ಬಿಜೆಪಿ ಜನಪರ ಯೋಜನೆ ಸ್ಥಗಿತ ಖಂಡನೀಯ

web5
ಮೂಡಲಗಿ ಪಟ್ಟಣದ ಕಲ್ಮೇಶ್ವರ ಸರ್ಕಲ್‌ನಲ್ಲಿ ಪ್ರತಿಭಟನಾಕಾರರನ್ನುಉದ್ದೇಶಿಸಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಮಾತನಾಡಿದರು. ತಮ್ಮಣ್ಣ ದೇವರ, ಪ್ರಕಾಶ ಮಾದರ, ಬಸವರಾಜ ಹಿಡಕಲ್, ಶ್ರೀಶೈಲ ಪೂಜೇರಿ ಇತರರಿದ್ದರು.
Published on

ಮೂಡಲಗಿ: ಬಿಜೆಪಿ ಸರ್ಕಾರ ರೈತರಿಗಾಗಿ ತಂದ ರೈತ ಮಕ್ಕಳ ವಿದ್ಯಾನಿಧಿ, ಜಿಲ್ಲೆಗೊಂದು ಗೋಶಾಲೆ, ಕಿಸಾನ್ ಸಮ್ಮಾನ್ ನಿಧಿಗಾಗಿ ರಾಜ್ಯ ಸರ್ಕಾರ ನೀಡುತ್ತಿದ್ದ 4 ಸಾವಿರ ರೂ. ಹೀಗೆ ಹಲವಾರು ಯೋಜನೆಗಳನ್ನು ಸ್ಥಗಿತ ಮಾಡಿರುವುದು ಖಂಡನೀಯ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು.

ಪಟ್ಟಣದ ಕಲ್ಮೇಶ್ವರ ಸರ್ಕಲ್‌ನಲ್ಲಿ ಮಂಗಳವಾರ ರಾಜ್ಯ ಸರ್ಕಾರದ ವಿರುದ್ದ ಪ್ರತಿಭಟಿಸಿ ಅವರು ಮಾತನಾಡಿ, ಬೇರೆ ಬೇರೆ ಯೋಜನೆಗಳಿಗೆ ಎತ್ತಿಟ್ಟಿದ್ದ ಹಣವನ್ನು ಸರಿಯಾಗಿ ಬಳಸಿಕೊಳ್ಳದೆ ಗ್ಯಾರಂಟಿ ಯೋಜನೆಗಾಗಿ ಬಳಿಸಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕ ಬಂದ ಮೇಲೆ ರಾಜ್ಯದಲ್ಲಿ ಸುಮಾರು 42 ಜನ ರೈತರ ಆತ್ಮಹತ್ಯೆ ಪ್ರಕರಣಗಳು ವರದಿಯಾಗಿವೆ ಎಂದು ದೂರಿದರು.

ದಿನಕ್ಕೆ ಕನಿಷ್ಠ 7 ಗಂಟೆ ವಿದ್ಯುತ್ ಪೂರೈಸಬೇಕು. ಬಿಜೆಪಿ ಸರ್ಕಾರದ ಯೋಜನೆಗಳನ್ನು ಮರು ಪ್ರಾರಂಭಿಸಿ ರೈತರ ಏಳಿಗೆಗಾಗಿ ಶ್ರಮಿಸಬೇಕೆಂದರು. ಸರ್ಕಾರದ ಜನವಿರೋಧಿ ನಡೆ ಖಂಡಿಸಿ ಸೆ. 8ರಂದು ರಾಜ್ಯಾದ್ಯಂತ ತಾಲೂಕು ಕೇಂದ್ರಗಳಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದರು.

ಅರಭಾವಿ ಮಂಡಲ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ತಮ್ಮಣ್ಣ ದೇವರ, ಪ್ರಕಾಶ ಮಾದರ, ಬಸವರಾಜ ಹಿಡಕಲ್, ಶ್ರೀಶೈಲ ಪೂಜೇರಿ, ಡಾ.ಬಿ.ಎಂ.ಪಾಲಭಾಂವಿ, ಮಹಾಲಿಂಗ ವಂಟಗೂಡೆ, ಈಶ್ವರ ಮುರಗೋಡ, ಮಲ್ಲಪ್ಪ ನೇಮಗೌಡರ, ಸುರೇಶ ಸಣ್ಣಕ್ಕಿ, ಬಸನಗೌಡ ಪಾಟೀಲ, ಸಿದ್ದಪ್ಪ ಬಿಸಗುಪ್ಪಿ, ಗೌಡಪ್ಪ ಕೊಟಗಿ, ಸುರೇಶ ಈರೇಶನವರ, ಬಸವರಾಜ ನಿಡಗುಂದಿ, ಮಂಡಲ ಪದಾಧಿಕಾರಿಗಳಾದ ಶ್ರೀಕಾಂತ ಕೌಜಲಗಿ, ಬಸವರಾಜ ಗಾಡವಿ, ಸುರೇಶ ಮಠಪತಿ, ಮಹಾದೇವ ಮಸರಗುಪ್ಪಿ, ಪ್ರಭು ಹಿರೇಮಠ, ಅಡಿವೆಪ್ಪ ಕುರಬೇಟ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net