ಬಿಜೆಪಿ ನಾಯಕಿ ಡಾ.ಸೋನಾಲಿ ಸರ್ನೋಬತ್ ಆಗ್ರಹ

28Khanapur1
ಖಾನಾಪುರದಲ್ಲಿ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಬಿಜೆಪಿ ನಾಯಕಿ ಡಾ.ಸೋನಾಲಿ ಸರ್ನೋಬತ್ ಮಾತನಾಡಿದರು. ಸಂಜಯ ಕುಬಲ, ಪ್ರಮೋದ ಕೋಚೇರಿ ಇತರರಿದ್ದರು.
Published on

ಖಾನಾಪುರ: ಕಾರ್ಯಕರ್ತರೇ ಪಕ್ಷದ ಉಸಿರು. ಒಂದು ರೀತಿಯಲ್ಲಿ ಅವರು ಪಕ್ಷದ ಮೂಲಕ ಸಮಾಜ ಮತ್ತು ರಾಷ್ಟ್ರಕ್ಕೆ ಸೇವೆ ಸಲ್ಲಿಸುತ್ತಿದ್ದಾರೆ. ಬಿಜೆಪಿ ಕಾರ್ಯಕರ್ತರ ಮೇಲೆ ಹೆಚ್ಚುತ್ತಿರುವ ಹಲ್ಲೆಗಳನ್ನು ತಡೆಯಲು ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ನಾಯಕಿ ಡಾ.ಸೋನಾಲಿ ಸರ್ನೋಬತ್ ಆಗ್ರಹಿಸಿದರು.

ತಾಲೂಕು ಬಿಜೆಪಿ ವತಿಯಿಂದ ಪಟ್ಟಣದ ಲಕ್ಷ್ಮೀ ಮಂದಿರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಯುವಮೋರ್ಚಾ ಕಾರ್ಯಕರ್ತ ಪ್ರವೀಣ ನೆಟ್ಟಾರ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು.

ಇಂತಹ ಘಟನೆ ಗಳಲ್ಲಿ ಭಾಗಿಯಾಗಿರುವ ವಿಧ್ವಂಸಕ ಶಕ್ತಿಗಳನ್ನು ಶಾಶ್ವತವಾಗಿ ನಾಶಪಡಿಸಲು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾ ಉಪಾಧ್ಯಕ್ಷ ಪ್ರಮೋದ ಕೋಚೇರಿ ಮನವಿ ಮಾಡಿದರು. ತಾಲೂಕು ಅಧ್ಯಕ್ಷ ಸಂಜಯ ಕುಬಲ, ಹಿರಿಯ ಮುಖಂಡರಾದ ವಿಠ್ಠಲ ಹಲಗೇಕರ, ಪಂಡಿತ ಓಗ್ಲೆ, ಬಾಬುರಾ ದೇಸಾಯಿ, ಜಯಂತ ತಿನಯ್ಕೀರ, ರಾಜೇಂದ್ರ ರೈಕ, ಕಿರಣ ಯಳ್ಳೂರಕರ, ಬಸವರಾಜ ಸಾಣಿಕೋಪ್ಪ, ಗುಂಡು ತೋಪಿನಕಟ್ಟಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net