ಬಿಜೆಪಿ ಜಗತ್ತಿನ ಬೃಹತ್​ ಪಕ್ಷ

4
Published on

ಗೋಕಾಕ: ವಿಶ್ವದಲ್ಲಿ ಅತಿ ಹೆಚ್ಚು ಸದಸ್ಯತ್ವ ಹೊಂದಿದ ರಾಜಕೀಯ ಪ ಬಿಜೆಪಿ ಎಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದರು.
ನಗರದ ಸ್ವ&ಕಾರ್ಯಾಲಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಬಿಜೆಪಿ ಸದಸ್ಯತ್ವ ಅಭಿಯಾನ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಜನರನ್ನು ಪಕ್ಷದ ಸದಸ್ಯರನ್ನಾಗಿ ಮಾಡಿಸುವ ಅತಿ ದೊಡ್ಡ ಜವಾಬ್ದಾರಿ ಬೂತ್​ ಮಟ್ಟದ ಅಧ್ಯರು ಮತ್ತು ಕಾರ್ಯಕರ್ತರ ಜವಾಬ್ದಾರಿಯಾಗಿದ್ದು, ಹೆಚ್ಚಿನ ಆಸಕ್ತಿ ವಹಿಸಿ ಕೆಲಸ ನಿರ್ವಹಿಸಬೇಕು ಎಂದರು. ಬಿಜೆಪಿ ಸದಸ್ಯತ್ವ ನೋಂದಣಿ ಅಭಿಯಾನ ಪರಿಕಲ್ಪನೆಗೆ ಹೆಚ್ಚು ಮಹತ್ವ ದೊರೆತಿರುವ ಕಾರಣಕ್ಕೆ ಕಾಂಗ್ರೆಸ್​ನವರು ನಕಲು ಮಾಡುತ್ತಿರುವುದೇ ಸಾಯಾಗಿದೆ. ಗೋಕಾಕ ವಿಧಾನಸಭಾ ೇತ್ರದ ಎಲ್ಲ ಬೂತ್​ಗಳಲ್ಲಿ ಕನಿಷ್ಠ 300ಕ್ಕೂ ಅಧಿಕ ಸದಸ್ಯತ್ವ ಮಾಡಿಸಬೇಕು ಎಂದರು.

ಬಿಜೆಪಿ ಜಿಲ್ಲಾ ಗ್ರಾಮೀಣ ಅಧ್ಯ ಸುಭಾಸ ಪಾಟೀಲ ಮಾತನಾಡಿ, ಸೆ.2 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ನವದೆಹಲಿಯಲ್ಲಿ ಚಾಲನೆ ನೀಡಲಿದ್ದಾರೆ. ಎರಡು ಹಂತಗಳಲ್ಲಿ ಈ ಅಭಿಯಾನ ಜರುಗಲಿದೆ. ಬಿಜೆಪಿ ಸದಸ್ಯತ್ವ ಅಭಿಯಾನ ಯಶಸ್ವಿಗೊಳಿಸಬೇಕು ಎಂದರು. ಬಿಜೆಪಿ ಸದಸ್ಯತ್ವ ಅಭಿಯಾನ ಪ್ರಮುಖ ಡಾ.ಕೆ.ವಿ. ಪಾಟೀಲ ಹಾಗೂ ಮುಖಂಡ ಲಕ್ಷ$್ಮಣ ತಪಸಿ ಮಾತನಾಡಿದರು. ಬಿಜೆಪಿ ನಗರ ಮಂಡಲ ಅಧ್ಯ ಭೀಮಶಿ ಭರಮಣ್ಣವರ, ಗ್ರಾಮೀಣ ಅಧ್ಯ ರಾಜೇಂದ್ರ ಗೌಡಪ್ಪಗೋಳ, ನಗರಸಭೆ ಅಧ್ಯ ಪ್ರಕಾಶ ಮುರಾರಿ, ಕೊಣ್ಣೂರ ಪುರಸಭೆ ಅಧ್ಯ ವಿನೋದ ಕರನಿಂಗ, ಪದಾಧಿಕಾರಿಗಳಾದ ಎಸ್​.ವಿ. ದೇಮಶೆಟ್ಟಿ, ಶಾಮಾನಂದ ಪೂಜಾರಿ, ಬಸವರಾಜ ಹಿರೇಮಠ, ಗುರುಪಾದ ಕಳ್ಳಿ, ಶಿವಾನಂದ ಪಾಟೀಲ, ಕಿರಣ ಡಮಾಮಗರ, ಪುಂಡಲೀಕ ವಣ್ಣೂರ, ರಾಜೇಶ್ವರಿ ಒಡೆಯರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net