

ಹಾಸನ: 78ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಬಿಜೆಪಿ ಪಕ್ಷದ ವತಿಯಿಂದ ಹರ್ ಘರ್ ತಿರಂಗ ಅಭಿಯಾನ ಹಿನ್ನಲೆಯಲ್ಲಿ ಹಲವು ಕಾರ್ಯಕ್ರಮಗಳನ್ನ ಹಮ್ಮಿಕೊಳ್ಳಲಾಗಿದೆ ಎಂದು ತಿರಂಗ ಯಾತ್ರೆಯ ರಾಜ್ಯ ಸಹ ಸಂಚಾಲಕ ಹರ್ಷಿತ್ ತಿಳಿಸಿದರು.
ತಿರಂಗ ಯಾತ್ರೆ ಪ್ರಯುಕ್ತ ಆ.13 ರಂದು ನಗರದ ಕುವೆಂಪು ಬಡಾವಣೆಯಲ್ಲಿರುವಂತಹ ಸೈನಿಕರ ಸ್ಮಾರಕದ ಪುತ್ಥಳಿಯ ಸ್ವಚ್ಛತೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.ನಂತರ ಆ.14ರಂದು ಯುವ ಮೋರ್ಚಾದಿಂದ ಬೃಹತ್ ಬೈಕ್ ರ‌್ಯಾಲಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ನಂತರ ಸಂಜೆ ದೇಶ ವಿಭಜನೆಯ ಕರಾಳ ದಿನಗಳ ಕುರಿತು ವಿಭಜನ್ ವಿಭಿಷಕ್ ಸ್ಮೃತಿ ದಿವಸ್ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಅಲ್ಲದೆ ಜಿಲ್ಲೆಯ ಪ್ರತಿ ಮನೆ ಮನೆಗೆ ತೆರಳಿ ರಾಷ್ಟ್ರಧ್ವಜವನ್ನ ವಿತರಿಸಿ ಧ್ವಜವನ್ನು ಹಾರಿಸುವ ಮೂಲಕ ತಮ್ಮ ಪೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವಂತೆ ವಿನಂತಿಸಿದರು.
ಮೈಸೂರಿನಲ್ಲಿ ನಡೆದ ಪಾದಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಪ್ರೀತಂ ಗೌಡರ ಗೈರು ಬಗ್ಗೆ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರೀತಂ ಗೌಡರು ಮತ್ತು ನಾನು ಸೇರಿದಂತೆ ಹಲವು ಮುಖಂಡರಿಗೆ ಬೆಂಗಳೂರಿನಲ್ಲಿ ತಿರಂಗ ಯಾತ್ರೆಯ ಬಗ್ಗೆ ಸಭೆ ನಡೆಸುವಂತೆ ಸೂಚನೆ ನೀಡಲಾಗಿತ್ತು. ಅದರಂತೆ ಆ ಕಾರ್ಯಕ್ರಮದಲ್ಲಿ ಭಾಗವಹಿಸಿರಲಿಲ್ಲ, ಅದನ್ನು ಬಿಟ್ಟು ಪಕ್ಷದ ನಾಯಕರಾಗಲಿ ಅಥವಾ ಬೇರೆ ಯಾರು ಕೂಡ, ಸಮಾರಂಭಕ್ಕೆ ಗೈರು ಹಾಜರಾಗುವಂತೆ ಯಾವುದೇ ನಿರ್ದೇಶನ ನೀಡಿರಲಿಲ್ಲ ಎಂದು ಸ್ಪಷ್ಟಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಅಮಿತ್ ಶೆಟ್ಟಿ, ಗಿರೀಶ್, ಪುನೀತ್, ಮಂಜು ಹಾಜರಿದ್ದರು