ಬಿಜೆಪಿ ಬೂತ್ ವಿಜಯ್ ಅಭಿಯಾನ ಸಭೆ

BJP Bhoot
Published on

ಹುಬ್ಬಳ್ಳಿ: ಜನೆವರಿ 2ರಿಂದ 12ರ ವರೆಗೆ ನಗರದಲ್ಲಿ ನಡೆಯಲಿರುವ ಬೂತ್ ವಿಜಯ್ ಅಭಿಯಾನದ ಪೂರ್ವಭಾವಿ ಸಭೆ ಇಲ್ಲಿಯ ದೇಶಪಾಂಡೆನಗರದ ಪಕ್ಷದ ಕಚೇರಿಯಲ್ಲಿ ಗುರುವಾರ ನಡೆಯಿತು.

ಸೆಂಟ್ರಲ್ ಕ್ಷೇತ್ರದ ಪ್ರಮುಖ ಪದಾಧಿಕಾರಿಗಳು ಒಳಗೊಂಡ ಸಭೆಯಲ್ಲಿ ಮಾತನಾಡಿದ ಕೆಎಸ್​ಡಿಎಲ್ ನಿರ್ದೇಶಕ ಮಲ್ಲಿಕಾರ್ಜುನ ಸಾವಕಾರ, ಬಿಜೆಪಿ ಜನರ ಸೇವೆ ಮತ್ತು ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿದೆ. ಒಂದೆಡೆ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ದೇಶ ಪ್ರಗತಿಯತ್ತ ಸಾಗಿದೆ. ಇನ್ನೊಂದೆಡೆ ರಾಜ್ಯ ಸರ್ಕಾರ ಕೂಡ ಜನರ ಅಭಿವೃದ್ಧಿ ಮತ್ತು ಸೇವೆಗೆ ಬದ್ಧವಾಗಿದೆ ಎಂದರು.

ರಾಜ್ಯ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ ಮಾತನಾಡಿ, ಬೂತ್ ವಿಜಯ್ ಅಭಿಯಾನದ ಮಾಹಿತಿ ನೀಡಿದರು.

ಬಿಜೆಪಿ ರಾಜ್ಯ ಕಾರ್ಯದರ್ಶಿ, ಹá-ಧಾ ಉಸ್ತುವಾರಿ ಸುಧಾ ಜಯಾರುದ್ರೇಶ, ಮಹಾನಗರ ಜಿಲ್ಲಾಧ್ಯಕ್ಷ ಸಂಜಯ ಕಪಟಕರ, ದತ್ತಮೂರ್ತಿ ಕುಲಕರ್ಣಿ, ವೀರುಪಾಕ್ಷ ರಾಯನಗೌಡ್ರ, ಗೋಪಾಲ ಬದ್ದಿ, ವಿಜಯಲಕ್ಷಿ ತಿಮ್ಮೊಲಿ, ಅಕ್ಕಮ್ಮ ಹೆಗಡೆ, ಅಶೋಕ ವಾಲ್ಮೀಕಿ, ವಸಂತ ನಾಡಜೋಶಿ, ಸುಭಾಸ ಅಂಕಲಕೋಟಿ, ರಾಮನಾಥ ಶೆಣೈ, ಮಹೇಶ ಬುರ್ಲಿ, ಕೃಷ್ಣಾ ಗಂಡಗಾಳೇಕರ, ವಿಶ್ವನಾಥ ಪಾಟೀಲ, ಮೋಹನ ರಾಮದುರ್ಗ, ಸೆಂಟ್ರಲ್ ಕ್ಷೇತ್ರದ ಪ್ರಮುಖ ಪದಾಧಿಕಾರಿಗಳು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net