

ಬಾಗಲಕೋಟೆ: ಧರ್ಮ, ರಾಷ್ಟ್ರ ರಕ್ಷಣೆಯಲ್ಲಿ ಬಿಜೆಪಿ ಪಕ್ಷವು ಬದ್ಧತೆ ಇರುವ ಏಕೈಕ ರಾಷ್ಟ್ರೀಯ ಪಕ್ಷವಾಗಿದೆ. ತನ್ನ ಸೇವಾ ಗುಣಗಳಿಂದ ಜನ ಸಾಮಾನ್ಯರ ಪಕ್ಷವಾಗಿ ಗುರುತಿಸಿಕೊಂಡಿದೆ ಎಂದು ವಿ.ಪ ಸದಸ್ಯ ಪಿ.ಎಚ್.ಪೂಜಾರ ಹೇಳಿದರು.
ನಗರದ ತಮ್ಮ ಜನ ಸಂಪರ್ಕ ಕಾರ್ಯಾಲಯದಲ್ಲಿ ಮಂಗಳವಾರ ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಬಿಜೆಪಿ ಸ್ಪಷ್ಟವಾದ ಸೈದ್ದಾಂತಿಕ ಪಕ್ಷ. ಚುನಾವಣೆ ದೃಷ್ಟಿಕೋನದಿಂದ ಈ ಪಕ್ಷ ಜನ್ಮ ತಾಳಿಲ್ಲ. ರಾಷ್ಟ್ರಪ್ರೇಮ, ಜನ ಜಾಗೃತಿ, ಸಾಮಾಜಿಕ ಬದ್ಧತೆ ಅಳವಡಿಸಿಕೊಂಡು ಬೆಳೆದು ನಿಂತಿದೆ. ವಿಶ್ವದ ಅತೀ ದೊಡ್ಡ ಪಕ್ಷವಾಗಿ ಬಿಜೆಪಿ ಹೊರಹೊಮ್ಮಿದೆ. ಪಕ್ಷ ಕಟ್ಟಿ ಬೆಳೆಸಲು ಅನೇಕರು ತ್ಯಾಗ, ಬಲಿದಾನ ಸ್ಮರಣೀಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಡಾ.ಶೇಖರ ಮಾನೆ, ವಿರೂಪಾಕ್ಷ ಅಮೃತಕರ, ಕುಮಾರ ಗಿರಿಜÁ, ರಾಜು ಚಿತ್ತವಾಡಗಿ, ಮಲ್ಲಿಕಾರ್ಜುನ ಸುರಪುರ , ಡಾ.ಕೃಷ್ಣ ಚೌದರಿ, ಡಾ.ಸುಽÃರ ಜಾಧವ, ರಾಜು ಶ್ರೀರಾಮï, ರಾಜು ಗೌಳಿ, ಶೈಲೂ ಅಂಗಡಿ, ವಿನಾಯಕ ದೇಸಾಯಿ , ಮಂಜುನಾಥ ಬಳೂರಗೆ, ಹುಲಿಗೆಪ್ಪ ಗುರಿಕಾರ, ಮಂಜುನಾಥ ಚವ್ಹಾಣ, ರಾಹುಲ ಶಟವಾಜಿ ಇದ್ದರು.