

ಹಾಸನ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಸುಳ್ಳು ಆಪಾದನೆ ಮಾಡಿ ಅವರ ವ್ಯಕ್ತಿತ್ವಕ್ಕೆ ಮಸಿ ಬಳಿಯಲು ಹೊರಟಿದ್ದಂತಹ ಬಿಜೆಪಿ ಮತ್ತು ಜೆಡಿಎಸ್ ನಾಯಕರ ಪಿತೂರಿಗೆ ಜನರು ಉಪಚುನಾವಣೆಯಲ್ಲಿ ತಕ್ಕ ಪಾಠ ಕಲಿಸಿದ್ದಾರೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಸಿ. ಮಹದೇವಪ್ಪ ತಿಳಿದರು
ಸುದ್ದಿಗಾರರೊಂದಿಗೆ ಮಾತನಾಡಿದ ಶನಿವಾರ ಅವರು, ಸಿದ್ದರಾಮಯ್ಯ ಅವರ ಮೇಲೆ ಸುಳ್ಳು ಆರೋಪ ಮಾಡಿ ಸುಳ್ಳುನ್ನು ಸತ್ಯ ಎಂದು ಬಿಂಬಿಸಲು ಹೊರಟಿದ್ದ ವಿರೋಧ ಪಕ್ಷದವರಿಗೆ ಜನರು ತಕ್ಕ ಉತ್ತರವನ್ನು ನೀಡಿದ್ದಾರೆ. ಇದರಿಂದ ಮುಖ್ಯಮಂತ್ರಿ ಅವರ ನಾಯಕತ್ವ ಮತ್ತು ಅವರ ಅಭಿವೃದ್ಧಿ ಕಾರ್ಯಗಳಿಗೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು
ಬಿಜೆಪಿ ಮತ್ತು ಜೆಡಿಎಸ್‌ಅವರು ಕಿಳಿ ಮಟ್ಟದ ನಡೆ, ಸರ್ವಾಧಿಕಾರಿ ವರ್ತನೆಯನ್ನು ಜನರು ತಿರಸ್ಕಾರ ಮಾಡಿ, ನಮಗೆ ಆಶೀವಾದ ಕೊಟ್ಟಿದ್ದಾರೆ. ಈ ಚುನಾವಣೆಯ ಮೂಲಕ ವಿರೋಧಿಗಳಿಗೆ ನೇರವಾಗಿ ಉತ್ತರ ನೀಡಿದ್ದಾರೆ ಎಂದರು.
ಮೂಡ ಹಗರಣವನ್ನು ಮುಂದಿಟ್ಟುಕೊಂಡು ಸಿಎಂ ಅವರ ನಾಯಕತ್ವಕ್ಕೆ ಮತ್ತು ಸರ್ಕಾರವನ್ನು ಅಸ್ಥಿರಗೊಳಿಸಿ ಬಿಜೆಪಿ ಆಪರೇಷನ್ ಕಮಲದ ಮೂಲಕ ಸರ್ಕಾರ ರಚನೆಗೆ ಮುಂದಾಗಿದ್ದರು. ಆದರೆ ಜನರು ಸರ್ಕಾರದ ಯೋಜನೆಗಳು, ಅಭಿವೃದ್ಧಿಯ ಚಿಂತನೆ ಮತ್ತು ಜನರ ಪರವಾದಂತಹ ಕಾರ್ಯಕ್ರಮಗಳನ್ನ ಮಾಡುತ್ತಿರುವಂತಹ ಸಿದ್ದರಾಮಯ್ಯ ಅವರಿಗೆ ಬೆಂಬಲ ವ್ಯಕ್ತಪಡಿಸುವ ಮೂಲಕ ಮೂರು ಕ್ಷೇತ್ರವನ್ನ ಕಾಂಗ್ರೆಸ್ ಗೆಲ್ಲುವಲ್ಲಿ ಯಶಸ್ವಿಯಾಗಿದೆ ಎಂದು ಹೇಳಿದರು.
ಇದರಿಂದ ವಿರೋಧ ಪಕ್ಷದವರಿಗೆ ಜನರು ಸ್ಪಷ್ಟ ಸಂದೇಶವನ್ನು ನೀಡಿದ್ದಾರೆ. ರಾಜ್ಯದ ಅಭಿವೃದ್ಧಿಗೆ ಬಗ್ಗೆ ಚಿಂತನೆ, ಸರ್ಕಾರಕ್ಕೆ ರಚನಾತ್ಮಕ ಟೀಕೆ ಮಾಡಿ ಮತ್ತು ಸರ್ಕಾರಕ್ಕೆ ಸಲಹೆ ಸೂಚನೆಗಳನ್ನು ನೀಡಿ ಎನ್ನುವ ಮೂಲಕ ಈ ಚುನಾವಣೆಯಲ್ಲಿಉತ್ತರ ನೀಡಿದ್ದಾರೆ. ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಅದ್ಭುತ ಪೂರ್ವ ಗೆಲುವು ದೊರಕಲು ಸರ್ಕಾರದ ಯೋಜನೆಗಳು 5 ಗ್ಯಾರಂಟಿಗಳು ಮತ್ತು ಒಗ್ಗಟ್ಟಿನಿಂದ ಎಲ್ಲಾ ಸಚಿವರು ಶಾಸಕರು ಮತ್ತು ಪಕ್ಷದ ಮುಖಂಡರು ಶ್ರಮವಹಿಸಿ ಕೆಲಸ ಮಾಡಿದ್ದರಿಂದ ಈ ಗೆಲುವು ಲಭಿಸಿತು. ಇದು ಸರ್ಕಾರಕ್ಕೆ ಮತ್ತಷ್ಟು ಶಕ್ತಿಯನ್ನು ನೀಡುವ ಮೂಲಕ ಜನರ ಪರವಾಘಿ ಕೆಲಸ ಮಾಡಲು ಉತ್ಸಾಹ ಬಂದಿದೆ ಎಂದರು.
ನಾನು ಹಾಸನ ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದ ಸಂದರ್ಭದಲ್ಲಿ ಶಿರಡಿ ಘಾಟ್‌ರಸ್ತೆ , ದುದ್ದ ರಸ್ತೆ ಸೇರಿದಂತೆ ಸಾಕಷ್ಟು ಅನುದಾನಗಳನ್ನು ತಂದು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಶ್ರಮಿಸಿದ್ದೆ. ಕೆಲವು ವರ್ಷಗಳ ನಂತರ ನಾನು ಹಾಸನಕ್ಕೆ ಬಂದಿದ್ದೇನೆ ಎಂದರು.
ಹಾಸನದಲ್ಲಿ ಡಿ.5 ಸ್ವಾಭಿಮಾನಿ ಸಮಾವೇಶ:
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಭಿಮಾನಿಗಳು ಮತ್ತು ಸ್ವಾಭಿಮಾನಿ ಸಂಘಟನೆ ವತಿಯಿಂದ ಡಿ.5ರಂದು ಹಾಸನದಲ್ಲಿ ಬೃಹತ್ ಸ್ವಾಭಿಮಾನಿ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಚಿವ ಮಹದೇವಪ್ಪ ತಿಳಿಸಿದರು
ಮೈಸೂರು, ಮಂಡ್ಯ, ಹಾಸನ, ಚಾಮರಾಜನಗರ, ಕೊಡಗು, ಚಿಕ್ಕಮಂಗಳೂರು ಜಿಲ್ಲೆಗಳನ್ನು ಒಳಗೊಂಡಂತೆ ಹಾಸನದಲ್ಲಿ ಈ ಬೃಹತ್ ಸಮಾವೇಶವನ್ನ ಆಯೋಜನೆ ಮಾಡುವಂತೆ ಸ್ವಾಭಿಮಾನಿ ಸಂಘಟನೆಯ ಮುಖಂಡರು ಮನವಿ ಮಾಡಿದ್ದರು. ಆ ಹಿನ್ನೆಲೆಯಲ್ಲಿ ಅವರಿಗೆ ಬೆಂಬಲ ಸೂಚಿಸಿ ನಾವು ಸಚಿವರು ಎಂದು ಹಾಸನಕ್ಕೆ ಆಗಮಿಸಿ ಸಾಧಕ ಬಾಧಕಗಳನ್ನು ಚರ್ಚೆ ಮಾಡಿ ಜಾಗ ನಿಗದಿ ಮಾಡಲಾಗಿದೆ. ಇದು ರಾಜಕೀಯ ಮತ್ತು ಪಕ್ಷದ ಕಾರ್ಯಕ್ರಮವಲ್ಲ ಎಂದು ಸ್ಪಷ್ಟಪಡಿಸಿದರು.
ಈ ಹಿಂದೆ ಅಹಿಂದ ಸಮಾವೇಶವನ್ನು ಮಾಡಿದ್ದೆವು, ಅದೇ ರೀತಿ ಈಗ ಸ್ವಾಭಿಮಾನಿ ಸಮಾವೇಶವನ್ನು ಮಾಡುತ್ತಿದ್ದೇವೆ. ಸಿದ್ದರಾಮಯ್ಯ ಅವರು 14 ಬಜೆಟ್ ತನ್ನ ಕೊಟ್ಟಿದ್ದಾರೆ. ಅಂತಹ ಮಹಾನ್ ನಾಯಕನಿಗೆ ಬೆಂಬಲ ಮತ್ತು ಧನ್ಯವಾದವನ್ನು ಹೇಳಲು ಈ ಸಮಾವೇಶ ಮಾಡುತ್ತಿದ್ದೇವೆ. ಇದು ಶಕ್ತಿಯ ಪ್ರದರ್ಶನವಲ್ಲ, ಸಿದ್ದರಾಮಯ್ಯ ಅವರೇ ಒಂದು ಶಕ್ತಿ ಎಂದು ಹೇಳಿದರು
ಆರು ಜಿಲ್ಲೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಅವರ ಅಭಿಮಾನಿಗಳು ಮತ್ತು ಕಾರ್ಯಕರ್ತರು ಆಗಮಿಸಲಿದ್ದಾರೆ. ಆ ಹಿನ್ನೆಲೆಯಲ್ಲಿ ಬೃಹತ್ ಕಾರ್ಯಕ್ರಮವನ್ನು ಸಂಘಟನೆ ಮಾಡಲಿದ್ದು, ಅದಕ್ಕೆ ಬೆಂಬಲವಾಗಿ ನಾವುಗಳು ನಿಲ್ಲಲಿದ್ದೇವೆ ಎಂದರು