

ವಿಜಯವಾಣಿ ಸುದ್ದಿಜಾಲ ಧಾರವಾಡ
ಬಿಜೆಪಿ ವಿಜಯ ಸಂಕಲ್ಪ ಅಭಿಯಾನಕ್ಕೆ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥನಾರಾಯಣ ಅವರು ನಗರದ ಲಕ್ಷ್ಮೀಸಿಂಗನಕೇರಿಯಲ್ಲಿ ಶನಿವಾರ ಚಾಲನೆ ನೀಡಿದರು.
ಪಕ್ಷದ ಪದಾಧಿಕಾರಿಗಳೊಂದಿಗೆ ಮನೆಮನೆಗೆ ತೆರಳಿದ ಅವರು, ‘ಬಿಜೆಪಿಯೇ ಭರವಸೆ ನಿಮ್ಮ ಮತ ಬಿಜೆಪಿಗೆ’ ಎಂಬ ಗೋಡೆಬರಹ ಬರೆಯುವ ಅಭಿಯಾನಕ್ಕೂ ಚಾಲನೆ ನೀಡಿದರು. ಮನೆಗಳಿಗೆ ಬಿಜೆಪಿ ಸ್ಟಿಕ್ಕರ್ ಅಂಟಿಸಿ ಕೇಂದ್ರ- ರಾಜ್ಯ ಸರ್ಕಾರಗಳ ಸಾಧನೆಗಳ ಕರಪತ್ರ ಹಂಚಿದರು. ಪಕ್ಷ ಸಂಘಟನೆಯ ಭಾಗವಾಗಿ ವಿವಿಧ ವಾರ್ಡ್‌ಗಳಲ್ಲಿ ಸಂಚರಿಸಿ ಸದಸ್ಯತ್ವ ಅಭಿಯಾನ ನಡೆಸಲಾಯಿತು.
ಮಹಾನಗರ ಜಿಲ್ಲಾಧ್ಯಕ್ಷ ಸಂಜಯ ಕಪಟಕರ, ವಿಜಯಾನಂದ ಶೆಟ್ಟಿ, ಬಸವರಾಜ ಗರಗ, ಸುರೇಶ ಬೇದರೆ, ಮೋಹನ ರಾಮದುರ್ಗ, ಅಮಿತ ಪಾಟೀಲ, ಸುರೇಶ ಜಾಧವ, ಭೀಮಸಿ ನೇಮಿಕಲ್, ಗೀತಾ ಪಾಟೀಲ, ಮಾಲತಿ ಹುಲಿಕಟ್ಟಿ, ಇತರರು ಪಾಲ್ಗೊಂಡಿದ್ದರು.