ಬಿಜೆಪಿ ಮುಖಂಡ ವಿಜುಗೌಡ ಪಾಟೀಲ ಕಾರ್ ಅಪಘಾತ

IMG-20201108-WA0089
Published on

ವಿಜಯಪುರ: ಕಾರ್ ಅಪಘಾತದಿಂದಾಗಿ ಬಿಜೆಪಿ ಮುಖಂಡ ವಿಜುಗೌಡ ಪಾಟೀಲ ಗಾಯಗೊಂಡಿದ್ದಾರೆ.

ಭಾನುವಾರ ಬಬಲೇಶ್ವರ ವಿಧಾನ ಸಭೆ ಕ್ಷೇತ್ರದ ಬಿಜೆಪಿ ಪ್ರಶಿಕ್ಷಣ ವರ್ಗದ ಶಿಬಿರ ಮುಗಿಸಿಕೊಂಡು ಬರುವ ವೇಳೆ ಸಾರವಾಡ ಬಳಿ ಈ ಘಟನೆ ನಡೆದಿದೆ.

ಸಾರವಾಡದ ಈಶ್ವರ ದೇವಸ್ಥಾನದಲ್ಲಿ ಶಿಬಿರ ಆಯೋಜಿಸಲಾಗಿತ್ತು. ಅದನ್ನು ಮುಗಿಸಿಕೊಂಡು ವಿಜಯಪುರಕ್ಕೆ ಬರುವ ವೇಳೆ ಎದುರಿನಿಂದ ಬಂದ ಕಾರ್ ಡಿಕ್ಕಿ ಹೊಡೆದಿದೆ.

ಎರಡೂ ಕಾರ್ ಜಖಂ ಗೊಂಡಿದ್ದು ವಿಜುಗೌಡ ಪಾಟೀಲ ಅವರ ಎದೆಗೆ ಪೆಟ್ಟು ಬಿದ್ದಿದೆ. ಅವರ ಆಪ್ತ ಸಹಾಯಕ ಪ್ರಶಾಂತ ಕಾಲಿಗೂ ಪೆಟ್ಟಾಗಿದ್ದೆ. ಸದ್ಯ ವಿಜಯಗೌಡರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅವರ ಆಪ್ತ ಸಹಾಯಕ ಪ್ರಶಾಂತ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net