ಬಿಜೆಪಿ ನೇತೃತ್ವದಲ್ಲಿ ಬೃಹತ್ ಶೋಭಾಯಾತ್ರೆ

17 Dwd 3
Published on

ಧಾರವಾಡ: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಹಿನ್ನೆಲೆಯಲ್ಲಿ ನಿಧಿ ಸಮರ್ಪಣಾ ಅಭಿಯಾನದ ಅಂಗವಾಗಿ ನಗರದಲ್ಲಿ ಭಾನುವಾರ ಶೋಭಾಯಾತ್ರೆ ಆಯೋಜಿಸಲಾಗಿತ್ತು.

ನಗರದ ಕೊಪ್ಪದಕೇರಿಯ ಶಿವಾಲಯದಿಂದ ಹಮ್ಮಿಕೊಂಡಿದ್ದ ಶೋಭಾಯಾತ್ರೆಗೆ ಮುರುಘಾಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಚಾಲನೆ ನೀಡಿದರು.

ಭವ್ಯ ಮಂದಿರ ನಿರ್ವಣದ ಸಂಕಲ್ಪದೊಂದಿಗೆ ಹೊರಟ ಶೋಭಾಯಾತ್ರೆಯಲ್ಲಿ ನೂರಾರು ರಾಮಭಕ್ತರು, ಬಿಜೆಪಿ ಪ್ರಮುಖರು, ಕಾರ್ಯಕರ್ತರು ಪಾಲ್ಗೊಂಡಿದ್ದರು. ಕೊಪ್ಪದಕೇರಿ, ಸೈದಾಪುರ, ಮಾಳಾಪುರ, ಕಮಲಾಪುರ, ಮರಾಠಾ ಕಾಲನಿ, ಶಿವಾಜಿ ವೃತ್ತ, ಮದಿಹಾಳ, ರಾಜನಗರ, ಮೋರೆ ಪ್ಲಾಟ್, ಮುರುಘಾಮಠ ಪ್ರದೇಶದಲ್ಲಿ ಸಂಚರಿಸಿತು. ಶ್ರೀರಾಮನ ಬೃಹತ್ ಭಾವಚಿತ್ರಕ್ಕೆ ವಿವಿಧ ಬಡಾವಣೆಯ ಭಕ್ತರು ಪುಷ್ಪವೃಷ್ಟಿಯ ಮೂಲಕ ಬರಮಾಡಿಕೊಂಡರು.

ಶಾಸಕ ಅಮೃತ ದೇಸಾಯಿ, ಮಾಜಿ ಶಾಸಕಿ ಸೀಮಾ ಮಸೂತಿ, ಮುಖಂಡರಾದ ಡಾ. ಎಸ್.ಆರ್. ರಾಮನಗೌಡರ, ಈರೇಶ ಅಂಚಟಗೇರಿ, ತವನಪ್ಪ ಅಷ್ಟಗಿ, ಅರವಿಂದ ಏಗನಗೌಡರ, ಈರಣ್ಣ ಹಪ್ಪಳಿ, ಮೋಹನ ರಾಮದುರ್ಗ, ಪ್ರಕಾಶ ಗೊಡಬೋಲೆ, ಸುನೀಲ ಮೋರೆ, ಅನಸೂಯಾ ಹಿರೇಮಠ, ವಿನಾಯಕ ಗೊಂದಳಿ, ಮುತ್ತು ಬನ್ನೂರ, ಇತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net