ಬಿಜೆಪಿ ಜಿಲ್ಲಾಧ್ಯಕ್ಷರ ಮೇಲೆ ಲೋಣಿ ಅಸಮಾಧಾನ

1647234721669
Published on

ವಿಜಯಪುರ: ನಾವು ಪಕ್ಷದ ಕುರಿತು ಮಾಡುವ ಕೆಲಸಗಳಿಗೆ ಸಹಕಾರ ಸಿಗುತ್ತಿಲ್ಲ, ನಮ್ಮ ವಿಜಯಪುರ ಜಿಲ್ಲಾ ಬಿಜೆಪಿ ಅಧ್ಯಕ್ಷರ ಬಗ್ಗೆ ನನಗೆ ಅಸಮಾಧಾನವಿದೆ ಎಂದು ಬಿಜೆಪಿ ಮುಖಂಡ ರವಿಂದ್ರ ಲೋಣಿ ಹೇಳಿದ್ದಾರೆ. ವಿಜಯಪುರ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಸ್ಥಳೀಯವಾಗಿ ಸಹಕಾರ ಇಲ್ಲದರ ಬಗ್ಗೆ ಮಾಹಿತಿ ಹಂಚಿಕೊಂಡರು. ನಮ್ಮ ಜಿಲ್ಲೆಯ ಜಿಲ್ಲಾಧ್ಯಕ್ಷರ ಆರ್ ಎಸ್ ಪಾಟೀಲ್ ಕುಚಬಾಳ ಯಾಕೋ ಏನೋ ಪಕ್ಷದ ವಿವಿಧ ಪದಾಧಿಕಾರಿಗಳಿಗೆ ಅವರ ಕಾರ್ಯಗಳನ್ನು ಮಾಡಲು ಪ್ರೋತ್ಸಾಹಿಸುತ್ತಿಲ್ಲ. ನಾನು ಪಕ್ಷದ ಮಾಧ್ಯಮ ಸಹವಕ್ತಾರ ಆಗಿದ್ದೇನೆ. ನಮ್ಮ ಜಿಲ್ಲೆಯ ಸಂಸದ, ಶಾಸಕರು ಮಾಡಿದ ಅಭಿವೃದ್ಧಿ ಕೆಲಸಗಳನ್ನು ಜನರಿಗೆ ತಲುಪಿಸುವಲ್ಲಿ ನಾವು ವಿಫಲ ಆಗುತ್ತಿದ್ದೇವೆ‌. ಪಕ್ಷದ ಅಭಿವೃದ್ಧಿ ಕೆಲಸಗಳ ಬಗ್ಗೆ ಜನರಲ್ಲಿ ತಿಳುವಳಿಕ ಮೂಡಿಸುವುದು ಹಾಗೂ ವಿರೋಧ ಪಕ್ಷಗಳು ಟೀಕೆ, ಟಿಪ್ಪಣೆ ಮಾಡಿದಾಗ ಉತ್ತರಿಸುವ ಕೆಲಸ ಮಾಡಬೇಕಿತ್ತು. ಆದ್ರೆ ಈ ಕೆಲಸವನ್ನು ಜಿಲ್ಲಾಧ್ಯಕ್ಷರು ಮಾಡಿಲ್ಲ, ನಮಗೂ ಮಾಡಲು ಬಿಡುತ್ತಿಲ್ಲ ಎಂದರು. ಹಾಗಾಗಿ ನಾನು ಮಾಧ್ಯಮ ಸಹವಕ್ತಾರ ಸ್ಥಾನಕ್ಕೆ ಇಂದು ರಾಜೀನಾಮೆ ಕೊಡಲು ನಿರ್ಧರಿಸಿದ್ದೇನೆ. ಬಿಜೆಪಿ ಪಕ್ಷ ಬಹಳ ಶಿಸ್ತಿನ ಪಕ್ಷ, ಹಾಗಾಗಿ ನಾನೂ ಸಹ ಸಾಮಾನ್ಯ ಕಾರ್ಯಕರ್ತನಾಗಿಯೇ ಮುಂದುವರೆಯುತ್ತೇನೆ. ನಾನೊಬ್ಬ ಸಾಮಾನ್ಯ ಕಾರ್ಯಕರ್ತನಾಗಿ ಪಕ್ಷದ ಕಾರ್ಯಗಳ ಕುರಿತು ಪ್ರಚಾರ ಮಾಡುತ್ತೇನೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net