

ಹಾಸನ : ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಬಾರಿ ಸ್ಪರ್ಧಿಸಿ ಪಾರಜಿತಗೊಂಡ ಅಭ್ಯರ್ಥಿ ಹಾಗೂ ವಕೀಲ ಎಂದು ಹೇಳುವ ದೇವರಾಜೇಗೌಡ ನನ್ನ ಮೇಲೆ ಮಾಡುತ್ತಿರುವ ಆರೋಪಗಳು ಸತ್ಯಕ್ಕೆ ದೂರವಾದುದ್ದು ಎಂದು ವಿಚ್ಛೇದಿತ ಪತ್ನಿ ಭಾಗ್ಯ ಸ್ಪಷ್ಟಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ಹೊಳೆನರಸೀಪುರದ ಕಾಮಸಮುದ್ರ ಗ್ರಾಮದ ದೇವರಾಜೇಗೌಡ ಮತ್ತು ನಾನು 1997ರಲ್ಲಿ ಗುರು ಹಿರಿಯರ ಸಮ್ಮುಖದಲ್ಲಿ ಮದುವೆ ಮಾಡಿಕೊಡಲಾಯಿತು, ನಂತರ ನನಗೆ ಮಾನಸಿಕ ಮತ್ತು ದೈಹಿಕವಾಗಿ ಕಿರುಕುಳ ನೀಡಿದ ಹಿನ್ನೆಲೆಯಲ್ಲಿ ವಿಚ್ಛೇದನ ಪಡೆದು 13 ವರ್ಷಗಳಾಗಿವೆ. ಆದರೆ ಇತ್ತೀಚಿನ ದಿನಗಳಲ್ಲಿ ಮಾಧ್ಯಮದಲ್ಲಿ ನನ್ನ ಚಾರಿತ್ರ್ಯ ಮತ್ತು ನಡತೆಯ ಬಗ್ಗೆ ತೇಜೋವಧೆ ಮಾಡುತ್ತಿದ್ದಾನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅವರು ಮಾಡಿರುವ ಆರೋಪಗಳಲ್ಲಿ ಹುರುಳಿಲ್ಲ. ನನ್ನ ಇಬ್ಬರು ಗಂಡು ಮಕ್ಕಳನ್ನು ದೂರವಿಟ್ಟು ನನಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸೆ ನೀಡುತ್ತಿದ್ದಾನೆ. ಈತನ ವಿರುದ್ಧ ಕಾನೂನು ರೀತಿ ಹೋರಾಟ ನಡೆಸಲಾಗುವುದು . ಆರ್ ಟಿ ಐ ಮತ್ತು ಬ್ಲಾಕ್‌ಮೇಲ್ ತಂತ್ರ ಮಾಡಿಕೊಂಡು ಕೋಟ್ಯಂತರರು ಹಣ ಮಾಡಿದ್ದಾನೆ.ಈತನ ವಿರುದ್ಧ ಸೂಕ್ತ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾಮಸಮುದ್ರ ಗ್ರಾಮದ ರಾಮೇಗೌಡ, ರಂಗಸ್ವಾಮಿ, ಶಿವಮ್ಮ, ಜ್ಯೋತಿ, ರಂಗಸ್ವಾಮಿ ಇದ್ದರು
ಈತನ ವಿದ್ಯಾಭ್ಯಾಸ 10ನೇ ತರಗತಿ.
ದೇವರಾಜ ಗೌಡ ಸುಳ್ಳು ಅಂಕಪಟ್ಟಿಗಳ ಮೂಲಕ ಪದವಿ ಹಾಗೂ ಎಲ್.ಎಲ್.ಬಿ ಯನ್ನು ಪೂರ್ಣಗೊಳಿಸಿ ವಕೀಲನಾಗಿ ನೊಂದಾಯಿಸಿಕೊಂಡು ಬೆಂಗಳೂರಿನಲ್ಲಿ ಆರ್‌ಬಿಐ ಅಸ್ತ್ರವನ್ನ ಹಿಡಿದು ಹಲವು ಅಧಿಕಾರಿಗಳು ಮತ್ತು ರಿಯಲ್ ಎಸ್ಟೇಟ್ ಉದ್ಯಮಿಗಳು ಹಾಗೂ ರಾಜಕಾರಣಿಗಳನ್ನು ಬೆದರಿಸಿ ಅಕ್ರಮವಾಗಿ ಹಣ ಸಂಪಾದನೆ ಮಾಡುತ್ತಿದ್ದಾನೆ ಎಂದು ವಿಚ್ಛೇದಿತ ಪತ್ನಿ ಭಾಗ್ಯ ಆರೋಪಿಸಿದರು