

ಚಾಮರಾಜನಗರ: ಚಾಮರಾಜನಗರ ತಾಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ನ ನಿರ್ದೇಶಕರ ಸ್ಥಾನಕ್ಕೆ ಚುನಾಯಿತರಾಗಿರುವ ಬಿಜೆಪಿ ಬೆಂಬಲಿತರನ್ನು ಬುಧವಾರ ಸನ್ಮಾನಿಸಲಾಯಿತು.
ನಗರದ ಬಿಜೆಪಿ ಕಚೇರಿಯಲ್ಲಿ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಪಿಕಾರ್ಡ್ ನೂತನ ನಿರ್ದೇಶಕ ಎಚ್.ಎಂ.ಬಸವಣ್ಣ, ಬಿ.ಮಹದೇವಪ್ಪ, ಮಹಾದೇವನಾಯಕ್, ಎ.ದೊರೆಸ್ವಾಮಿ, ರೇವಣ್ಣ, ಎಂ.ಎಲ್.ನಂದೀಶ್, ಶ್ರೀಕಂಠಪ್ರಸಾದ, ಪ್ರವೀಣನಾಯ್ಕ ನಿಂಗೇಗೌಡ ಅವರನ್ನು ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್.ಮಹೇಶ್ ಅಭಿನಂದಿಸಿದರು.
ಈ ವೇಳೆ ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎಂ.ರಾಮಚಂದ್ರ, ಮುಖಂಡರಾದ ವೃಷಭೇಂದ್ರಪ್ಪ, ನೂರೊಂದುಶೆಟ್ಟಿ, ಎಚ್.ಎಂ.ಬಸವಣ್ಣ, ಹೊನ್ನೂರು ಮಹದೇವಸ್ವಾಮಿ, ಬಾಲರಾಜು, ಕಾಡಳ್ಳಿ ಕುಮಾರ್, ರವೀಶ್, ಮಲ್ಲೇಶ್, ನಾಗೇಂದ್ರ, ಬಸವರಾಜಪ್ಪ, ಚಂದ್ರಪ್ಪ, ಪುಟ್ಟಮಲ್ಲಪ್ಪ ಇತರರಿದ್ದರು.