷದ ಮೇಲಿನ ವಿಶ್ವಾಸ ಬಹುತೇಕ ಕ್ಷೀಣಿಸಿದೆ. ಭಾರತೀಯ ಜನತಾ ಪಕ್ಷದ ವಿಜಯ ಸಂಕಲ್ಪ ಅಭಿಯಾನಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇದು ಪಕ್ಷ ಸಂಘಟನೆಯಲ್ಲಿ ತೊಡಗಿರುವ ಕಾರ್ಯಕರ್ತರ ಉತ್ಸಾಹವನ್ನು ಮತ್ತಷ್ಟು ಹೆಚ್ಚಿಸಿದೆ ಎಂದರು.
ನಗರಸಭೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಅವಳಿ ನಗರದ ಜನರ ನಿರೀಕ್ಷೆಯಂತೆ ಕಳೆದ ಒಂದು ವರ್ಷದ ಅವಧಿಯಲ್ಲಿ ರಸ್ತೆ, ಚರಂಡಿ, ಶೌಚಾಲಯ ನಿರ್ಮಾಣ ಸೇರಿದಂತೆ ಅನೇಕ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡು ಜನರ ವಿಶ್ವಾಸ ಗಳಿಸಿದ್ದೇವೆ. ಜನರಲ್ಲಿ ಬಿಜೆಪಿ ಕುರಿತು ಹೆಚ್ಚು ಭರವಸೆ ಮೂಡಿದೆ ಎಂದು ನಗರಸಭೆ ಅಧ್ಯೆ ಉಷಾ ದಾಸರ ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಶಾರದಾ ಸಜ್ಜನರ, ಅರವಿಂದ ಕೆಲೂರ, ಜಯಣ್ಣ ಶೆಟ್ಟರ್, ಬಸವರಾಜ್ ಗಡ್ಡೆಪ್ಪನವರ, ಅಕ್ಕಮ್ಮ ವಸ್ತ್ರದ, ಪ್ರಕಾಶ್ ಕೋಟೆ, ನಾಗರಾಜ್ ಗುರಿಕಾರ ಇತರರು ಇದ್ದರು.