

ಗುಳೇದಗುಡ್ಡ: ತಮ್ಮ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪುರಸಭೆ ಪೌರ ನೌಕರರು ಕಚೇರಿ, ಕಸ ವಿಲೇವಾರಿ, ಸ್ವಚ್ಛತೆ ಸೇರಿ ಎಲ್ಲ ಕಾರ್ಯಗಳನ್ನು ಸ್ಥಗಿತಗೊಳಸಿ ಆರಂಭಿಸಿರುವ ಅನಿರ್ದಿಷ್ಟಾವಧಿ ಮಷ್ಕರದ ಮೂರನೇ ದಿನ ಗುರುವಾರ ಮಾಜಿ ಶಾಸಕ ರಾಜಶೇಖರ ಶೀಲವಂತ ಬಿಜೆಪಿಯಿಂದ ಬೆಂಬಲ ವ್ಯಕ್ತಪಡಿಸಿದ ಪತ್ರವನ್ನು ಸಂಘದ ಅಧ್ಯಕ್ಷರಿಗೆ ನೀಡಿದರು.
ಕರ್ನಾಟಕ ರಕ್ಷಣಾ ವೇದಿಕೆ ಕೂಡ ಪೌರ ನೌಕರರ ಮುಷ್ಕರಕ್ಕೆ ಬೆಂಬಲ ನೀಡಿ, ಬುಧವಾರ ಮುಷ್ಕರ ನಿರತರಿಗೆ ಉಪಾಹಾರದ ವ್ಯವಸ್ಥೆ ಕಲ್ಪಿಸಿದರು. ಪಟ್ಟಸಾಲಿ ನೇಕಾರ ಮಹಿಳಾ ಮಂಡಳದ ವತಿಯಿಂದಲೂ ಪೌರ ನೌಕರರ ಮುಷ್ಕರಕ್ಕೆ ಬೆಂಬಲ ಸೂಚಿಸಲಾಯಿತು.
ಕಮಲಕಿಶೋರ ಮಾಲಪಾಣಿ, ಬಿಜೆಪಿ ನಗರ ಅಧ್ಯಕ್ಷ ಪ್ರಶಾಂತ ಜವಳಿ, ಶ್ರೀಕಾಂತ ಭಾವಿ, ಶಿವಾನಂದ ಯಣ್ಣಿ, ಪುರಸಭೆ ಸದಸ್ಯ ಕಾಶೀನಾಥ ಕಲಾಲ, ಮುತ್ತು ಚಿಕ್ಕನರಗುಂದ, ಶಿವು ಬಾದವಾಡಗಿ, ಶಿವು ಗೋತಗಿ, ಕರವೇ ಸದಸ್ಯರಾದ ಸಂಗಯ್ಯ ಚನಸಂಗನಮಠ, ವಿಜಯ ಕವಿಶೆಟ್ಟಿ, ಸೋಮಶೇಖರ ಕಲ್ಬುರ್ಗಿ, ಅಕ್ತರಹುಸೇನ ಅಪಘಾನ, ಮಹಿಳಾ ಮಂಡಳದ ಭಾಗ್ಯಾ ಉದ್ನೂರ, ಗಿರಿಜಾ ಕಲ್ಯಾಣಿ, ಮಲಾ ರಾಜನಾಳ ಮತ್ತಿತರರು ಇದ್ದರು.