ಬಿಜೆಪಿ ಬೆಂಬಲಿತರ ಗೆಲುವಿಗೆ ಸಹಕರಿಸಿ

IMG-20241115-WA0364
Published on

ಅರಸೀಕೆರೆ ಗ್ರಾಮಾಂತರ : ನಗರಸಭೆ ಉಪಚುನಾವಣೆಯಲ್ಲಿ ಬಿಜೆಪಿ ಬೆಂಬಲಿತರ ಗೆಲುವಿಗೆ ಸಹಕರಿಸಬೇಕು ಎಂದು ಪಕ್ಷದ ನಗರ ಅಧ್ಯಕ್ಷ ಅವಿನಾಶ ನಾಯ್ಡು ಹೇಳಿದರು. ಶುಕ್ರವಾರ ನಗರದ ವಾರ್ಡ್‌ಗಳಲ್ಲಿ ಸಂಚರಿಸಿ, ಮನೆ ಮನೆಗೆ ತೆರಳಿ ಕರಪತ್ರ ನೀಡಿ ಮತಯಾಚಿಸಿ ಅವರು ಮಾತನಾಡಿದರು.

15ನೇ ವಾರ್ಡಿನಲ್ಲಿ ಅತಿ ಚಿಕ್ಕ ವಯಸ್ಸಿನ ಅಭ್ಯರ್ಥಿ ಕೆ.ಕೆ. ಜೀವನ್ ಕುಮಾರ್ ಸ್ಪರ್ಧಿಸಿದ್ದಾರೆ. ಅವರಿಗೆ ಮತ ನೀಡುವ ಮೂಲಕ ಪಕ್ಷದ ಆಶಯಗಳಿಗೆ ಬೆಂಬಲಿಸಬೇಕು ಎಂದು ಮನವಿ ಮಾಡಿದರು. ಪಕ್ಷದ ಗ್ರಾಮಾಂತರ ಅಧ್ಯಕ್ಷ ಯತೀಶ್, ಕಾರ್ಯದರ್ಶಿ ಮಂಜುನಾಥ, ತಾಲೂಕು ಬಿಜೆಪಿ ಮಹಿಳಾ ಕಾರ್ಯದರ್ಶಿ ಸಿಂಧು, ಜಿಲ್ಲಾ ಉಪಾಧ್ಯಕ್ಷೆ ಚಂದ್ರಕಲಾ, ತಾಪಂ ಮಾಜಿ ಸದಸ್ಯರಾದ ಉಮಾ ಕುಮಾರ್, ರಾಜನಾಯ್ಕ, ಗ್ರಾಮಾಂತರ ಮಹಿಳಾ ಮೋರ್ಚಾ ಅಧ್ಯಕ್ಷೆ ಸರೋಜಮ್ಮ, ಮುಖಂಡರಾದ ಸುನಿಲ್, ರಾಕಿ, ಹಾಗೂ ಕಿರಣ್ ಕುಮಾರ್ ಮತಯಾಚನೆ ಕಾರ್ಯದಲ್ಲಿ ಭಾಗಿಯಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net