ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಬಂಧನ, ಬಿಡುಗಡೆ. ಸಿಎಂಗೆ ಸ್ವಾಗತ

IMG-20221114-WA0004
Published on

ಕಲಬುರಗಿ: ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆಗೆ ಧಮ್ ಕಿ ಹಾಕಿದ ಪ್ರಕರಣ ಸಂಬಂಧ ಕಳೆದ ರಾತ್ರಿ ಹೈದರಾಬಾದ್ ನಲ್ಲಿ ಮಣಿಕಂಠ ಬಂಧಿಸಿ ಕಲಬುರಗಿಗೆ ಕರೆತಂದ ಪೊಲೀಸರು.

ಕಲಬುರಗಿ ಬ್ರಹ್ಮಪುರ ಠಾಣೆಯಲ್ಲಿ ಕಲಂ 506 ಪ್ರಕಾರ ನ. 12ರಂದು ಕಾಂಗ್ರೆಸ್ ಮುಖಂಡ ತಿಪ್ಪಣಪ್ಪ ಕಮಕನೂರ ದೂರಿನ ಮೇಲೆ
ಮಣಿಕಂಠ ವಿರುದ್ಧ ದಾಖಲಾಗಿತ್ತು ಕೇಸ್.

ಸಿಎಂ ಭೇಟಿ ಮುನ್ನ ಮಣಿಕಂಠ ಬಂಧಿಸಿದ ಪೊಲೀಸರು. ಬ್ರಹ್ಮಪುರ ಠಾಣೆಯಲ್ಲೇ ಪೊಲೀಸರು ಜಾಮೀನು ನೀಡಿದ್ದಾರೆ. ಹೀಗಾಗಿ ಠಾಣೆಗೆ ಬಂದ ಕೆಲ ಕ್ಷಣದಲ್ಲಿ ಹೊರಗೆ ಹೋದ ಮಣಿಕಂಠ ರಾಠೋಡ್.

ಮಣಿಕಂಠ ಠಾಣೆಗೆ ಹೋದಾಗ ಅನೇಕ ಬೆಂಬಲಿಗರು ಠಾಣೆಗೆ ಭೇಟಿ.

*ಪೊಲೀಸರಿಂದ ಜಾಮೀನು ಪಡೆದ ಬಳಿಕ ಮಣಿಕಂಠ ಅವರು ಸಿಎಂ ಬಸವರಾಜ ಬೊಮ್ಮಾಯಿ ಸ್ವಾಗತಕ್ಕೆ ಕಲಬುರಗಿ ಏರ್ ಪೋಟ್೯ ಕಡೆ ಬೆಂಬಲಿಗರೊಂದಿಗೆ ಆಗಮನ. ಏರ್ ಪೋಟ್೯ ಕ್ರಾಸ್ ಹತ್ತಿರ ಮಣಿಕಂಠ ಅವರು ಸಿಎಂಗೆ ಸ್ವಾಗತ ಕೋರಿದರು.

ನಾವು ಮನಸ್ಸು ಮಾಡಿದರೆ ಬಿಜೆಪಿ ನಾಯಕರಿಗೆ ರಸ್ತೆ ಮೇಲೆ ಓಡಾಡಲು ಬಿಡಲ್ಲ ಎಂದು ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಸಿಡಿದಿದ್ದ ಮಣಿಕಂಠ. ನೀವು ಶೂಟ್ ಮಾಡಲು ರೆಡಿ ಇದ್ದರೆ ನಾವೂ ನಿಮಗೆ ಶೂಟ್ ಮಾಡಲು ರೆಡಿ ಎಂದು‌ ಮಣಿಕಂಠ ಪತ್ರಿಕಾಗೋಷ್ಠಿಯಲ್ಲಿ ಖರ್ಗೆಗೆ ವಾನ್೯ ಮಾಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net