

ಯಾದಗಿರಿ: ಪ್ರಸ್ತುತ ಬಿಜೆಪಿ, ದೇಶದಲ್ಲಿನ ಹಲವು ರಾಜ್ಯಗಳಲ್ಲಿ ಅಕಾರದಲ್ಲಿದೆ. ಈ ಯಶಸ್ಸಿನ ಹಿಂದಿನ ಮರ್ಮವೇನು ಎಂದು ಹುಡುಕುತ್ತ್ತ ಹೋದರೆ ನಮಗೆ ಪಂಡಿತ ದೀನದಯಾಳ್ ಉಪಾಧ್ಯಾಯರು ಹಾಕಿದ ತಾತ್ವಿಕ ಪ್ರತಿಪಾದನೆಗಳು ಎಂಬುದು ಸ್ಪಷ್ಟವಾಗುತ್ತದೆ ಎಂದು ಸಂಸದ ರಾಜಾ ಅಮರೇಶ ನಾಯಕ ಅಭಿಪ್ರಾಯಪಟ್ಟರು.
ಭಾನುವಾರ ನಗರದ ಬಿಜೆಪಿ ಕಚೇರಿಯಲ್ಲಿ ಏರ್ಪಡಿಸಲಾಗಿದ್ದ ಪಂ.ದೀನದಯಾಳ ಉಪಾಧ್ಯಾಯರ 104 ಜನ್ಮದಿನದ ಕಾರ್ಯಕ್ರಮದಲ್ಲಿ ಮಾತನಾಡಿ, ಪಂಡಿತಜೀ ಅವರು ಸಂಯಮಶೀಲತೆ ಜತೆಗೆ ದೃಢ ನಿಧರ್ಾರಗಳನ್ನು ತೆಗೆದುಕೊಳ್ಳುತ್ತಿದ್ದರು. ಶ್ರೇಷ್ಠ ವಿದ್ಯಾಥರ್ಿಯಾಗಿದ್ದ ಅವರು, ವ್ಯಾಸಂಗ ಮುಗಿಸಿದ ಸಂದರ್ಭದಲ್ಲಿ ಕುಟುಂಬದ ಹಿರಿಯರು ಒಳ್ಳೆಯ ಸಕರ್ಾರಿ ಉದ್ಯೊಗಕ್ಕೆ ಸೇರುವ ಬದಲು ತಮ್ಮ ಜೀವನವನ್ನು ರಾಷ್ಟ್ರದ ಕಲ್ಯಾಣಕ್ಕಾಗಿ ಮುಡಿಪಾಗಿಟ್ಟರು ಎಂದರು.
ದೇಶದಲ್ಲಿ ಕಾಂಗ್ರೆಸ್ನ ಆಡಳಿತ ಇದ್ದಾಗಲೆ ಉಪಾಧ್ಯಾಯರು ರಾಷ್ಟ್ರೀಯ ವಿಚಾರಧಾರೆಗಳನ್ನು ಇಟ್ಟುಕೊಂಡು ಪಯರ್ಾಯ ರಾಜಕೀಯ ಶಕ್ತಿಯನ್ನು ಶ್ಯಾಮಪ್ರಸಾದ್ ಮುಖಜರ್ಿ ಅವರೊಟ್ಟಿಗೆ ಸೇರಿಕೊಂಡು ಆರ್ಎಸ್ಎಸ್ ಸರಸಂಘಚಾಲಕರಾಗಿದ್ದ ಗುರೂಜಿಯವರ ಮಾರ್ಗದರ್ಶನದಂತೆ ಬೆಳೆಸಿದರು. ಉಪಾಧ್ಯಾಯ ಅವರ ತತ್ವ, ಆದರ್ಶಗಳನ್ನು ಇಂದಿನ ಯುವ ರಾಜಕಾರಣಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಅವಶ್ಯಕತೆ ಇದೆ ಎಂದು ಹೇಳಿದರು.
ಪಕ್ಷದ ಜಿಲ್ಲಾಧ್ಯಕ್ಷ ಡಾ.ಶರಣಭೂಪಾಲರೆಡ್ಡಿ ನಾಯ್ಕಲ್, ಶಾಸಕ ವೆಂಕಟರೆಡ್ಡಿ ಮುದ್ನಾಳ್, ಮಾಜಿ ಸಚಿವ ಡಾ.ಎ.ಬಿ.ಮಾಲಕರಡ್ಡಿ, ಮಾಜಿ ಶಾಸಕ ಡಾ.ವೀರಬಸವಂತ ರೆಡ್ಡಿ ಮುದ್ನಾಳ್, ಜಿಲ್ಲಾ ಪ್ರಧಾನ ಕಾರ್ಯದಶರ್ಿಗಳಾದ ವೆಂಕಟರೆಡ್ಡಿ ಅಬ್ಬೆತುಮಕೂರು, ಗುರು ಕಾಮ, ಅಲೆಮಾರಿ ನಿಗಮದ ಅಧ್ಯಕ್ಷ ದೇವೇಂದ್ರನಾಥ ನಾದ, ನಾಗರತ್ನ ಕುಪ್ಪಿ, ಲಲಿತಾ ಅನಪುರ, ನೀಲಕಂಠರಾಯ ಯಲ್ಹೇರಿ, ನಗರ ಮಂಡಲ ಅಧ್ಯಕ್ಷ ಮಂಜುನಾಥ ಜಡಿ, ನಗರಸಭೆ ಸದಸ್ಯರಾದ ಸ್ವಾಮಿದೇವ ದಾಸನಕೆರಿ, ಅಂಬಯ್ಯ ಶಾಬಾದಿ, ಸುನಿತಾ ಚವ್ಹಾಣ್, ಶಂಕರ್ ಸೋನಾರ, ಶಕುಂತಲಾ, ಕವಿತಾ ಮಾಲಿ ಪಾಟೀಲ್, ಮಹಾದೇವಪ್ಪ ಹೂಗಾರ, ಶೇಖರ ದೊರಿ ಕಕ್ಕೇರಸಗೇರಿ ಇದ್ದರು.