ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್ ಗೆ ಮೆಚ್ಯೂರಿಟಿ ಇಲ್ಲ..!

siddarmya
Published on

ಬಾಗಲಕೋಟೆ: ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ ಒಬ್ಬ ವಿಧೂಷಕ.ಅವರಿಗೆ ಮೆಚ್ಯೂರಿಟಿ ಇಲ್ಲ ಪಾಪ. ನಮ್ಮ ಸರ್ಕಾರ ಹೋಗಿ ಎಷ್ಟು ದಿನ ಆಯ್ತು. ಈಗ ಯಾವ ಸರ್ಕಾರ ಇದೆ. ಮೂರು ವರ್ಷದಿಂದ ಯಾರು ಅಕಾರದಲ್ಲಿ ಇದಾರೆ…? ನಾವು ಅಧಿಕಾರದಲ್ಲಿದ್ದಾಗ ವಿರೋಧ ಪಕ್ಷದಲ್ಲಿ ಇದ್ದರ್ಯಾರು? ಆಗ ಯಾಕೆ ಇವೆಲ್ಲ ರೈಜ್ ಮಾಡಲಿಲ್ಲ ಎಂದು ವಿ.ಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ಜಿಲ್ಲೆಯ ಜಮಖಂಡಿ ತಾಲೂಕಿನ ಹಿರೇಪಡಸಲಗಿ ಗ್ರಾಮದ ಹೆಲಿಪ್ಯಾಡ್ ನಲ್ಲಿ ಮಂಗಳವಾರ, ಆರ್ಕಾವತಿ ವಿಚಾರ,ಲೋಕಾಯುಕ್ತ ಬಂದ್ ಮಾಡದಿದ್ದರೆ ಸಿದ್ದರಾಮಯ್ಯ ಜೈಲಿಗೆ ಹೋಗುತ್ತಿದ್ದರು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ ಹೇಳಿಕೆಗೆ ತಿರುಗೇಟು ನೀಡಿದರು.
ವಿರೋಧ ಪಕ್ಷದಲ್ಲಿದ್ದಾಗ ಕಡಬು ಸಿಕ್ಕಾಕೊಂಡಿದ್ರಾ ಬಾಯಿಗೆ. ನಾವು ಭ್ರಷ್ಟಾಚಾರ ಆರೋಪ ಮಾಡೋಕೆ ಶುರು ಮಾಡಿದ ಮೇಲೆ ಹಿಂದಿನ ಸರ್ಕಾರದಲ್ಲಿ ಹಂಗ್ ನಡೆದಿತ್ತು, ಹಿಂಗ್ ನಡೆದಿತ್ತು ಅಂದ್ರೆ. ನಾನು ಅದಕ್ಕೆ ಹೇಳಿದೆ 2006 ರಿಂದ ಇವತ್ತಿನವರೆಗೆ. ಯಡಿಯೂರಪ್ಪ ಕುಮಾರಸ್ವಾಮಿ ಆಡಳಿತ ಇತ್ತು. ಇವಾಗ ಯಾರು ಅಧಿಕಾರ ಮಾಡ್ತಾ ಇದ್ದಾರೆ. ನಾವು ಐದು ವರ್ಷ ಆಡಳಿತದಲ್ಲಿದ್ವಿ. ಎಲ್ಲವನ್ನೂ ತನಿಖೆ ಮಾಡಿಸಿ 16 ವರ್ಷದ್ದು. ಯಾಕೇ ಭಯ ನಿಮಗೆ ಅಂತ ಬಿಜೆಪಿ ಸರ್ಕಾರಕ್ಕೆ ಪ್ರಶ್ನಿಸಿದ ಅವರು,ಸುಮ್ಮನೆ ಜನರ ಗಮನ ಬೇರೆಡೆ ತಿರುಗಿಸೋದಕ್ಕೆ ಈ ರೀತಿ ಆಪಾದನೆಗಳನ್ನು ಮಾಡುತ್ತಿದ್ದಾರೆ. ಬಸವರಾಜ ಬೊಮ್ಮಾಯಿ ಅವರೇ ನಿಮ್ಮ ಸರ್ಕಾರ ಇದೆ. ಇದಕ್ಕೊಂದು ನ್ಯಾಯಾಂಗ ತನಿಖೆ ಮಾಡಿಸಿ ಅಂತ ಸನದಲ್ಲಿ ಹೇಳಿದ್ದೇನೆ ಎಂದರು.
ಬಿಜೆಪಿ ಜಾತಿ ಅಸ್ತ್ರಕ್ಕೆ ತಿರುಗೇಟು.:
ಈಗ ಎಲ್ಲ ಬಿಟ್ಟುಬಿಟ್ಟು ಜಾತಿ ಅಸ್ತ್ರ ತೆಗೆದುಕೊಂಡಿದ್ದಾರೆ. ಜಾತಿಗೂ ಭ್ರಷ್ಟಾಚಾರ ಕ್ಕೂ ಸಂಬಂಧವೇನು ?. ಬಸವರಾಜ ಬೊಮ್ಮಾಯಿ ಇಸ್ ದಿ ಹೆಡ್ ಆಪ್ ದಿ ಗವರ್ನಮೆಂಟ್. ಅವರ ಮೇಲೆ ಆರೋಪ ಮಾಡಿದ್ದೇವೆ. ಜಾತಿ ಮೇಲೆ ಮಾಡಿಲ್ಲ. ಸರ್ಕಾರದ ಮೇಲೆ ಆರೋಪ ಮಾಡುತ್ತಿದ್ದೇವೆ. ಅದರಿಂದ ಈ ರೀತಿ ಕ್ಷುಲ್ಲಕ ವಿಚಾರಗಳನ್ನ ಜನರ ಮುಂದೆ ಇಟ್ಟು ದಾರಿ ತಪ್ಪಿಸುತ್ತಿದ್ದಾರೆ. ಜನ ಬುದ್ದಿವಂತರಿದ್ದಾರೆ. ಅರ್ಥ ಮಾಡಿಕೊಳ್ಳುತ್ತಾರೆ. ಯಾಕಂದ್ರೆ ಇವರಿಗೆ ಭಯ ಶುರುವಾಗಿದೆ. ಅದಕ್ಕೆ ಸದನದಲ್ಲಿ ಹೇಳಿದೆ ಮೋರ್ ಸ್ಟ್ರಾಂಗ್ ಮೋರ್ ಎನಿಮೀಸ್, ಲೆಸ್ ಸ್ಟ್ರಾಂಗ್ ಲೆಸ್ ಎನಿಮಿಸ್, ನೊ ಸ್ಟ್ರಾಂಗ್ ನೊ ಎನಿಮಿಸ್. ಅದಕ್ಕೆ ನನ್ಮೇಲೆ ಟಾರ್ಗೆಟ್ ಮಾಡೋದು ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net