ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ಚಿಕ್ಲಿ (ಜೆ) ಗ್ರಾಪಂ ಸದಸ್ಯರು

IMG-20230813-WA0021
Published on

ಔರಾದ್: ಚಿಕ್ಲಿ (ಜೆ) ಗ್ರಾಪಂ ಸದಸ್ಯರು ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಬೀದರ್ ನಗರದ ರವಿ ಸ್ವಾಮಿ ಅವರ ಗೃಹ ಕಚೇರಿಯಲ್ಲಿ  ಕಾಂಗ್ರೇಸ್ ಮುಖಂಡ ಡಾ.ಭೀಮಸೇನರಾವ ಸಿಂಧೆ ಧ್ವಜ ಕೊಟ್ಟು ಪಕ್ಷಕ್ಕೆ ಬರಮಾಡಿಕೊಂಡರು.

ಕಾರ್ಯಕರ್ತರಿಗೆ ಸ್ಪಂದನೆ ದೊರಕದ ಕಾರಣ ಬಿಜೆಪಿ ತೊರೆದು ಕಾಂಗ್ರೆಸ್‍ಗೆ ಸೇರ್ಪಡೆಯಾಗಿದ್ದೇವೆ ಎಂದು ಮುಖಂಡ ಕಿರಣ ಪಾಟೀಲ್ ಹೇಳಿದರು.

ಈ ಸಂದರ್ಭದಲ್ಲಿ ಮುಖಂಡರಾದ ರವಿಂದ್ರ ಸ್ವಾಮಿ, ಚಿಕ್ಲಿ (ಜೆ) ಗ್ರಾಪಂ ಅಧ್ಯಕರಾದ  ಈಶ್ವರಮ್ಮ ಸಂಜೀವರೆಡ್ಡಿ,  ಉಪಾಧ್ಯಕ್ಷ ಹನಮಂತ ಸಿಂಧೆ, ಕಿರಣ್ ಪಾಟೀಲ್, ಅಲಿಸಾಬ್ ಖುರೇಷಿ , ಗುಂಡು ಪಾಟಿಲ್, ಮಾರುತಿ ಜಾಧವ್, ಬಾಬುರಾವ್ ರಾಥೋಡ್, ಭಜರಾಮ್ ತಾಂಡಾ, ವಸಂತ್,  ಭಜರಾಮ್, ತಾಂಡಾ ಮಲ್ಲರೆಡ್ಡಿ, ದೇವ ಮಾರಾಜ್  ಸುಂಕನಾಳ,  ರಾಮಪ್ಪ , ಶಿವಪ್ಪ ಕೋಳಿ , ಸೂರ್ಯಕಾಂತ ಮಾಲೆ,  ಸುಂಕನಾಳ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net