

ಕಲಬುರಗಿ: ಹುಬ್ಬಳ್ಳಿಯಲ್ಲಿ ಬಂಧನಕ್ಕೊಳಗಾದ ಹಿಂದು ಕಾರ್ಯಕರ್ತ ಶ್ರೀಕಾಂತ ಪೂಜಾರಿ ಬಿಡುಗಡೆಗೆ ಆಗ್ರಹಿಸಿ ಹಾಗೂ ರಾಜ್ಯದಲ್ಲಿ ರಾಮ ಭಕ್ತರ ವಿರುದ್ಧ ನಡೆದಿರುವ ದೌರ್ಜನ್ಯ ಖಂಡಿಸಿ ಜಿಲ್ಲಾ ಬಿಜೆಪಿ ಕಾರ್ಯಕರ್ತರು ನಗರದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಬುಧವಾರ ಬೃಹತ್ ಪ್ರತಿಭಟನೆ ನಡೆಸಿದರು. ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಗ್ರಾಮೀಣ ಶಾಸಕ ಬಸವರಾಜ ಮತ್ತಿಮಡು ಮಾತನಾಡಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ರಾಜ್ಯದಲ್ಲಿ ಗೂಂಡಾ ಪ್ರವೃತ್ತಿ ಹೆಚ್ಚಾಗಿದೆ. ನಿರಂತರ ಕೊಲೆ, ಅತ್ಯಾಚಾರ ಹಾಗೂ ಹಿಂದು ಕಾರ್ಯಕರ್ತರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಲಾಗುತ್ತಿದೆ ಎಂದು ಕಿಡಿಕಾರಿದರು.
ಹುಬ್ಬಳ್ಳಿಯಲ್ಲಿ ಬಂಧಿತ ಶ್ರೀಕಾಂತ ಪೂಜಾರಿಯನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದ ಅವರು, ಹಿಂದು ಕಾರ್ಯಕರ್ತರ ಮೇಲೆ ಅನಗತ್ಯ ಸುಳ್ಳು ಪ್ರಕರಣ ದಾಖಲಿಸುವ ಮೂಲಕ ಸಿದ್ದರಾಮಯ್ಯ ಸರ್ಕಾರ ಹಿಂದು ವಿರೋಧಿ ಧೋರಣೆ ಅನುಸರಿಸುತ್ತಿದೆ ಎಂದು ಹರಿಹಾಯ್ದರು.
ಬಿಜೆಪಿ ಗ್ರಾಮಾಂತರ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ್ ಮಾತನಾಡಿದರು. ಒಂದು ವೇಳೆ ಪೂಜಾರಿಯವರನ್ನು ಬಿಡುಗಡೆ ಮಾಡದಿದ್ದಲ್ಲಿ ಹಾಗೂ ರಾಮ ಭಕ್ತರ ಮೇಲೆ ಪೊಲೀಸ್ ಇಲಾಖೆ ದೌರ್ಜನ್ಯ ನಿಲ್ಲಿಸದಿದ್ದರೆ ಬಿಜೆಪಿ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಿದೆ ಎಂದು ಎಚ್ಚರಿಸಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಅಮರನಾಥ ಪಾಟೀಲ್ ಮಾತನಾಡಿದರು. ವಿಧಾನ ಪರಿಷತ್ ಸದಸ್ಯರಾದ ಶಶೀಲï ನಮೋಶಿ, ಸುನೀಲ್ ವಲ್ಲಾÈಪುರೆ, ಪ್ರಮುಖರಾದ ಅರವಿಂದ ನವಲಿ, ವಿಜಯಕುಮಾರ ಹಳಕಟ್ಟಿ, ಶಿವಯೋಗಿ ನಾಗನಹಳ್ಳಿ, ಸುಂದರ ಕುಲಕರ್ಣಿ, ರೇವಣಸಿದ್ದಪ್ಪ ಸಂಕಾಲೆ, ಶಂಭುಲಿAಗ ಬಳಬಟ್ಟಿ, ಅಂಬಾರಾಯ ಅಷ್ಟಗಿ, ಶಿವಾ ಅಷ್ಟಗಿ, ಅಶೋಕ ಬಗಲಿ, ಮಹಾದೇವ ಬೆಳಮಗಿ, ಅರುಣಕುಮಾರ ಪಾಟೀಲ್ ಕೊಡಲಹಂಗರಗಾ, ಗಿರಿರಾಜ ಯಳಮೇಲಿ, ಮಹೇಶ ಚವ್ಹಾಣ್, ಅಶೋಕ ಮಾನಕರ್, ವಿಜಯಕುಮಾರ ಮುನ್ನೋಳ್ಳಿ, ಶಶಿಕಲಾ ಟೆಂಗಳಿ, ಭಾಗೀರಥಿ ಗುನ್ನಾಪುರ, ವಿಜಯಲಕ್ಷಿö್ಮÃ ಗೊಬ್ಬುರಕರ್, ಮಹಾದೇವಿ ಕೆಸರಟಗಿ, ಶೋಭಾ ಬಾಗೇವಾಡಿ, ಅಂಬಿಕಾ, ಮೀರಾ ಚೌಡಾಪುರ, ವೀರೇಶ ಬಿರಾದಾರ್, ವಿಶ್ವನಾಥ ಪಾಟೀಲ್, ಶಶಿಧರ ಸೂಗೂರು, ಪರ್ವತರೆಡ್ಡಿ, ಹಣಮಂತ ಚವ್ಹಾಣ್ ಉದನೂರ ಇತರರಿದ್ದರು. ರಾಜ್ಯಪಾಲರಿಗೆ ಬರೆದ ಮನವಿಪತ್ರವನ್ನು ಜಿಲ್ಲಾಧಿಕಾರಿಗೆ ಸಲ್ಲಿಸಲಾಯಿತು.