ಬಿಜೆಪಿ ರೈತ ಮೋರ್ಚಾದಿಂದ ಬೆಳೆಹಾನಿ ವೀಕ್ಷಣೆ

10-ANP-P2
ಆನಂದಪುರ ಸಮೀಪದ ಸಂಗಣ್ಣನಕೆರೆ ಗ್ರಾಮದಲ್ಲಿ ಉಂಟಾಗಿದ್ದ ಬೆಳೆಹಾನಿಯನ್ನು ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ರವಿಕುಮಾರ್ ಪರಿಶೀಲಿಸಿದರು. ಗುರುಮೂರ್ತಿ, ಮಂಜುನಾಥ, ರವಿಕುಮಾರ್ ಗೌತಮಪುರ ಇತರರಿದ್ದರು.
Published on

ಆನಂದಪುರ: ವಿವಿಧ ಗ್ರಾಮಗಳಲ್ಲಿ ಸಂಭವಿಸಿದ್ದ ಬೆಳೆಹಾನಿಯನ್ನು ಬಿಜೆಪಿ ರೈತ ಮೋರ್ಚಾ ಪದಾಕಾರಿಗಳು ಪರಿಶೀಲಿಸಿದರು. ಅಧ್ಯಕ್ಷ ರವಿಕುಮಾರ್, ಪ್ರಧಾನ ಕಾರ್ಯದರ್ಶಿ ಡಾ. ನವೀನ್‌ಕುಮಾರ್ ಕಾರ್ಯಕರ್ತರ ಜತೆಗೂಡಿ ಪರಿಶೀಲನೆ ನಡೆಸಿದರು.

ಗೌತಮಪುರ, ಆಚಾಪುರ, ಉಳ್ಳೂರು, ಹೊಸೂರು ಗ್ರಾಪಂ ವ್ಯಾಪ್ತಿಯಲ್ಲಿ ಬೆಳೆ ಹಾನಿ ಉಂಟಾದ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಅಡಕೆ, ಶುಂಠಿ ಬೆಳೆ ಕೊಳೆರೋಗಕ್ಕೆ ತುತ್ತಾಗಿರುವುದನ್ನು, ಮೆಕ್ಕೆಜೋಳ ಗಿಡಗಳ ಬೆಳವಣಿಗೆ ಕುಂಠಿತ, ಕಬ್ಬಿನ ಗದ್ದೆ ಅತಿಯಾದ ಮಳೆಯಿಂದ ಹಾನಿ ಆಗಿರುವುದನ್ನು ರೈತರು ತೋರಿಸಿದರು.

ಬಿಜೆಪಿ ರೈತ ಮೋರ್ಚಾ ಶಿವಮೊಗ್ಗ ಜಿಲ್ಲಾಧ್ಯಕ್ಷ ಸಿದ್ದಪ್ಪ, ಪ್ರಧಾನ ಕಾರ್ಯದರ್ಶಿ ಗಣೇಶ, ಸಾಗರ ತಾಲೂಕು ಅಧ್ಯಕ್ಷ ಹಿರಣ್ಯಪ್ಪ, ಪದಾಕಾರಿಗಳಾದ ಗುರುಮೂರ್ತಿ, ಮಂಜುನಾಥ, ಎಸ್‌ಸಿ ಮೋರ್ಚಾ ಸಾಗರ ತಾಲೂಕು ಪ್ರಧಾನ ಕಾರ್ಯದರ್ಶಿ ರವಿಕುಮಾರ್, ರೈತ ಮುಖಂಡ ನಿಂಗೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net